ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಸ್ಸಾಂ, ಪ. ಬಂಗಾಳದ ಮೇಲೇಕೆ ಕ್ರಮವಿಲ್ಲ?: ಆಡ್ವಾಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಸ್ಸಾಂ, ಪ. ಬಂಗಾಳದ ಮೇಲೇಕೆ ಕ್ರಮವಿಲ್ಲ?: ಆಡ್ವಾಣಿ
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಇಬ್ಬಗೆಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಒರಿಸ್ಸಾದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ನಿರ್ಧಾರ ಕೈಗೊಂಡರೆ, ಕೇಂದ್ರವು "ಭಾರೀ ಬೆಲೆ ತೆರಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದೆ.

ಅಸ್ಸಾಂನಲ್ಲಿ ಭಾರಿ ಪ್ರಮಾಣದ ಕೋಮು ಹಿಂಸಾಚಾರ ನಡೆಯುತ್ತಿದೆ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ಭಾರೀ ಹಿಂಸಾಚಾರ ನಡೆದಿದ್ದರೂ ಕೇಂದ್ರವು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಅವರು ಒರಸ್ಸಾದಲ್ಲಿ ಮಾತ್ರವೇ ರಾಷ್ಟ್ರಪತಿ ಆಳ್ವಿಕೆ ಹೇರುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಪ್ರಧಾನಮಂತ್ರಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿ ಆಕ್ಷೇಪಿಸಿದರು.

ದೆಹಲಿ ಬಿಜೆಪಿ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಆಡ್ವಾಣಿ, ಅಸ್ಸಾಂನಲ್ಲಿ ಬಾಂಗ್ಲಾದೇಶೀ ನುಸುಳುಕೋರರು ಪಾಕಿಸ್ತಾನಿ ಧ್ವಜ ಹಾರಿಸಿದ ವರದಿಗಳಿವೆ. ಈ ಕುರಿತು ತರುಣ್ ಗೊಗೊಯ್ ನೇತೃತ್ವದ ಸರಕಾರ ಮತ್ತು ಕೇಂದ್ರವು ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದರು.

ಒರಿಸ್ಸಾದಲ್ಲಿ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಕಠಿಣ ಕ್ರಮ ಕೈಗೊಂಡಿದ್ದಾರೆ ಮತ್ತು ಹಿಂಸಾಚಾರ ನಿರತರಾದ ಹಲವಾರು ಮಂದಿ ಈಗಾಗಲೇ ಜೈಲಿನಲ್ಲಿದ್ದಾರೆ. ಘಟನೆಗಳ ಬಗ್ಗೆ ರಾಜ್ಯ ಸರಕಾರ ಈಗಾಗಲೇ ನ್ಯಾಯಾಂಗ ತನಿಖೆಗೂ ಆದೇಶಿಸಿದೆ ಎಂದ ಮಾಜಿ ಉಪಪ್ರಧಾನಿ, ಪಶ್ಚಿಮ ಬಂಗಾಳದ ನಂದಿಗ್ರಾಮ ಹಾಗೂ ಅಸ್ಸಾಂನಲ್ಲಿ ಬೋಡೋ ಮತ್ತು ಬಾಂಗ್ಲಾ ವಲಸಿಗರ ಮಧ್ಯೆ ಮುಂದುವರಿಯುತ್ತಿರುವ ಹಿಂಸಾಚಾರವನ್ನು ಉಲ್ಲೇಖಿಸುತ್ತಾ, ಈ ರಾಜ್ಯಗಳ ಬಗ್ಗೆ ಯುಪಿಎ ಸರಕಾರ ಕುರುಡುತನ ಪ್ರದರ್ಶಿಸುತ್ತಿದೆ ಎಂದು ದೂರಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರವಾದದತ್ತ ಹೊರಳುತ್ತಿರುವ ಟೆಕ್ಕೀಗಳು
ಅ.22ಕ್ಕೆ ಚಂದ್ರಯಾನ ಉಡ್ಡಯನ:ಇಸ್ರೋ
ಅಸ್ಸಾಂ ಹಿಂಸಾಚಾರ-ಸಾವಿನ ಸಂಖ್ಯೆ 40ಕ್ಕೆ ಏರಿಕೆ
ಪುಣೆಯಲ್ಲಿ ಮತ್ತೆ 5ಶಂಕಿತ ಉಗ್ರರ ಸೆರೆ
ಮುಂಬೈ:ರೇವ್ ಪಾರ್ಟಿ ದಾಳಿ-241 ಸೆರೆ
ವೋಟಿಗಾಗಿ ನೋಟು ಹಗರಣ-ಅಮರ್‌‌ಗೆ ಕ್ಲೀನ್ ಚಿಟ್