ಪಾಕಿಸ್ತಾನ-ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಭಾರತ ಯಾವುದೇ ತೆರನಾದ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಭಾರತ-ಅಮೆರಿಕ ನಡುವಿನ ಐತಿಹಾಸಿಕ ಪರಮಾಣು ಒಪ್ಪಂದಕ್ಕೆ ಶುಕ್ರವಾರ ಅಂತಿಮ ಅಂಕಿತ ಬಿದ್ದ ಬೆನ್ನಲ್ಲೇ, ಭಾರತ ಇಂತಹ ಅನಾವಶ್ಯಕ ಒಪ್ಪಂದವನ್ನು ವಿರೋಧಿಸುವುದಾಗಿ ಪರೋಕ್ಷವಾಗಿ ಸೂಚಿಸಿದ್ದು, ಏತನ್ಮಧ್ಯೆ ಪಾಕ್ ಚೀನಾ ಅಥವಾ ಅಮೆರಿಕದೊಂದಿಗೆ ಪರಮಾಣು ಒಪ್ಪಂದ ಮಾಡಿಕೊಳ್ಳುವ ಕುರಿತು ಆಶಾಭಾವ ವ್ಯಕ್ತಪಡಿಸಿದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಶನಿವಾರ ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಆ ನಿಟ್ಟಿನಲ್ಲಿ ನಾವು ನಾಗರಿಕ ಪರಮಾಣು ಒಪ್ಪಂದವನ್ನು ಪ್ರೋತ್ಸಾಹಿಸುತ್ತೇವೆ ಅಲ್ಲದೇ ಪರಮಾಣು ಶಕ್ತಿಯನ್ನು ಶಾಂತಿಯುತ ಬಳಕೆಗೆ ಸಹಮತ ಇರುವುದಾಗಿ ಮುಖರ್ಜಿ ಹೇಳಿದರು.
ಪರಮಾಣುವನ್ನು ಸದುದ್ದೇಶದ ಬಳಕೆಗಾಗಿ ಬಳಸಲು ಪ್ರತಿಯೊಂದು ದೇಶವೂ ಹಕ್ಕನ್ನು ಹೊಂದಿರುವುದಾಗಿ ನಾವು ನಂಬಿರುವುದಾಗಿ ಅವರು ತಿಳಿಸಿದರು. ಅಲ್ಲದೇ ಭಾರತ-ಅಮೆರಿಕ ಅಣು ಒಪ್ಪಂದದಿಂದ ಯಾವುದೇ ತೆರನಾದ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
|