ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಧಿ ಅವರೊಂದಿಗಿನ ಎರಡನೇ ಸುತ್ತಿನ ಕದನದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯವತಿ ಅವರು ಒಂದು ಹಂತದ ಮೇಲುಗೈ ಸಾಧಿಸಿದ್ದಾರೆ.ಉತ್ತರ ಪ್ರದೇಶದ ರಾಯ್‌ಬರ್ಲಿ ಪ್ರದೇಶದ್ಲಲಿ ಮಾಯಾವತಿ ಸರಕಾರ ನಿಷೇಧಾತ್ಮಕ ಆದೇಶಗಳನ್ನು ಜಾರಿಗೊಳಿಸಿರುವುದರಿಂದ, ಸೋನಿಯಾ ಅವರು ತಮ್ಮ ಲೋಖಸಭಾ ಕ್ಷೇತ್ರದಲ್ಲಿ ರ‌್ಯಾಲಿಯನ್ನು ನಡೆಸುವ ಮತ್ತು ಭೂಮಿ ಪೂಜೆ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.ರಾಯ್‌ಬರ್ಲಿ ಪ್ರದೇಶದಲ್ಲಿ ಜಾರಿಯಾಗಿರುವ ಸೆಕ್ಷನ್ 144ರ ಕ್ರಿಮಿನಲ್ ಕಾಯಿದೆಯ ಅನ್ವಯ ಐದಕ್ಕಿಂತ ಹೆಚ್ಚು ಜನ ಒಂದು ಪ್ರದೇಶದಲ್ಲಿ ಒಟ್ಟುಗೂಡುವಂತಿಲ್ಲ.ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಿಎಲ್.ವರ್ಮಾ ಅವರು, "ರಾಜ್ಯ ಸರಕಾರ ತನ್ನ ವಿವೇಚನಾಧಿಕಾರವನ್ನು ಬಳಸಿಕೊಂಡು ಯಾವುದೇ ರೀತಿಯ ಗುಂಪು ಸೇರುವಿಕೆ, ರ‌್ಯಾಲಿ ಅಥವಾ ಭಾಷಣಗಳನ್ನು ರಾಯ್‌ಬರ್ಲಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸೋನಿಯಾ ಗಾಂಧಿ ಅವರು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ ಮತ್ತು ಪಕ್ಷದ ಕಾರ್ಯಕರ್ತರನ್ನು ಭೇಟಿಮಾಡುತ್ತಾರೆ. ಆದರೆ, ನಿರ್ಧಾರಿತವಾಗಿದ್ದ ಭೂಮಿ ಪೂಜೆ ಕಾರ್ಯಕ್ರಮವನ್ನು ನಡೆಸಲಾಗುವುದಿಲ್ಲ ಎಂದು ಯುಪಿಸಿಸಿ ವಕ್ತಾರ ಅಖಿಲೇಶ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ |
|