ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಪ್ಟ್ರಪತಿಗೆ ಐದು ಬೆದರಿಕಾ ಇಮೇಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಪ್ಟ್ರಪತಿಗೆ ಐದು ಬೆದರಿಕಾ ಇಮೇಲ್
ನವದೆಹಲಿ: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಮಂಗಳವಾರ ಐದು ಬೆದರಿಕಾ ಇಮೇಲ್‌ಗಳನ್ನು ಪಡೆದಿದ್ದು, ಇದು ಭದ್ರತಾ ಪಡೆಗಳಿಗೆ ಭಾರೀ ತಲೆನೋವು ತಂದಿಟ್ಟಿದೆ.

PTI
[email protected] ಎಂಬ ವಿಳಾಸದಿಂದ ಕಳುಹಿಸಲಾಗಿದ್ದ ಇಮೇಲ್‌ನಲ್ಲಿ ಪಾಟೀಲ್ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿದ್ದು, ಭೀಕರ ಪರಿಣಾಮಗಳ ಬೆದರಿಕೆಯನ್ನೂ ಒಡ್ಡಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಭಾನುವಾರದಂದೂ, ರಾಷ್ಟ್ರಪತಿಗಳಿಗೆ ಬೆದರಿಕಾ ಇಮೇಲ್ ರವಾನಿಸಲಾಗಿದ್ದು, ಇದನ್ನು ತಮಿಳ್ನಾಡಿನಿಂದ ಕಳುಹಿಸಲಾಗಿದೆ ಎಂದು ಭದ್ರತಾ ಏಜೆನ್ಸಿಗಳು ಪತ್ತೆಹಚ್ಚಿವೆ.

ಆದರೆ, ಅಂತರ್ಜಾಲ ಸಂಪರ್ಕ ಒದಗಿಸುವ ಏರ್‌ಟೆಲ್‌ ಈ ಸಂಪರ್ಕದ ಕುರಿತು ವಿವರಣೆಗಳನ್ನು ಒದಗಿಸಲು ವಿಫಲವಾಗಿದೆ.
ಎಲ್ಲಾ ಇಮೇಲ್‌ಗಳನ್ನು ರಾಷ್ಟ್ರಪತಿಗಳ ಅಧಿಕೃತ ವೆಬ್‌ಸೈಟ್‌ಗೆ ಕಳುಹಿಸಲಾಗಿದೆ. ಇಮಲ್ ರವಾನಿಸಿದಾತನೊಬ್ಬ ಉನ್ಮಾದಿಯಾಗಿರಬೇಕು ಎಂದು ಇದರ ತನಿಖೆಯಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳು ಹೇಳಿದ್ದಾರೆ.

ಇಮೇಲ್ ಕಳುಹಿಸಿದಾತನ ಜಾಡನ್ನು ಹಿಡಿಯಲು ತಮಿಳ್ನಾಡು ಪೊಲೀಸ್, ಕೇಂದ್ರದ ಭದ್ರತಾ ಏಜೆನ್ಸಿಗಳ ಪರಿಣತರ ತಂಡವನ್ನು ರೂಪಿಸಿದೆ.

ಭದ್ರತಾ ಏಜೆನ್ಸಿಯು ಬೆದರಿಕಾ ಇಮೇಲ್ ಕಳುಹಿಸಿದವರ ಪತ್ತೆಗಾಗಿ ಜಿಮೇಲ್ ಪೋರ್ಟಲ್‌ನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೋನಿಯಾ ರ‌್ಯಾಲಿ ನಿರಾಕರಣೆ, ಈಗ ಎಂಪಿ ಸರದಿ
ಮಂಗಳೂರ ಅಡಿಗರಿಗೆ ಬೂಕರ್ ಪ್ರಶಸ್ತಿ
ರಾಮಸೇತು ಹಿಂದೂಧರ್ಮದ ಭಾಗವಲ್ಲ:ಸರಕಾರ
ಕಾನ್ಪುರ ಬಾಂಬ್ ಬ್ಲಾಸ್ಟ್:6ಮಂದಿಗೆ ಗಾಯ
ರಾಯ್‌ಬರೇಲಿ ಗಾಂಧಿ ಕುಟುಂಬದ ಕರ್ಮಭೂಮಿ: ಸೋನಿಯಾ
ವಿವಾಹದ ತಕ್ಷಣ ವಿವಾದ: ವರ ಪರಾರಿ, ವಧು ಆಸ್ಪತ್ರೆಗೆ!