ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಿಷೇಧದಿಂದ 'ಬಜರಂಗದಳ ಬಚಾವ್'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿಷೇಧದಿಂದ 'ಬಜರಂಗದಳ ಬಚಾವ್'
ಒರಿಸ್ಸಾದಲ್ಲಿ ನಡೆದ ಕೋಮುಹಿಂಸಾಚಾರದ ಕುರಿತು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ದೀರ್ಘವಾಗಿ ಚರ್ಚಿಸಲಾಯಿತು. ಆದರೆ ದಾಳಿಯಲ್ಲಿ ಸಂಘಪರಿವಾರದ ಬಜರಂಗದಳದ ಶಾಮಿಲಾತಿ ಕುರಿತಂತೆ ನಿಷೇಧ ಹೇರುವ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ.

ಒರಿಸ್ಸಾದಲ್ಲಿ ಕ್ರೈಸ್ತ ಸಮುದಾಯದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಬಜರಂಗದಳವನ್ನು ನಿಷೇಧಿಸುವ ಬಗ್ಗೆ ಯಾವುದೇ ಗಂಭೀರ ಚರ್ಚೆ ನಡೆಯದೆ, ದಳವನ್ನು ನಿಷೇಧಿಸಲು ಇನ್ನೂ ಹೆಚ್ಚಿನ ಸಾಕ್ಷ್ಯಾಧಾರದ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿರ್ದೇಶನ ನೀಡಿರುವುದಾಗಿ ತಿಳಿಸಿರುವ ಪಾಟೀಲ್, ಒರಿಸ್ಸಾದಲ್ಲಿ ನಡೆದ ಕೋಮಹಿಂಸಾಚಾರದಲ್ಲಿ ಕನಿಷ್ಟ 35 ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿರುವ ಪ್ರಕರಣದಲ್ಲಿ ಬಜರಂಗದಳ ಭಾಗಿಯಾಗಿದೆಯೇ ಎಂಬ ಬಗ್ಗೆ ಇನ್ನಷ್ಟು ಖಚಿತ ಸಾಕ್ಷ್ಯಾಧಾರಗಳು ಲಭಿಸಿದಲ್ಲಿ ನಿಷೇಧದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಅಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಮತ್ತೆ ಶುಕ್ರವಾರವಾದಂದು ಸಚಿವ ಸಂಪುಟ ಸಭೆ ಸೇರಿ ಚರ್ಚಿಸುವಂತೆ ಪ್ರಧಾನಿ ನಿರ್ದೇಶನ ನೀಡಿರುವುದಾಗಿ ತಿಳಿಸಿದರು.

ಆಗೋಸ್ಟ್ 23ರಂದು ವಿಶ್ವಹಿಂದೂ ಪರಿಷತ್ ಮುಖಂಡ ಸ್ವಾಮಿ ಲಕ್ಷ್ಮಣಾನಂದ ಅವರನ್ನು ಹತ್ಯೆಗೈದ ಬಳಿಕ ಒರಿಸ್ಸಾದ ಕಂಧಮಾಲ್ ಜಿಲ್ಲೆಯಲ್ಲಿ ಭುಗಿಲೆದ್ದ ಹಿಂಸಾಚಾರದ ಕುರಿತು ಅಧ್ಯಯನ ನಡೆಸಲು ಕೇಂದ್ರದಿಂದ ತಂಡವನ್ನು ಕಳುಹಿಸುವ ಕುರಿತಾಗಿಯೂ ಸಚಿವ ಸಂಪುಟ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಸ್ವಾಮಿ ಲಕ್ಷ್ಮಣಾನಂದ ಅವರನ್ನು ತಾವೇ ಹತ್ಯೆಗೈದಿರುವುದಾಗಿ ನಕ್ಸಲೀಯರು ಹೊಣೆ ಹೊತ್ತು ಹೇಳಿಕೆ ನೀಡಿದ್ದರು. ಆದರೆ ಬಜರಂಗದಳ ಅದನ್ನು ನಿರಾಕರಿಸಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ದಾಳಿ ನಡೆಸಿರುವುದಾಗಿ ಆರೋಪಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚುನಾವಣಾ ಪೂರ್ವಸಮೀಕ್ಷೆಗೆ ಸರಕಾರ ನಿಷೇಧ
ಸೌಮ್ಯ ಪ್ರಕರಣ: ಪೊಲೀಸರಿಂದ ಬಿಎಂಡಬ್ಲೂ ಕಾರು ವಶ
ಭಜರಂಗದಳ ನಿಷೇಧ: ಸಂಸತ್ತಿನಲ್ಲಿ ಚರ್ಚೆ
ಕ್ರೈಸ್ತಸನ್ಯಾಸಿನಿ ಅತ್ಯಾಚಾರ:ಆರೋಪಿಯ ಬಂಧನ
ಹೆಚ್.ಟಿ.ಸಾಂಗ್ಲಿಯಾನ ಸಂಸದ ಸ್ಥಾನ ರದ್ದು
ಈ ಬಂಧಿತ ಉಗ್ರನ ವೇತನ 19 ಲಕ್ಷ ರೂ.!