ಚುನಾವಣೆಯ ಕೊನೆಯ ಹಂತದವರೆಗೆ, ಮಾಧ್ಯಮಗಳ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಟಣೆಗೆ ಅಥವಾ ಪ್ರಸಾರಕ್ಕೆ ಸರಕಾರವು ನಿಷೇಧ ಹೇರಿದೆ.
ಚುನಾವಣಾ ಪೂರ್ವ ಸಮೀಕ್ಷೆಗಳು ಮತದಾರರ ಮೇಲೆ ಪ್ರಭಾವ ಬೀರುತ್ತದೆ ಎಂಬ ಉದ್ದೇಶಕ್ಕಾಗಿ ಸರಕಾರವು ಈ ನಿರ್ಧಾರಕ್ಕೆ ಮುಂದಾಗಿದೆ.
ಅಂತಿಮ ಚುನಾವಣೆ ನಡೆಯುವವರೆಗೆ ಪೂರ್ವ ಸಮೀಕ್ಷೆಯ ಪ್ರಕಟಣೆ ನಿಷೇಧಕ್ಕೆ ಕೇಂದ್ರ ಸಂಸತ್ತು ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವ ಚಿದಂಬಂರಂ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಬೆಳವಣಿಗೆಯು ಚುನಾವಣೆಯ ಪ್ರತಿ ಹಂತವೂ ಮುಕ್ತ ಮತ್ತು ಪಾರದರ್ಶಕಗೊಳಿಸುವ ಸರಕಾರದ ಪ್ರಯತ್ನವಾಗಿದೆ.
ವರ್ಷಗಳ ಹಿಂದೆ, ಮತದಾನದ ವೇಳೆ ಅಥವಾ ಚುನಾವಣೆಯ ಕೊನೆಯ ಹಂತದವರೆಗೆ ಪೂರ್ವ ಸಮೀಕ್ಷೆಯನ್ನು ಪ್ರಸಾರ ಮಾಡಲು ಅಥವಾ ಪ್ರಕಟಿಸಲು ಚುನಾವಣಾ ಆಯೋಗವು ನಿಷೇಧ ಹೇರಿತ್ತು. ಆದರೆ, ಮಾಧ್ಯಮಗಳು ಈ ಕುರಿತಾಗಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದವು. |