ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಭಜ್ಜಿ ವಿರುದ್ಧ ವಿಎಚ್‌ಪಿ-ಬಜರಂಗದಳ ದೂರು ದಾಖಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಜ್ಜಿ ವಿರುದ್ಧ ವಿಎಚ್‌ಪಿ-ಬಜರಂಗದಳ ದೂರು ದಾಖಲು
ಕ್ರಿಕೆಟಿಗ ಹರಭಜನ್ ಸಿಂಗ್‌ಗೂ ವಿವಾದಕ್ಕೂ ಅವಿನಾಭಾವ ಸಂಬಂಧ, ಒಂದಿಲ್ಲ ಒಂದು ವಿವಾದಕ್ಕೆ ಸಿಲುಕುತ್ತಿರುವುದೇ ಸಿಂಗ್ ಜಾಯಮಾನ ಎಂಬಂತಾಗಿದ್ದು, ಇದೀಗ ಟಿವಿ ರಿಯಾಲಿಟಿ ಶೋನಲ್ಲಿ ರಾವಣನ ಪಾತ್ರ ಮಾಡಿದ ಕುರಿತಂತೆ ವಿಎಚ್‌ಪಿ ಮತ್ತು ಬಜರಂಗದಳ ಹರಭಜನ್ ವಿರುದ್ಧ ಇಲ್ಲಿನ ನ್ಯಾಯಾಲಯದಲ್ಲಿ ಶುಕ್ರವಾರ ದೂರನ್ನು ದಾಖಲಿಸಿದೆ.

ಏಕ್ ಕಿಲಾಡಿ, ಏಕ್ ಹಸೀನಾ ಎಂಬ ಕಾರ್ಯಕ್ರಮದಲ್ಲಿ ಹರಭಜನ್ ಸಿಂಗ್ ಮತ್ತು ನಟಿ ಮೋನಾ ಸಿಂಗ್ ಅವರು ಬೇಕಂತಲೇ ಹಿಂದುಗಳ ಭಾವನೆಗಳಿಗೆ ನೋವಾಗುವ ರೀತಿಯಲ್ಲಿ ನಡೆದುಕೊಂಡರು ಎಂದು ಪಂಜಾಬ್ ವಿಶ್ವಹಿಂದೂ ಪರಿಷತ್ ವಕ್ತಾರ ವಿಜಯ್ ಸಿಂಗ್ ಭಾರದ್ವಾಜ್ ಮತ್ತಿತರರು ಇಲ್ಲಿನ ನ್ಯಾಯಾಲಯವೊಂದರಲ್ಲಿ ದೂರು ಸಲ್ಲಿಸಿದ್ದಾರೆ.

ನ್ಯಾಯಾಲಯದ ಮುಖ್ಯ ಮ್ಯಾಜಿಸ್ಟ್ರೇಟ್ ಕಾಂಚನ್ ಮಾಹಿ ಅವರು ವಿಚಾರಣೆಯನ್ನು ಸೋಮವಾರಕ್ಕೆ ನಿಗದಿಪಡಿಸಿದ್ದಾರೆ.

28ರ ಹರೆಯದ ಆಫ್ ಸ್ಪಿನ್ನರ್ ಸಿಂಗ್ ವಿರುದ್ಧ ಅಖಿಲ ಭಾರತೀಯ ರಾಜ್‌ಪೂತ್ ಸಮಿತಿ ಮತ್ತು ಘಟಕದ ಅಧ್ಯಕ್ಷ ಅರವಿಂದ್ ಠಾಕೂರ್ ಹಾಗೂ ಪಂಜಾಬ್ ಪ್ರಾಂತ್ಯದ ಬಜರಂಗದಳ ಘಟಕ ಸೇರಿದಂತೆ ದೂರನ್ನು ದಾಖಲಿಸಿದೆ.

ಕೆಲವು ದಿನದ ಹಿಂದೆ ಧಾರ್ಮಿಕ ಸಂಸ್ಥೆಯಾದ ಅಕಾಲ್ ತಖ್ತ್ ಕೂಡ ಹರಭಜನ್ ನಡತೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಹಣೆಯ ಮೇಲೆ ಸಿಂಧೂರ ಇರಿಸಿ, ರಾವಣನಂತೆ ವೇಷ ಹಾಕಿ ಸಾರ್ವಜನಿಕವಾಗಿ ಮಹಿಳೆಯೊಂದಿಗೆ ನರ್ತನ ಮಾಡುವುದು ತೀರಾ ಅಸಹ್ಯ, ರಿಯಾಲಿಟಿ ಶೋನಲ್ಲಿ ನಡೆದ ಈ ಬಣ್ಣದಾಟದ ನಡೆತೆಯನ್ನು ಸಿಖ್ ಸಮುದಾಯ ಸಹಿಸುವುದಿಲ್ಲ ಎಂದು ಜಾತೇದಾರ್ ಗ್ಯಾನಿ ಗುರುಬಚನ್ ಸಿಂಗ್ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವರದಕ್ಷಿಣೆ ಕಾನೂನು ದುರುಪಯೋಗ: ಹೈಕೋರ್ಟ್ ಪರಿಗಣನೆ
ಶ್ರೀನಗರ: ಪ್ರಧಾನಿ ಭೇಟಿ ವಿರುದ್ಧ ಪ್ರತಿಭಟನೆ
ಮುಂಬೈ: ಭಿಕ್ಷುಕರಿಗಿಲ್ಲಿ ಕೈತುಂಬಾ 'ಸಂಪಾದನೆ'!
ಪ್ರಧಾನಿ ಸಿಂಗ್ ಜಮ್ಮು- ಕಾಶ್ಮೀರಕ್ಕೆ ಭೇಟಿ
ಅಣು ಒಪ್ಪಂದದಿಂದ ಭಾರತಕ್ಕೆ ಸೋಲು:ಬಿಜೆಪಿ
ಆಗ್ರಾ:ಕೊಳವೆ ಬಾವಿಗೆ ಬಿದ್ದ ಮಗು-ರಕ್ಷಣೆಗಾಗಿ ಕಾರ್ಯ