ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅ.22ಕ್ಕೆ ಚಂದ್ರಯಾನ ಉಡ್ಡಯನ:ಇಸ್ರೋ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅ.22ಕ್ಕೆ ಚಂದ್ರಯಾನ ಉಡ್ಡಯನ:ಇಸ್ರೋ
ದೇಶದ ಪ್ರಥಮ ಮಾನವರಹಿತ ಚಂದ್ರಯಾನ-I ಉಡ್ಡಯನ ಮತ್ತೆ ವಿಳಂಬವಾಗಿದ್ದು, ಅಕ್ಟೋಬರ್ 22ರಂದು ಬಾಹ್ಯಾಕಾಶ ನೆಲೆ ಶ್ರೀಹರಿಕೋಟಾದಿಂದ ಹಾರಿಸಲು ನಿರ್ಧರಿಸಿರುವುದಾಗಿ ಇಸ್ರೋ (ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗ್‌‌ನೈಸೇಶನ್) ಮೂಲಗಳು ಸೋಮವಾರ ತಿಳಿಸಿದೆ.

ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ-ಸಿ11) ರ ಮೂಲಕ ಚಂದ್ರಯಾನ-I ಉಡ್ಡಯನಕ್ಕೆ ಹವಾಮಾನ ವೈಪರೀತ್ಯದ ಅನನೂಕೂಲತೆಯ ಗಮನಿಸಿ ಅ.22ರ 6.20ಕ್ಕೆ ನಭೋ ಮಂಡಲಕ್ಕೆ ಹಾರಿ ಬಿಡಲಾಗುವುದು ಎಂದು ಮೂಲಗಳು ಹೇಳಿವೆ.

ಈ ಮಹತ್ವದ ಚಂದ್ರಯಾನದ ಯೋಜನೆಗಾಗಿ 5ವರ್ಷಗಳ ಹಿಂದೆಯೇ ಸರ್ಕಾರ 386ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಿತ್ತು. ಆದರೆ ಐತಿಹಾಸಿಕ ಉಡ್ಡಯನಕ್ಕೆ ಹಲವಾರು ಅಡ್ಡಿಆತಂಕಗಳು ಎದುರಾಗಿರುವ ಹಿನ್ನೆಲೆಯಲ್ಲಿ ವಿಳಂಬವಾಗಿರುವುದಾಗಿ ಇಸ್ರೋ ವಿಜ್ಞಾನಿಗಳ ತಂಡ ತಿಳಿಸಿದೆ.

ಮಾನವ ರಹಿತ ಚಂದ್ರಯಾನ-I ಉಡ್ಡಯನಕ್ಕಾಗಿ ರಾಜಧಾನಿಯಿಂದ ಸೆಟಲೈಟ್ ಅನ್ನು ಶ್ರೀಹರಿಕೋಟಾಕ್ಕೆ ವಿಶೇಷ ವಾಹನದಲ್ಲಿ ಕಳೆದ ವಾರ ಚೆನ್ನೈಯಿಂದ ನೂರು ಕಿ.ಮೀ.ದೂರದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದೆ.

ಚಂದ್ರಯಾನ ಯೋಜನೆಯ ತಂಡದಲ್ಲಿ ಭಾರತದ 5ಮಂದಿ ವಿಜ್ಞಾನಿಗಳು ಸೇರಿದಂತೆ ಅಮೆರಿಕ , ಯುರೋಪ್ ಮತ್ತು ಬಲ್ಗೇರಿಯಾದ ಒಟ್ಟು 11 ಮಂದಿ ಇದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಸ್ಸಾಂ ಹಿಂಸಾಚಾರ-ಸಾವಿನ ಸಂಖ್ಯೆ 40ಕ್ಕೆ ಏರಿಕೆ
ಪುಣೆಯಲ್ಲಿ ಮತ್ತೆ 5ಶಂಕಿತ ಉಗ್ರರ ಸೆರೆ
ಮುಂಬೈ:ರೇವ್ ಪಾರ್ಟಿ ದಾಳಿ-241 ಸೆರೆ
ವೋಟಿಗಾಗಿ ನೋಟು ಹಗರಣ-ಅಮರ್‌‌ಗೆ ಕ್ಲೀನ್ ಚಿಟ್
ಕಾಶ್ಮೀರ: 2ನೇ ದಿನ ಕರ್ಫ್ಯೂ ಮುಂದುವರಿಕೆ
ಮುಸ್ಲಿಮರಿಗಷ್ಟೇ ಏಕೆ ಉಗ್ರರ ಹಣೆಪಟ್ಟಿ:ಪವಾರ್