ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಾಮಿಯಾ ವಿದ್ಯಾರ್ಥಿಗಳು ತಪ್ಪಿತಸ್ಥರಲ್ಲದಿದ್ದರೆ ಬೆಂಬಲ ವಾಪಸ್:ಎಸ್ಪಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾಮಿಯಾ ವಿದ್ಯಾರ್ಥಿಗಳು ತಪ್ಪಿತಸ್ಥರಲ್ಲದಿದ್ದರೆ ಬೆಂಬಲ ವಾಪಸ್:ಎಸ್ಪಿ
ದೆಹಲಿ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಯೂನಿರ್ವಸಿಟಿಯ ಇಬ್ಬರು ವಿದ್ಯಾರ್ಥಿಗಳು ಅಮಾಯಕರು ಎಂದು ತನಿಖೆಯಲ್ಲಿ ಸಾಬೀತಾದರೆ, ತಾವು ಯುಪಿಎ ಮೈತ್ರಿಕೂಟಕ್ಕೆ ನೀಡಿದ್ದ ಬೆಂಬಲವನ್ನು ವಾಪಸು ಪಡೆಯುವುದಾಗಿ ಸಮಾಜವಾದಿ ಪಕ್ಷದ ಮುಖಂಡ ಅಮರ್‌ಸಿಂಗ್ ಮಂಗಳವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿಜಕ್ಕೂ ಅವರು ಭಯೋತ್ಪಾದಕರೇ ಹೌದಾದರೆ ಅವರನ್ನು ಗುಂಡಿಕ್ಕಿ ಕೊಲ್ಲಿ ಎಂದಿರುವ ಸಿಂಗ್, ಒಂದು ವೇಳೆ ಅವರು ಅಮಾಯಕರು ಎಂದಾದಲ್ಲಿ ನೀವು ಅವರಿಗೆ ನ್ಯಾಯ ಒದಗಿಸಿಕೊಡಬಲ್ಲಿರಾ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಖಾರವಾಗಿ ಪ್ರಶ್ನಿಸಿದ್ದಾರೆ.

ಪ್ರಕರಣದ ಕುರಿತು ನ್ಯಾಯಾಂಗ ತನಿಖೆಯ ವರದಿಯಲ್ಲಿ ಆ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ಅಮಾಯಕರು ಎಂದು ತಿಳಿಸಿದೆ, ಆ ನಿಟ್ಟಿನಲ್ಲಿ ನಾವು ಯುಪಿಎ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆಯುವಲ್ಲಿ ಯೋಚಿಸುತ್ತಿರುವುದಾಗಿ ಹೇಳಿದರು.

ಅಲ್ಲದೇ ದಕ್ಷಿಣ ದೆಹಲಿಯ ಬಾಟ್ಲಾ ಬಹುಮಹಡಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿರುವ ಇನ್ಸ್‌ಪೆಕ್ಟರ್ ಶರ್ಮಾ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಹಿರಿಯ ಖ್ಯಾತ ವಕೀಲ ರಾಮ್ ಜೆಠ್ಮಲಾನಿ ಅವರು ಇಬ್ಬರು ವಿದ್ಯಾರ್ಥಿಗಳ ಪರ ವಾದಿಸಲು ಒಪ್ಪಿಗೆ ಸೂಚಿಸಿರುವುದಾಗಿಯೂ ಅಮರ್‌ಸಿಂಗ್ ಈ ಸಂದರ್ಭದಲ್ಲಿ ತಿಳಿಸಿದರು.

ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ ಬಳಿಕ ಇಬ್ಬರು ವಿದ್ಯಾರ್ಥಿಗಳ ಕಾನೂನು ಹೋರಾಟಕ್ಕೆ ತಗಲುವ ವೆಚ್ಚವನ್ನು ಭರಿಸುವುದಾಗಿ ಹೇಳಿದರು.

ಆದರೆ ಇದರರ್ಥ ನಾವು ಭಯೋತ್ಪಾದನೆಯನ್ನು ಬೆಂಬಲಿಸುತ್ತೇವೆ ಎಂದಲ್ಲ, ಆದರೆ ನಿರಪರಾಧಿಗಳು ತೊಂದರೆ ಅನುಭವಿಸುವಂತಾಗಬಾರದು ಎಂದು ಸಮಜಾಯಿಷಿಕೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಜರಂಗದಳ ಭಯೋತ್ಪಾದಕ ಸಂಘಟನೆ:ಸರ್ಕಾರ
ಕಾಶ್ಮೀರ: ಕರ್ಫ್ಯೂ ಹಿಂತೆಗೆತ
ರಿಯಾಜ್ ಭಟ್ಕಳ ಮನೆಯಲ್ಲೇ ಬಾಂಬ್ ತಯಾರಿ?
ಯುಪಿಎ ತ್ಯಜಿಸುವೆ-ಕರುಣಾನಿಧಿ ಬೆದರಿಕೆ
ಅಸ್ಸಾಂ, ಪ. ಬಂಗಾಳದ ಮೇಲೇಕೆ ಕ್ರಮವಿಲ್ಲ?: ಆಡ್ವಾಣಿ
ಉಗ್ರವಾದದತ್ತ ಹೊರಳುತ್ತಿರುವ ಟೆಕ್ಕೀಗಳು