ಎರಡು ಕೋಮುಗಳ ನಡುವೆ ನಡೆದ ಹಿಂಸಾಚಾರದ ಹಾಗೂ ಪೊಲೀಸ್ ಗೋಲಿಬಾರ್ ಘಟನೆಯಲ್ಲಿ 4ಮಂದಿ ಬಲಿಯಾಗಿದ್ದು, 15ಮಂದಿ ಗಾಯಗೊಂಡಿದ್ದು, ಪರಿಸ್ಥಿತಿ ಉದ್ವಿಗ್ನವಾಗಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಭೈನ್ಸಾ ಪ್ರದೇಶದಲ್ಲಿ ಶನಿವಾರ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿಂದ 280ಕಿ.ಮೀ.ದೂರದಲ್ಲಿರುವ ಅದಿಲ್‌ಬಾದ್ ಜಿಲ್ಲೆಯ ಭೈನ್ಸಾದಲ್ಲಿ ಶುಕ್ರವಾರ ದುರ್ಗಾದೇವಿಯ ಮೆರವಣಿಗೆ ಸಾಗುತ್ತಿದ್ದ ವೇಳೆ ಎರಡು ಕೋಮುಗಳ ನಡುವೆ ಘರ್ಷಣೆ ಉಂಟಾಗಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ಶುಕ್ರವಾರ ರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಕರ್ಫ್ಯೂವನ್ನು ಹೇರಲಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಶನಿವಾರವೂ ಕರ್ಫ್ಯೂವನ್ನು ಮುಂದುವರಿಸಲಾಗಿದೆ. ಆ ದರೆ ಪರಿಸ್ಥಿತಿ ಹತೋಟಿಯಲ್ಲಿದ್ದು, ಈವರೆಗೆ ಯಾವುದೇ ಘರ್ಷಣೆ ಮತ್ತೆ ಸಂಭವಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ದುರ್ಗಾದೇವಿಯ ಮೆರವಣಿಗೆ ಮತ್ತೊಂದು ಸಮುದಾಯದ ಪ್ರಾರ್ಥನಾ ಮಂದಿರದ ಮುಂಭಾಗದಿಂದ ಹಾದು ಹೋಗುತ್ತಿದ್ದ ಸಂದರ್ಭದಲ್ಲಿ,ಮೆರವಣಿಗೆಯಲ್ಲಿ ಸಾಗುತ್ತಿದ್ದವರು ಗುಲಾಲ್ (ಕೆಂಪು ಪೌಡರ್) ಅನ್ನು ಎರಚುವುದನ್ನು ಖಂಡಿಸಿದ ಸಂದರ್ಭ ಮಾತಿನ ಚಕಮಕಿ ನಡೆದಿದ್ದಲ್ಲದೆ, ಕಲ್ಲು ತೂರಾಟ ಆರಂಭಗೊಂಡಿತ್ತು. ಬಳಿಕ ಇತ್ತಂಡಗಳ ನಡುವೆ ಹೊಯ್-ಕೈ ನಡೆಯಿತು.
ಎರಡು ಸಮುದಾಯಗಳು ಒಬ್ಬರ ಮೇಲೊಬ್ಬರು ಕಲ್ಲು ತೂರಾಟ ನಡೆಸಿದರು. ಈ ಸಂದರ್ಭದಲ್ಲಿ ಕತ್ತಿ,ತಲವಾರ್‌ನಂತಹ ಮಾರಕ ಆಯುಧಗಳು ಕೈಯಲ್ಲಿ ಚಳಪಿಳಿಸಿದವು. ಆ ಕ್ರೋಶಗೊಂಡ ಗುಂಪು ಕೆಲವರಿಗೆ ಚೂರಿ ಇರಿದಿದ್ದು,ಸುಮಾರು 40 ಅಂಗಡಿಗಳಿಗೆ ಬೆಂಕಿ ಹಚ್ಚಿ, 12 ವಾಹನಗಳನ್ನು ಅಗ್ನಿಗಾಹುತಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. |