ಶ್ರೀರಾಮನು ಲಂಕಾಕ್ಕೆ ತೆರಳಲು ಕಟ್ಟಿಸಿದ್ದನು ಎಂದು ಬಹಳಷ್ಟು ಹಿಂದೂಗಳು ನಂಬುವ ರಾಮಸೇತು ಹಿಂದೂ ಧರ್ಮಕ್ಕೆ ಸೇರಿಲ್ಲವೆಂದು ಸರಾಕಾರ ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಿದೆ.ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಸಲ್ಲಿಸಿರುವ ಅಫಿದಾವತ್‌ನಲ್ಲಿ, 48 ಕಿ.ಮೀ ಉದ್ದದ ಕಲ್ಲುಗಳ ಸೇತುವೆಯನ್ನು ಸ್ವತಃ ಶ್ರೀರಾಮನೇ ನಾಶ ಪಡಿಸಿದ್ದರು ಮತ್ತು ಇದು ಹಲವು ಹಿಂದುಗಳು ಹೇಳಿರುವಂತೆ ಪೂಜ್ಯ ಸ್ಥಳವಲ್ಲ ಎಂದು ಅಫಿದಾವತ್‌ನಲ್ಲಿ ತಿಳಿಸಲಾಗಿದೆಭಾರತ ಮತ್ತು ಶ್ರೀಲಂಕಾಗಳ ನಡುವೆ ಸೇತುಸಮುದ್ರಂ ನೌಕಾಯಾನ ಕಾಲುವೆ ಯೋಜನೆಯಡಿ ನಿರ್ಮಿಸಲು ನಿರ್ಧರಿಸಲಾಗಿರುವ ನೌಕಾಯಾನ ಕಾಲುವೆಯ ಸಂದರ್ಭ ರಾಮ ಸೇತುವೆಯನ್ನು ನಾಶಪಡಿಸಲಾಗುತ್ತದೆ ಎಂದು ಒಂದು ಗುಂಪು ಪ್ರತಿಪಾದಿಸುತ್ತಿದೆ.ಕೇಂದ್ರ ಸರಕಾರ ಸಲ್ಲಿಸಿರುವ ಅಫಿದಾವತ್‌ಗೆ ತಮಿಳು ಸನ್ಯಾಸಿ ಕಂಬಾರ ಅವರು ಬರೆದಿರುವ ಕಂಬ ಪುರಾಣವನ್ನು ಆಧಾರವಾಗಿ ನೀಡಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಯೋಜನೆಗೆ ಬದಲಿ ಹೊಂದಾಣಿಕೆಯ ಸಾಧ್ಯತೆಗಳ ಬಗ್ಗೆ ಸರಕಾರ ಪರಿವೀಕ್ಷಣೆ ನಡೆಸಿದ್ದು, ಪ್ರಸ್ತುತ ಸಲ್ಲಿಸಿರುವ ಅಫಿದಾವತ್ ಆಶ್ಚರ್ಯಕ್ಕೆ ಎಡೆ ಮಾಡಿದೆ. ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯ ಸ್ವಾಮಿ ಮತ್ತು ಇತರ ಹಲವು ಸಂಘಟನೆಗಳು ರಾಮಸೇತು ಪೂಜ್ಯ ಸ್ಥಳ ಮತ್ತು ಹಿಂದೂಗಳಿಗೆ ಪೂಜನೀಯವಾದುದು. ಇದನ್ನು ಶ್ರೀರಾಮ ಮತ್ತು ಅವರ ಸೇನೆ ಲಂಕಾವನ್ನು ತಲುಪುವುದಕ್ಕಾಗಿ ನಿರ್ಮಿಸಿತ್ತು ಎಂದು ಸುಪ್ರೀಂ ಕೋರ್ಟ್‌ಗೆ ದೂರುಸಲ್ಲಿಸಿದ್ದರು.ಸೇತುವೆಯನ್ನು ಉಳಿಸಲು, ಸೇತು ಸಮುದ್ರ ಯೋಜನೆಗೆ ಬದಲಿ ದಾರಿಯ ಸಾಧ್ಯತೆಯನ್ನು ಪರೀಕ್ಷಿಸಲು ಕೇಂದ್ರ ಸರಕಾರ ಆರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಸರ್ವೊಚ್ಚ ನ್ಯಾಯಾಲಯವು ಆರು ಸದಸ್ಯರ ಸಮಿತಿಯ ವರದಿಯ ನಿರೀಕ್ಷೆಯಲ್ಲಿದೆ. |
|