ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಜರಂಗದಳ ಮ‌ೂಲಭೂತವಾದಿ ಸಂಘಟನೆ: ಪಟ್ನಾಯಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಜರಂಗದಳ ಮ‌ೂಲಭೂತವಾದಿ ಸಂಘಟನೆ: ಪಟ್ನಾಯಕ್
ಕ್ರೈಸ್ತ ವಿರೋಧಿ ಹಿಂಸಾಚಾರಕ್ಕೆಸಂಬಂಧಿಸಿದಂತೆ ಒರಿಸ್ಸಾದಲ್ಲಿ ಬಂಧಿನಕ್ಕೀಡಾಗಿರುವವರಲ್ಲಿ ಹೆಚ್ಚಿನವರು ಬಜರಂಗ ದಳದವರು ಎಂದು ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಖಾಸಗಿ ವಾಹಿನಿಯೊಂದಕ್ಕೆ ಮಂಗಳವಾರ ತಿಳಿಸಿದ್ದಾರೆ.

"ಬಜರಂಗ ದಳವು ಮೂಲಭೂತವಾದಿ ಸಂಘಟನೆ ಎಂದು ತನ್ನ ಪಕ್ಷವು ಭಾವಿಸುತ್ತದೆ. ಕೇಂದ್ರವು ಬಜರಂಗ ದಳವನ್ನು ನಿಷೇಧಿಸುವ ನಿರ್ಧಾಕ ಕೈಗೊಳ್ಳಲಿ, ಬಳಿಕ ನಾವು ಪ್ರತಿಕ್ರಿಯಿಸುತ್ತೇವೆ" ಎಂದು ಪಟ್ನಾಯಕ್ ಹೇಳಿದ್ದಾರೆ.

ಗೃಸಚಿವಾಲಯವು ಕಳುಹಿಸಿರುವ ಯಾವುದೇ ಪತ್ರದಲ್ಲಿ ಸಂವಿಧಾನದ ವಿಧಿ 355ನ್ನು ಪ್ರಸ್ತಾಪಿಸಲಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ಒರಿಸ್ಸಾದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಹೇರಿಕೆಯು ರಾಜಕೀಯ ದುರ್ಬಳಕೆಯಾದೀತು ಎಂದು ಹೇಳಿದ್ದಾರೆ.

ನಾವು ಸಹಾಯ ಯಾಚಿಸಿದಾಗ ಕೇಂದ್ರವು ತರಬೇತಿ ಪಡೆಯುವವರನ್ನೊಳಗೊಂಡ ಹತ್ತು ಕಂಪೆನಿಗಳನ್ನು ಕಳುಹಿಸಿತು. ಗೃಹ ಸಚಿವಾಲಯವು ಐದು ದಿನ ತಡವಾಗಿ ಹೆಲಿಕಾಫ್ಟರ್‌ಗಳನ್ನು ಕಳುಹಿಸಿತು ಎಂದು ಪಟ್ನಾಯಕ್ ಕೇಂದ್ರವನ್ನು ದೂರಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಯ ಮಾಯೆ: ಸೋನಿಯಾರ ರ‌್ಯಾಲಿ ರದ್ದು
ಮಾಯಾ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
ತ.ನಾ: ಕ್ರೈಸ್ತರ ವಿಶೇಷ ಮೀಸಲಾತಿ ಹಿಂತೆಗೆತ
ಅಸ್ಸಾಂ ಹಿಂಸೆಗೆ ಬಾಂಗ್ಲಾ ವಲಸಿಗರು ಕಾರಣರಲ್ಲ: ಗೊಗೊಯ್
ಬುಧವಾರದಿಂದ ಪ್ರಪ್ರಥಮ ವೈಮಾನಿಕ ಪ್ರದರ್ಶನ
ಒರಿಸ್ಸಾ, ಕರ್ನಾಟಕ ಕೋಮು ಹಿಂಸೆ ಕಳವಳಕಾರಿ: ಸಿಂಗ್