ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಸ್ಸಾಂ ಹಿಂಸಾಚಾರ-ಸಾವಿನ ಸಂಖ್ಯೆ 40ಕ್ಕೆ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಸ್ಸಾಂ ಹಿಂಸಾಚಾರ-ಸಾವಿನ ಸಂಖ್ಯೆ 40ಕ್ಕೆ ಏರಿಕೆ
ಅಸ್ಸಾಂನ ಬೋಡೊ ಬಂಡುಕೋರರು ಮತ್ತು ಬಾಂಗ್ಲಾ ವಲಸಿಗರ ನಡುವಿನ ಕದನ ಸೋಮವಾರವೂ ಮುಂದುರಿದಿದ್ದು,ಚಿರಾಂಗ್ ಪ್ರದೇಶದಲ್ಲಿ ಮತ್ತಿಬ್ಬರು ಬಲಿಯಾಗುವುದ ರೊಂದಿಗೆ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 40ಕ್ಕೆ ಏರಿದಂತಾಗಿದೆ.

ಬಂಗಾಲಿ ಮುಸ್ಲಿಂರು ಮತ್ತು ಮುಸ್ಲಿಂಯೇತರರ ನಡುವೆ ನಡೆಯುತ್ತಿರುವ ಘರ್ಷಣೆ ತೀವ್ರ ಸ್ವರೂಪ ತಾಳಿದ್ದು,ಈಗಾಗಲೇ ಎರಡು ಸಮುದಾಯಗಳ ಒಂದು ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದ್ದು, 500ಮನೆಗಳು ಧ್ವಂಸಗೊಂಡಿದ್ದು, ನೂರಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.

ಹಲವು ಮಂದಿ 36ನಿರಾಶ್ರಿತ ಕ್ಯಾಂಪ್‌ಗಳಲ್ಲಿ ಆಶ್ರಯ ಪಡೆದಿದ್ದು,ಕೆಲವಡೆ ಕರ್ಫ್ಯೂ ಮುಂದುವರಿದಿದ್ದು ಪರಿಸ್ಥಿತಿ ಹತೋಟಿಯಲ್ಲಿರುವುದಾಗಿ ಆರ್ಮಿ ಮೂಲಗಳು ಹೇಳಿವೆ.

ಹತ್ತು ಅರೆಸೇನಾ ಪಡೆಗಳು ಸ್ಥಳದಲ್ಲಿ ನಿಯೋಜಿಸಲಾಗಿದ್ದು,ಗಲಭೆ ಪೀಡಿತ ಪ್ರದೇಶದಾದ್ಯಂತ ಹೆಲಿಕ್ಯಾಪ್ಟರ್ ಮೂಲಕ ವೀಕ್ಷಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉದಾಲ್‌ಗಿರಿ ಮತ್ತು ದರ್ರಾಂಗ್ ಜಿಲ್ಲೆಗಳಲ್ಲಿ ಮತ್ತೆ ಯಾವುದೇ ಹಿಂಸಾಚಾರ ಸಂಭವಿಸಿಲ್ಲ ಎಂದು ತಿಳಿಸಿರುವ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಆರ್ಮಿ ಪಥಸಂಚನ ನಡೆಸಿರುವುದಾಗಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪುಣೆಯಲ್ಲಿ ಮತ್ತೆ 5ಶಂಕಿತ ಉಗ್ರರ ಸೆರೆ
ಮುಂಬೈ:ರೇವ್ ಪಾರ್ಟಿ ದಾಳಿ-241 ಸೆರೆ
ವೋಟಿಗಾಗಿ ನೋಟು ಹಗರಣ-ಅಮರ್‌‌ಗೆ ಕ್ಲೀನ್ ಚಿಟ್
ಕಾಶ್ಮೀರ: 2ನೇ ದಿನ ಕರ್ಫ್ಯೂ ಮುಂದುವರಿಕೆ
ಮುಸ್ಲಿಮರಿಗಷ್ಟೇ ಏಕೆ ಉಗ್ರರ ಹಣೆಪಟ್ಟಿ:ಪವಾರ್
ನ್ಯಾನೋ ಕೈ ಜಾರಿದರೂ-ಸಮರ ಮುಂದುವರಿಕೆ:ಬುದ್ಧ