ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮದ್ಯಪಾನ ನಿಯಂತ್ರಣಕ್ಕೂ ರಾಮದಾಸ್ ಚಿಂತನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮದ್ಯಪಾನ ನಿಯಂತ್ರಣಕ್ಕೂ ರಾಮದಾಸ್ ಚಿಂತನೆ
ಧೂಮಪಾನ ನಿಷೇಧಕ್ಕೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆಯಿಂದ ಉತ್ತೇಜಿತಗೊಂಡಿರುವ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಅವರು ಈಗ ಮದ್ಯಪಾನ ನಿಯಂತ್ರಣದ ಕುರಿತು ಗಂಭೀರವಾಗಿ ಚಿಂತನೆ ಆರಂಭಿಸಿದ್ದಾರೆ.

ವಿವಿಧ ಸಂಘ-ಸಂಸ್ಥೆಗಳ ನೆರವಿನಿಂದ ಯುವಕರು ಮದ್ಯಪಾನ ಚಟಕ್ಕೆ ಅಂಟಿಕೊಳ್ಳದಂತೆ ನೋಡಿಕೊಳ್ಳಲು ಸ್ಪಷ್ಟ ರಾಷ್ಟ್ರೀಯ ನೀತಿಯನ್ನು ರೂಪಿಸಲಾಗುವುದು ಹಾಗೂ ರಾಷ್ಟ್ರಾದ್ಯಂತ ವ್ಯಾಪಕ ಚರ್ಚೆ ನಡೆಸಿ ಈ ನೀತಿಗೆ ಕಾನೂನಿನ ಬಲ ನೀಡುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

ಧೂಮಪಾನ ನಿಷೇಧಕ್ಕೆ ಕೇರಳ, ಮಹಾರಾಷ್ಟ್ರ ಮತ್ತು ಪಶ್ಚಿಮಬಂಗಾಳದಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದ ಅವರು, ನಿಷೇಧ ಉಲ್ಲಂಘನೆಗಾಗಿ ವಸೂಲಿ ಮಾಡಲಾದ ದಂಡವನ್ನು ತಂಬಾಕು ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜಾಹೀರಾತುಗಳಿಗೆ ಬಳಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ತಂಬಾಕು ಉದ್ಯಮದಲ್ಲಿರುವ ಉದ್ಯೋಗಿಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸದ ನಂತರವಷ್ಟೇ ತಂಬಾಕು ಉತ್ಪನ್ನಗಳ ಸಂಪೂರ್ಣ ನಿಷೇಧ ಹೇರಲು ಸಾಧ್ಯವಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅವರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿದ್ದು ಸಮಿತಿ ಬದಲಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಗ್ರಾ: ಸೋನು ರಕ್ಷಣೆಗಾಗಿ ಹರಸಾಹಸ
'ಸತ್ತು' ಬದುಕಿದ ಬೆಂಗಳೂರಿನ ಸಾಫ್ಟ್‌ವೇರ್ ತಜ್ಞೆ!
ಬಿಜೆಪಿಯೊಂದಿಗೆ ಪ್ರಜಾರಾಜ್ಯಂ 'ಕೈ' ಜೋಡಿಸುವುದಿಲ್ಲ
ಶಂಕಿತ ಉಗ್ರ ಬಾವಾನ ಸಹಚರರ ಸೆರೆ
ಅಮೆರಿಕ-ಪಾಕ್ ಅಣುಬಂಧಕ್ಕೆ ನಮ್ಮ ವಿರೋಧವಿಲ್ಲ:ಪ್ರಣಬ್
66 ವರ್ಷ ಪೂರೈಸಿದ 'ಬಿಗ್ ಬಿ' ಆಸ್ಪತ್ರೆಗೆ ದಾಖಲು