ಕ್ರೈಸ್ತರ ಮೇಲೆ ವ್ಯಾಪಕ ಪ್ರಮಾಣದ ಹಿಂಸಾಚಾರದ ವಿಷಯವು ಬುಧವಾರ ಸಂಜೆ ನಡೆಯುವ ಕೇಂದ್ರ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ.
ಕ್ರೈಸ್ತರ ಮೇಲೆ ಭುಗಿಲೆದ್ದ ಹಿಂಸಾಚಾರದಲ್ಲಿ ಚರ್ಚ್‌ಗಳ ಮೇಲೆ ತೀವ್ರ ಹಾನಿ ಮತ್ತು ಪ್ರಾರ್ಥನಾ ಮಂದಿರಗಳ ಧ್ವಂಸದಲ್ಲಿ ಪ್ರಮುಖ ಪಾತ್ರವಹಿಸಿದೆಯೆಂದು ಹೇಳಲಾದ ಹಿಂದು ಸಂಘಟನೆ ಭಜರಂಗದಳದ ನಿಷೇಧದ ಬಗ್ಗೆ ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ.
ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಮತ್ತು ಉಕ್ಕು ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಯುಪಿಎನ ಪ್ರಭಾವಿ ವರ್ಗವು ಭಜರಂಗದಳದ ನಿಷೇಧಕ್ಕೆ ಕರೆನೀಡುವ ಸಂಭವವಿದೆ ಎಂದು ಸಂಸತ್ತಿನ ಮೂಲಗಳು ತಿಳಿಸಿವೆ. |