ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಯ್‌ಬರೇಲಿ ಗಾಂಧಿ ಕುಟುಂಬದ ಕರ್ಮಭೂಮಿ: ಸೋನಿಯಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಯ್‌ಬರೇಲಿ ಗಾಂಧಿ ಕುಟುಂಬದ ಕರ್ಮಭೂಮಿ: ಸೋನಿಯಾ
ನಿಷೇಧಾಜ್ಞೆಯನ್ನು ಮುರಿದು, ರಾಯ್ ಬರೇಲಿ ಪ್ರವೇಶಿಸುವ ಮೂಲಕ, ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯವತಿಯವರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಹಿರಂಗ ಸವಾಲೊಡ್ಡಿದ್ದಾರೆ. ರಾಯ್ ಬರೇಲಿ ತನ್ನ ಕರ್ಮಭೂಮಿ ಎಂದಿರುವ ಸೋನಿಯಾ, ತನ್ನ ಮನೆಗೆ ಪ್ರವೇಶಿಸುವುದರಿಂದ ತನ್ನನ್ನು ಯಾರೂ ತಡೆಯಲಾರರು. ರಾಯ್‌ಬರೇಲಿಯ ಹಿತಾಸಕ್ತಿಯನ್ನು ರಕ್ಷಿಸಲೋಸುಗ ತಾನು ಜೈಲಿಗೆ ಹೋಗಲೂ ಸಿದ್ಧ ಎಂದು ಹೇಳಿದ್ದಾರೆ.

ಮಂಗಳವಾರ ನಿಗದಿಯಾಗಿದ್ದ ಸೋನಿಯಾ ಅವರ ಸಾರ್ವಜನಿಕ ರ‌್ಯಾಲಿಯನ್ನು, ಜಿಲ್ಲೆಯಲ್ಲಿ ಸೆಕ್ಷನ್ 144ನ್ನು ಹೇರಲಾಗಿರುವ ಹಿನ್ನೆಲೆಯಲ್ಲಿ ರದ್ದು ಪಡಿಸಿದ್ದರೂ ಅವರು ತನ್ನ ಬೆಂಬಲಿಗರೊಡನೆ ಜೆಲ್ಲೆಯನ್ನು ಪ್ರವೇಶಿಸಿದ್ದಾರೆ.

ಮುಖ್ಯಮಂತ್ರಿ ಮಾಯಾವತಿ, ಸೋನಿಯಾ ಅವರು ರಾಯ್‌ಬರೇಲಿ ತಲುಪುವ ಹಾದಿಯನ್ನು ಬದಲಿಸಿದ್ದರು. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ, ನಿಗದಿತ ಹಾದಿ ಮುಖಾಂತರವೇ ತನ್ನ ಕ್ಷೇತ್ರವನ್ನು ತಲುಪಿ ಮಯಾಗೆ ಸೆಡ್ಡು ಹೊಡೆದಿದ್ದಾರೆ.

"ರಾಯ್‌ಬರೇಲಿ ಮತ್ತು ಅಮೇಠಿಯು ಫಿರೋಜ್, ರಾಜೀವ್ ಹಾಗೂ ಇಂದಿರಾ ಗಾಂಧಿಯವರ ಕರ್ಮಭೂಮಿಯಾಗಿತ್ತು. ಮತ್ತು ಇದೀಗ ಅದು ನನ್ನ ಹಾಗೂ ರಾಹುಲ್‌ನ ಕರ್ಮಭೂಮಿಯಾಗಿದೆ" ಎಂದು ಸೋನಿಯಾ ಹೇಳಿದರು.

ರೈಲ್ ಕೋಚ್‌ಗಾಗಿ ಭೂಮಿ ಮಂಜೂರಾತಿ ವಿವಾದದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸೋನಿಯಾ, ಪ್ರಕರಣವು ನ್ಯಾಯಾಲಯದಲ್ಲಿರುವ ಕಾರಣ ಆ ಕುರಿತು ಪ್ರತಿಕ್ರಿಯಿಸಲು ಇದು ಸೂಕ್ತ ಸಮಯವಲ್ಲ ಎಂದು ನುಡಿದರು.
ನಿಗದಿಯಂತೆ, ಸೋನಿಯಾ ಅವರ ಕನಸಿನ ಕೂಸಾಗಿರುವ ರೈಲ್ ಕೋಚ್ ಯೋಜನೆಗೆ ಮಂಗಳವಾರ ಭೂಮಿ ಪೂಜೆ ನಡೆಯಬೇಕಿತ್ತು. ಆದರೆ, ಜಾಗದ ಮಂಜೂರಾತಿಯನ್ನು ಉತ್ತರ ಪ್ರದೇಶ ಸರಕಾರ ಹಿಂತೆಗೆದುಕೊಂಡ ಕಾರಣ ಭೂಮಿಪೂಜೆ ರದ್ದಾಗಿದೆ.

ಸಂತೋಷದ ಸಮಾರಂಭದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ್ದೆ, ಆದರೆ ಅದು ನಡೆಯತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಕೇಂದ್ರ ಸರಕಾರವು ರಾಜ್ಯಕ್ಕಾಗಿ ಹಲವು ಯೋಜನೆಗಳನ್ನು ಮಂಜೂರು ಮಾಡಿದೆಯಾದರೂ, ರಾಜ್ಯ ಸರಕಾರ ಅಡೆತಡೆಯುಂಟು ಮಾಡಿದೆ ಎಂದು ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಉದ್ದೇಶಿತ ಸಮಾರಂಭದಲ್ಲಿ ಸೋನಿಯಾ ಪುತ್ರ ರಾಹುಲ್ ಗಾಂಧಿ ಮತ್ತು ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಭಾಗವಹಿಸಬೇಕಿತ್ತು.

ರೈಲ್‌ಕೋಚ್ ಯೋಜನೆಗೆ ಭೂಮಿ ಮಂಜೂರಾತಿ ಪ್ರಕರಣವು ನ್ಯಾಯಾಲಯದಲ್ಲಿದ್ದು ಅಕ್ಟೋಬರ್ 22ರಂದು ವಿಚಾರಣೆ ನಡೆಯಲಿದೆ. ಆ ಬಳಿಕ ಭೂಮಿಪೂಜೆ ಕಾರ್ಯಕ್ರಮವನ್ನು ನಿರೀಕ್ಷಿಸಲಾಗಿದೆ. ಮಾಯಾವತಿಯರು ನೀಡಿರುವ ಭೂಮಿ ಮಂಜೂರಾತಿಯ ಹಿಂತೆಗೆತ ಆದೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಭೂಮಿ ಮಂಜೂರಾತಿ ಹಾಗೂ ವಾಪಸಾತಿ ವಿಚಾರವೀಗ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯವತಿ ಅವರುಗಳ ಪ್ರತಿಷ್ಠೆಯ ವಿಚಾರವಾಗಿದ್ದು, ಉಭಯ ನಾಯಕಿಯರ ನಡುವಿನ ಕದನಕ್ಕೆ ಕಾರಣವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿವಾಹದ ತಕ್ಷಣ ವಿವಾದ: ವರ ಪರಾರಿ, ವಧು ಆಸ್ಪತ್ರೆಗೆ!
ನೋಬೆಲ್ ಪ್ರಶಸ್ತಿ: 11 ಬಾರಿ ವಿಫಲರಾಗಿದ್ದ ನೆಹರೂ!
ಐದು ರಾಜ್ಯಗಳಲ್ಲಿ ಚುನಾವಣಾ ದಿನಾಂಕ ಘೋಷಣೆ
ಬರಿಗೈಲಿ ಹಿಂತಿರುಗಿದ ದುರಾಸೆಯ ವರ!
ಬಜರಂಗದಳ ಮ‌ೂಲಭೂತವಾದಿ ಸಂಘಟನೆ: ಪಟ್ನಾಯಕ್
ಮಾಯ ಮಾಯೆ: ಸೋನಿಯಾರ ರ‌್ಯಾಲಿ ರದ್ದು