ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾವಣ ವಂಶಜರಿಗೆ ದಸರಾ ಸಂಭ್ರಮವಲ್ಲ, ಶೋಕಾಚರಣೆ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾವಣ ವಂಶಜರಿಗೆ ದಸರಾ ಸಂಭ್ರಮವಲ್ಲ, ಶೋಕಾಚರಣೆ!
WD
ದೇಶದ ವಿವಿಧೆಡೆ ಜನರು ರಾವಣ ದಹನ-ದಶಕಂಠನ ವಧೆಯನ್ನು ನೆನಪಿಸಿ, ಕೆಡುಕಿನ ವಿರುದ್ಧ ಒಳಿತಿನ ವಿಜಯದ ಸಂಕೇತವಾಗಿ ದಸರಾ ಆಚರಿಸುತ್ತಿದ್ದರೆ, ಇಲ್ಲಿನ ಸುಮಾರು 100 ಕುಟುಂಬಗಳಿಗೆ ಶೋಕಾಚರಣೆ.

ಇವರ್ಯಾರು ಗೊತ್ತೇ? ಲಂಕಾಧಿಪತಿ ರಾವಣನ ವಂಶಜರು!

ಈ ದಾವೆ, ಗೋಧಾ ಮತ್ತು ಶ್ರೀಮಲ್ ಸಮುದಾಯದ ಕುಟುಂಬಗಳು ಜೋಧಪುರದ ಸುತ್ತಮುತ್ತ ವಾಸಿಸುತ್ತಿದ್ದು, ದಸರಾ ಸಂಭ್ರಮವನ್ನು ಆಚರಿಸುವುದಿಲ್ಲ. ಅದರ ಬದಲು ಅವರು ಶೋಕಾಚರಣೆ ಮಾಡುತ್ತಾರೆ ಮತ್ತು ರಾವಣ, ಕುಂಭಕರ್ಣ ಮತ್ತು ಮೇಘನಾದ (ಇಂದ್ರಜಿತು) ಅವರ ಪ್ರತಿಕೃತಿ ದಹನದ ಬಳಿಕ ಉತ್ತರಕ್ರಿಯಾದಿಗಳನ್ನು ಕೈಗೊಳ್ಳುತ್ತಾರೆ!

ಶ್ರೀಲಂಕಾದಿಂದ ಇವರೆಲ್ಲರೂ ಜೋಧಪುರ, ಫಲೋಡಿ ಮತ್ತು ಗುಜರಾತಿನ ಇತರ ಭಾಗಗಳಿಗೆ ವಲಸೆ ಬಂದಿದ್ದರೆನ್ನಲಾಗಿದ್ದು,ಇವರೆಲ್ಲರೂ ರಾವಣನ ವಂಶಸ್ಥರು ಎಂದು ನಂಬಲಾಗಿದೆ.

ತೀರಾ ಇತ್ತೀಚಿನವರೆಗೂ ಈ ಕುಟುಂಬಗಳು ಸಾಮುದಾಯಿಕವಾಗಿ ಶೋಕಾಚರಣೆ ಮತ್ತಿತರ ಕ್ರಿಯೆಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಅವರೆಲ್ಲರೂ ಈಗ ವೈಯಕ್ತಿಕ ನೆಲೆಗಟ್ಟಿನಲ್ಲಿ ಈ ಕರ್ಮಾದಿಗಳನ್ನು ನಡೆಸತೊಡಗಿದ್ದಾರೆ.

ಈ ಕುಟುಂಬಗಳು ಪಿತೃಪಕ್ಷದ 10ನೇ ದಿನ ರಾಕ್ಷಸರಾಜ ರಾವಣನ ಶ್ರಾದ್ಧ ಕರ್ಮವನ್ನೂ ನೆರವೇರಿಸುತ್ತವೆ ಎಂದು ಅಕ್ಷಯ ಜ್ಯೋತಿಷ್ಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ಕಮಲೇಶ್ ದಾವೆ ಹೇಳುತ್ತಾರೆ.

ರಾವಣ ಒಬ್ಬ ಪ್ರಕಾಂಡ ಪಂಡಿತನಾಗಿದ್ದು, ಅನನ್ಯ ಶಿವಭಕ್ತ ಎಂಬುದು ಎಲ್ಲರಿಗೂ ತಿಳಿದ ವಿಷಯ. ಇಲ್ಲಿನ ಚಾಂದ್‌ಪೋಲ್ ಪ್ರದೇಶದಲ್ಲಿರುವ ಅಮರನಾಥ ಮಂದಿರದ ಆವರಣದಲ್ಲಿ ಶಿವನನ್ನು ಪೂಜಿಸುತ್ತಿರುವ ರಾವಣನ ವಿಗ್ರಹವಿರುವ ರಾವಣ ಮಂದಿರವೂ ಇದೆ ಎಂದಿದ್ದಾರೆ ದಾವೆ.

ರಾವಣನ ರಾಣಿ ಮಂಡೋದರಿಯು ಇಲ್ಲಿಗೆ ಸಮೀಪದ ಮಾಂಡೋರ್ ಎಂಬಲ್ಲಿಯವಳು ಎಂದು ಹೆಚ್ಚಿನವರು ನಂಬಿದ್ದಾರೆ. ಈ ನಂಬಿಕೆಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲದಿದ್ದರೂ, ಭೂಗರ್ಭ ಮತ್ತು ವಸ್ತುಸಂಗ್ರಹಾಲಯ ಇಲಾಖೆಯು, ರಾವಣ-ಮಂಡೋದರಿ ವಿವಾಹ ಸಮಾರಂಭ ನಡೆದಿತ್ತು ಎನ್ನಲಾದ, 'ರಾವಣ್ ಕೀ ಚೌರಿ' ಎಂಬ ಪುರಾತನ ಸ್ಮಾರಕವೊಂದನ್ನು ಗುರುತಿಸಿ ಕಾಯ್ದಿಟ್ಟುಕೊಂಡಿದೆ ಎಂದು ದಾವೆ ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್-ಸಮಾಜವಾದಿ ಪಕ್ಷ ದೇಶದ ಶತ್ರು: ಠಾಕ್ರೆ
ಸಹಜಸ್ಥಿತಿಗೆ ಮರಳಿದ ಕಂಧಮಾಲ್
ನಿಲುವು ಬದಲು: ಸಿಮಿ ನಿಷೇಧಕ್ಕೆ ಎಸ್ಪಿ ಬೆಂಬಲ
ಕೇಂದ್ರಕ್ಕೆ ಬಜರಂಗದಳ ಸವಾಲ್-ತಾಕತ್ತಿದ್ದರೆ ನಿಷೇಧಿಸಿ
ಬಲವಂತದ ಮತಾಂತರ ನಿಲ್ಲಿಸಿ: ಆಡ್ವಾಣಿ
ನಿಷೇಧದಿಂದ 'ಬಜರಂಗದಳ ಬಚಾವ್'