ಭಾರತ ಅಮೆರಿಕ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ನೀಡಿರುವ ಭರವಸೆಗಳಲ್ಲಾ ಕೇವಲ ಮೌಖಿಕ ಆಶ್ವಾಸನೆಗಳಾಗಿದ್ದು, ಇದು ಯಾವುದೇ ಕಾನೂನಿನ ರಕ್ಷಣೆಯನ್ನು ಹೊಂದಿಲ್ಲ ಎಂದು ಭಾರತೀಯ ಜನತಾ ಪಕ್ಷವು ಹೇಳಿದ್ದು, ಇದು ಭಾರತಕ್ಕೆ ಗೆಲುವಲ್ಲ ಸಾರ್ವಭೌಮತೆಯ ಸೋಲು ಎಂದು ಟೀಕಿಸಿದೆ.ಅಣು ಒಪ್ಪಂದಕ್ಕೆ ಬುಷ್ ಸಹಿ ಹಾಕಿರುವ ಕುರಿತಾಗಿ ಪ್ರತಿಕ್ರಯಿಸಿರುವ ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ, ಅಮೆರಿಕ ಅಧ್ಯಕ್ಷರಿಂದ ನೀಡಲ್ಪಟ್ಟ ಭರವಸೆಗಳು ಕೇವಲ ಮೌಖಿಕ, ಇದರಲ್ಲಿ ಯಾವುದೇ ಕಾನೂನು ರಕ್ಷಣೆಯಿಲ್ಲ. ಇದು ಭಾರತಕ್ಕೆ ಗೆಲುವಲ್ಲ ಇದೊಂದು ಐತಿಹಾಸಿಕ ಸೋಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಅಣು ಪರೀಕ್ಷೆಯ ವಿಚಾರಕ್ಕೆ ಸಂಬಂಧಿಸಿದಂತೆ ಜಾರ್ಜ್ ಬುಷ್ ಮೌನವಹಿಸಿದ್ದು, ಒಪ್ಪಂದದಲ್ಲಿ ಭಾರತದ ಪರಮಾಣು ಸಾರ್ವಭೌಮತೆಯ ಒತ್ತೆ ಇಡಲಾಗಿದೆ ಎಂದು ಅವರು ಹೇಳಿದ್ದಾರೆ.ಅಣು ಒಪ್ಪಂದವು ಯುಪಿಎ ಸರಕಾರದಿಂದ ಭಾರತಕ್ಕೆ ಉಂಟಾದ ಸೋಲಾಗಿದೆ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ. |
ಸಂಬಂಧಿತ ಮಾಹಿತಿ ಹುಡುಕಿ |
|