ಇತ್ತೀಚೆಗೆ ಮಂಗಳೂರಿನಲ್ಲಿ ಬಂಧಿಸಲಾಗಿರುವ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಶಂಕಿತ ಉಗ್ರ ಅಹಮದ್ ಬಾವಾನೊಂದಿಗೆ ನಂಟು ಹೊಂದಿರುವ ಅನುಮಾನದ ಹಿನ್ನೆಲೆಯಲ್ಲಿ ನಾಲ್ವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಬೆಂಗಳೂರು ಸಿಸಿಬಿ ಪೊಲೀಸರು ಜಿಲ್ಲೆಯ ಕೊಪ್ಪ ಸಮೀಪದ ಕುದುರೆಗುಂಡಿಗೆ ಆಗಮಿಸಿದ್ದು, ಅಹಮದ್ ಬಾವಾ ನೆಲೆಸಿದ್ದ ವಿಟ್ಲಮಕ್ಕಿಗೆ ಹೊಂದಿಕೊಂಡಿರುವ ಕುದುರೆಗುಂಡಿಯ ಕುಂಜುಮೋನು, ಅಬುಬೇಕರ್, ಬದ್ರುದೀನ್, ಜಲೀಲ್ ಸೇರಿದಂತೆ ನಾಲ್ಕಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಕಳೆದ ಮೂರು ವರ್ಷದಿಂದ ವಿಟ್ಲಮಕ್ಕಿಯಲ್ಲಿ ಮೊಹಮದ್ ಹಾಗೂ ಇಂಜಿನಿಯರ್ ಶೌಕತ್ ಆಗಾಗ ಬಂದು ವಾಸಿಸುತ್ತಿದ್ದನು. ಅಲ್ಲದೆ, ಈ ನಾಲ್ವರು ಸ್ಥಳೀಯರೊಂದಿಗಿನ ಒಡನಾಟ ವಿಶೇಷವಾಗಿತ್ತು ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರಿಗೂ ಉಗ್ರರ ಹಾವಳಿ ಹಬ್ಬಿರುವ ವದಂತಿಗಳು ಹರಿಡಿರುವ ಬೆನ್ನಲ್ಲೆ ಸ್ಥಳೀಯರ ಬಂಧನ ಜನತೆಯನ್ನು ಆತಂಕಕ್ಕೀಡು ಮಾಡಿದೆ. |