ಕಾಂಗ್ರೆಸ್ ಪರ ಮತಚಲಾಯಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಹೆಚ್.ಟಿ.ಸಾಂಗ್ಲಿಯಾನ ಅವರ ಸದಸ್ಯತ್ವವನ್ನು ಮಂಗಳವಾರ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಅನೂರ್ಜಿತಗೊಳಿಸಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಸಂಸದ ಹೆಚ್.ಟಿ.ಸಾಂಗ್ಲಿಯಾನ ಅವರು ಜುಲೈ 23ರಂದು ಸಂಸತ್‌ನಲ್ಲಿ ಯುಪಿಎ ಸರ್ಕಾರದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ, ಅವರು ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪರ ಮತ ಚಲಾಯಿಸಿದ್ದರು.
ವಿಶ್ವಾಸಮತ ಯಾಚನೆ ವೇಳೆ ಮತವವನ್ನು ಯುಪಿಎ ಪರ ಚಲಾಯಿಸದಂತೆ ಬಿಜೆಪಿ ವಿಪ್ ಜಾರಿಗೊಳಿಸಿದ್ದರೂ ಕೂಡ ಸಾಂಗ್ಲಿಯಾನ, ಕಾಂಗ್ರೆಸ್ ಪರ ಮತ ಚಲಾಯಿಸಿ,ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು.
ಬಳಿಕ ಸಂಸದ ಸಾಂಗ್ಲಿಯಾನರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಕೋರಿ ಬಿಜೆಪಿ ಸ್ಪೀಕರ್‌ಗೆ ಮನವಿ ಸಲ್ಲಿಸಿತ್ತು. ಅಲ್ಲದೇ ಮತ್ತೊಬ್ಬ ಸಂಸದ ಸಂಸದ ರಾಮ್ ಸ್ವರೂಪ್ ಅವರ ಸದಸ್ಯತ್ವವನ್ನೂ ಪಕ್ಷಾಂತರ ವಿರೋಧಿ ನೀತಿ ಅನ್ವಯ ರದ್ದುಗೊಳಿಸಿರುವುದಾಗಿ ಚಟರ್ಜಿ ತಿಳಿಸಿದ್ದಾರೆ. |