ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಿಜೆಪಿಯೊಂದಿಗೆ ಪ್ರಜಾರಾಜ್ಯಂ 'ಕೈ' ಜೋಡಿಸುವುದಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿಯೊಂದಿಗೆ ಪ್ರಜಾರಾಜ್ಯಂ 'ಕೈ' ಜೋಡಿಸುವುದಿಲ್ಲ
ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರ ಪ್ರಜಾರಾಜ್ಯಂ ಪಕ್ಷ ಯಾವುದೇ ಕಾರಣಕ್ಕೂ ಭಾರತೀಯ ಜನತಾ ಪಕ್ಷವಾಗಲಿ, ಟಿಡಿಪಿ (ತೆಲುಗು ದೇಶಂ ಪಕ್ಷ) ಯೊಂದಿಗೆ ಕೈ ಜೋಡಿಸುವುದಿಲ್ಲ ಎಂದು ಶನಿವಾರ ಸ್ಪಷ್ಟಪಡಿಸಿದೆ.

ಅವರು ಆಂಧ್ರಪ್ರದೇಶದಲ್ಲಿ ಸಿಪಿಐ(ಎಂ) ಜೊತೆ ಮೈತ್ರಿಮಾಡಿಕೊಳ್ಳುವ ಕುರಿತು ಮಾತುಕತೆ ನಡೆಸಿದ ಬಳಿಕ ಈ ಹೇಳಿಕೆಯನ್ನು ನೀಡಿದ್ದಾರೆ.

ಚಿರಂಜೀವಿ ಅವರ ಅಳಿಯ ಅಲ್ಲು ಅರವಿಂದ್ ಅವರು ಶನಿವಾರ ಸಿಪಿಐ (ಎಂ)ಪ್ರಧಾನ ಕಾರ್ಯದರ್ಶಿ ಹಾಗೂ ಪೊಲಿಟ್ ಬ್ಯುರೋ ಸದಸ್ಯ ಸೀತಾರಾಂ ಯೆಚೂರಿ ಅವರೊಂದಿಗೆ 30ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಈ ಮಾತುಕತೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತಮ್ಮ ಪಕ್ಷ ಬಿಜೆಪಿ ಅಥವಾ ಟಿಡಿಪಿ ಜೊತೆ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ ಎಡಪಕ್ಷ, ಟಿಡಿಪಿ, ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದೊಂದಿಗೆ ರಾಜ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಭಾನುವಾರದಿಂದ ಕೋಲ್ಕತಾದಲ್ಲಿ ಆರಂಭವಾಗಲಿರುವ ಮೂರು ದಿನಗಳ ಸಿಪಿಐಎಂನ ಸೆಂಟ್ರಲ್ ಸಮಿತಿಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ನಿಟ್ಟಿನಲ್ಲಿ ಬಿಜೆಪಿಯೊಂದಿಗೆ ಪಕ್ಷ ಕೈಜೋಡಿಸಲಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅರವಿಂದ್, ಪ್ರಜಾರಾಜ್ಯಂನ ಪ್ರಮುಖ ಅಜೆಂಡವೇ ಜಾತ್ಯತೀತತೆ ಎಂದು ಸ್ಪಷ್ಟಪಡಿಸಿ, ಬಿಜೆಪಿಯೊಂದಿಗಿನ ಮೈತ್ರಿಯನ್ನು ತಳ್ಳಿಹಾಕಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಂಕಿತ ಉಗ್ರ ಬಾವಾನ ಸಹಚರರ ಸೆರೆ
ಅಮೆರಿಕ-ಪಾಕ್ ಅಣುಬಂಧಕ್ಕೆ ನಮ್ಮ ವಿರೋಧವಿಲ್ಲ:ಪ್ರಣಬ್
66 ವರ್ಷ ಪೂರೈಸಿದ 'ಬಿಗ್ ಬಿ' ಆಸ್ಪತ್ರೆಗೆ ದಾಖಲು
ಕೋಮುಹಿಂಸಾಚಾರ: ಆಂಧ್ರದಲ್ಲಿ ಕರ್ಫ್ಯೂ ಜಾರಿ
'ಕಣಿವೆನಾಡಿ'ನ ರೈಲ್ವೆ ಸೇವೆಗೆ ಪ್ರಧಾನಿ ಚಾಲನೆ
ಯುಪಿ:10 ಸಾವಿರ ದಲಿತರು ಬೌದ್ಧಧರ್ಮಕ್ಕೆ