ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬುಧವಾರದಿಂದ ಪ್ರಪ್ರಥಮ ವೈಮಾನಿಕ ಪ್ರದರ್ಶನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬುಧವಾರದಿಂದ ಪ್ರಪ್ರಥಮ ವೈಮಾನಿಕ ಪ್ರದರ್ಶನ
ಫುಟ್ಬಾಲ್ ಮೈದಾನ ಒಂದನ್ನು ಅರ್ಧದಷ್ಟು ತುಂಬುವಂತೆ ತನ್ನ ರೆಕ್ಕೆಗಳನ್ನು ಚಾಚಬಲ್ಲ ಏರ್‌ಬಸ್ ಇಂಡಸ್ಟ್ರೈಯ ಎ-380 ವಿಮಾನವು ಬುಧವಾರ ಹೈದರಾಬಾದ್ ನಗರದಲ್ಲಿ ಹಾರಾಡಲಿದೆ.

ಈ ಬೃಹತ್ ವಿಮಾನವು, ಭಾರತದಲ್ಲಿ ಬುಧವಾರ ಆರಂಭವಾಗಲಿರುವ ಪ್ರಪ್ರಥಮ ವೈಮಾನಿಕ ಪ್ರದರ್ಶನ 'ಇಂಡಿಯಾ ಏವಿಯೇಶನ್ 2008'ರಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ವಿನ್ಯಾಸಗಳ ಕನಿಷ್ಠ 37 ವಿಮಾನಗಳು ಮತ್ತು ಹೆಲಿಕಾಫ್ಟರ್‌ಗಳು ಹಾರಾಡಲಿವೆ. 853 ಪ್ರಯಾಣಿಕರನ್ನು ಕರೆದೊಯ್ಯಬಲ್ಲ ನಾಲ್ಕು ಎಂಜಿನ್‌ಗಳ ಡಬ್ಬಲ್ ಡೆಕ್ಕರ್ ವಿಮಾನವೂ ಪಟ್ಟಿಯಲ್ಲಿದೆ.

ಹೈದರಾಬಾದಿನ ಹಳೆ ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ಈ ಪ್ರದರ್ಶನಕ್ಕೆ ಚಾಲನೆ ಲಭಿಸಲಿದೆ. ಬೋಯಿಂಗ್ 777, ಎ-340-400, ಕೆನಡಾದ ಪ್ರಾದೇಶಿಕ ಜೆಟ್ ಬೊಂಬಾರ್ಡಿಯರ್ ಸೈಟೇಶನ್, ವಿವಿಧ ಜಾಗತಿಕ ನಾಯಕರು ನಿರ್ಮಿಸಿದ ವಾಣಿಜ್ಯ ಜೆಟ್‌ಗಳು, ಬೆಲ್ ಹೆಲಿಕಾಫ್ಟರ್‌ಗಳು, ಡ್ರಾಗನ್‌ಫ್ಲೈ, ಸೆಸ್ನಾಸ್, ಭಾರತೀಯ ನಿರ್ಮಾಣದ ಪುಷ್ಪಕ್ ಮತ್ತು ಭಾರತೀಯ ಸಂಸ್ಥೆ ಹಿದಾವಿಯಾದ ರಶ್ಯಾ ನಿರ್ಮಾಣದ ಪ್ರಾದೇಶಿಕ ವಿಮಾನ ಐಎಲ್-114 ವಿಮಾನಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿವೆ.

ಪ್ರದರ್ಶನದಲ್ಲಿ ಅಮೆರಿಕವು ಪಾಲುದಾರ ರಾಷ್ಟ್ರವಾಗಿದ್ದು, ಅಲ್ಲಿನ ಪ್ರಮುಖ ವಿಮಾನ ಕಂಪೆನಿಗಳು ಮತ್ತು ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನಾಗರಿಕ ವಾಯುಯಾನ ಸಚಿವಾಲಯ ಮತ್ತು ಎಫ್ಐಸಿಸಿಐ ಈ ವೈಮಾನಿಕ ಪ್ರದರ್ಶನವನ್ನು ಆಯೋಜಿಸಿದೆ. 18 ರಾಷ್ಟ್ರಗಳ ಸುಮಾರು 150 ಪ್ರದರ್ಶನಕಾರರ ಭಾಗವಹಿಸುವಿಕೆ ದೃಢಪಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒರಿಸ್ಸಾ, ಕರ್ನಾಟಕ ಕೋಮು ಹಿಂಸೆ ಕಳವಳಕಾರಿ: ಸಿಂಗ್
ಮಾಯಾ-ಸೋನಿಯಾ ರಾಜಕೀಯ ಕದನ
ಕೊಳವೆ ಬಾವಿಗೆ ಬಿದ್ದ ಸೋನು ಮೃತ್ಯು ವಶ
ಅಸ್ವಸ್ಥ ದಾಸ್‌ಮುನ್ಶಿ ಸ್ಥಿತಿ ಗಂಭೀರ
ಬಚ್ಚನ್ ಆಸ್ಪತ್ರೆಯಿಂದ ಶೀಘ್ರವೇ ಬಿಡುಗಡೆ
ದೇವಿ ಪ್ರಸಾದ ಕೇಳಿದ ದಲಿತನ ಹತ್ಯೆ