ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಶ್ರೀನಗರ: ಪ್ರಧಾನಿ ಭೇಟಿ ವಿರುದ್ಧ ಪ್ರತಿಭಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀನಗರ: ಪ್ರಧಾನಿ ಭೇಟಿ ವಿರುದ್ಧ ಪ್ರತಿಭಟನೆ
ಮಹತ್ವದ ಎರಡು ಯೋಜನೆಗಳ ಉದ್ಘಾಟನೆಗಾಗಿ ಬಿಗಿ ಬಂದೋಬಸ್ತ್‌ ನಡುವೆ ಶುಕ್ರವಾರ ಮಧ್ನಾಹ್ನ ಪ್ರಧಾನಿ ಮನಮೋಹನ್ ಸಿಂಗ್ ಅವರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿರುವುದನ್ನು ವಿರೋಧಿಸಿ ಪ್ರತ್ಯೇಕತವಾದಿಗಳು ನೀಡಿದ್ದ ಅಘೋಷಿತ ಬಂದ್ ಕರೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಹಲವಾರು ಮಂದಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರದ ಪ್ರಾರ್ಥನೆಯ ಬಳಿಕ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿರುವ ಪ್ರತ್ಯೇಕತವಾದಿಗಳ ಸಂಘಟನೆ, ಪ್ರಧಾನಿ ಭೇಟಿಯನ್ನು ವಿರೋಧಿಸಿ ಶನಿವಾರ ಪೂರ್ಣಪ್ರಮಾಣದಲ್ಲಿ ಬಂದ್‌ ನಡೆಸಲಾಗುವುದು ಎಂದು ಹೇಳಿವೆ.

ಇದರೊಂದಿಗೆ ಕಳೆದ ಎರಡು ದಶಕಗಳ ಪ್ರತ್ಯೇಕತ ಕೂಗಿನ ಭಾರತ ವಿರೋಧಿಯ ಹೋರಾಟದ ಬೃಹತ್ ಶಕ್ತಿ ಪ್ರದರ್ಶನಕ್ಕೆ ಪ್ರತ್ಯೇಕತವಾದಿಗಳು ಗುಂಪು ಸಜ್ಜಾಗಿವೆ. ಪ್ರಧಾನಿ ಮನಮೋಹನ್ ಸಿಂಗ್ ಅವರು ಇಂದು ಮಧ್ನಾಹ್ನ ಬಾಗ್ಲಿಹರ್ ಎಂಬಲ್ಲಿ 450 ಮೆಗಾ ವ್ಯಾಟ್‌ನ ಹೈಡ್ರೋ ಇಲೆಕ್ಟ್ರಿಕ್ ಪವರ್ ಯೋಜನೆಯನ್ನು ಉದ್ಘಾಟಿಸಿದರು.

ಪ್ರಮುಖ ಇಲೆಕ್ಟ್ರಿಕ್ ಯೋಜನೆಯಾದ ಬಾಗ್ಲಿಹರ್ ಯೋಜನೆಯನ್ನು ಒಟ್ಟು 5,200ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರಿಂದ ಪ್ರತಿವರ್ಷ 2800 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಗೊಳ್ಳಲಿದೆ.

ಉದ್ಘಾಟನೆಯ ಬಳಿಕ ಅವರು ಶ್ರೀನಗರಕ್ಕೆ ತೆರಳಿದ ಅವರು,ನ್ಯಾಷನಲ್ ಕಾನ್ಪರೆನ್ಸ್, ಕಾಂಗ್ರೆಸ್,ಪಿಡಿಪಿ,ಸಿಪಿಎಂ ಮತ್ತು ಪ್ಯಾಂಥರ್ಸ್ ಪಕ್ಷದ ರಾಜಕೀಯ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ: ಭಿಕ್ಷುಕರಿಗಿಲ್ಲಿ ಕೈತುಂಬಾ 'ಸಂಪಾದನೆ'!
ಪ್ರಧಾನಿ ಸಿಂಗ್ ಜಮ್ಮು- ಕಾಶ್ಮೀರಕ್ಕೆ ಭೇಟಿ
ಅಣು ಒಪ್ಪಂದದಿಂದ ಭಾರತಕ್ಕೆ ಸೋಲು:ಬಿಜೆಪಿ
ಆಗ್ರಾ:ಕೊಳವೆ ಬಾವಿಗೆ ಬಿದ್ದ ಮಗು-ರಕ್ಷಣೆಗಾಗಿ ಕಾರ್ಯ
ರಾವಣ ವಂಶಜರಿಗೆ ದಸರಾ ಸಂಭ್ರಮವಲ್ಲ, ಶೋಕಾಚರಣೆ!
ಕಾಂಗ್ರೆಸ್-ಸಮಾಜವಾದಿ ಪಕ್ಷ ದೇಶದ ಶತ್ರು: ಠಾಕ್ರೆ