ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಜ್ಯಸಭೆಗೆ ಕನಿಮೋಳ್ ರಾಜೀನಾಮೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯಸಭೆಗೆ ಕನಿಮೋಳ್ ರಾಜೀನಾಮೆ
PTI
ರಾಜ್ಯಸಭಾ ಸದಸ್ಯೆ ಡಿಎಂಕೆಯ ಕನಿಮೋಳ್ ಬುಧವಾರ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಶ್ರೀಲಂಕಾದಲ್ಲಿ ಕದನವಿರಾಮಕ್ಕೆ ಕರೆನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು, ಸರ್ವಪಕ್ಷದ ಸಭೆಯಲ್ಲಿ ನಿರ್ಧಾರ ಕೈಗೊಂಡಿರುವಂತೆ, ಕನಿಮೋಳ್ ತನ್ನ ರಾಜೀನಾಮೆ ಪತ್ರವನ್ನು ಡಿಎಂಕೆ ವರಿಷ್ಠ ಹಾಗೂ ತನ್ನ ತಂದೆ ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿಯವರಿಗೆ ಸಲ್ಲಿಸಿದ್ದಾರೆ.

ಮಂಗಳವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಶ್ರೀಲಂಕಾದ ತಮಿಳರ ಕರಿತಂತೆ ತಮ್ಮ ಬೇಡಿಕೆಯ ಮೇಲೆ ಒತ್ತಡ ಹೇರಲು ತಮಿಳ್ನಾಡಿನ ಎಲ್ಲಾ ಸಂಸತ್ ಸದಸ್ಯರು ಹದಿನೈದು ದಿನಗಳೊಳಗಾಗಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ನಿರ್ಧಾರ ಕೈಗೊಳ್ಳಲಾಗಿದ್ದು, ಅದರಂತೆ ಕನಿಮೋಳ್ ರಾಜೀನಾಮೆ ಸಲ್ಲಿಸಿದ್ದಾರೆ.

ತನ್ನ ರಾಜೀನಾಮೆಯ ಕುರಿತು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಕನಿಮೋಳ್ ರಾಜೀನಾಮೆ ಸಲ್ಲಿಸಿದ ಬಳಿಕ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಉತ್ತರ ಶ್ರೀಲಂಕಾದ ತಮಿಳು ಭಾಷಿಕರ ಬಾಹುಳ್ಯದ ಪ್ರದೇಶದಲ್ಲಿ ಕದನ ವಿರಾಮ ಘೋಷಿಸುವಂತೆ ಕರೆ ನೀಡಲು ಮಂಗಳವಾರದ ಸಭೆಯಲ್ಲಿ ಕೇಂದ್ರಕ್ಕೆ 15 ದಿನಗಳ ಗಡುವು ನೀಡಲಾಗಿದೆ ಎಂದು ಅವರು ನುಡಿದರು.

ಡಿಎಂಕೆ, ಕಾಂಗ್ರೆಸ್, ಎಡಪಕ್ಷಗಳು ಹಾಗೂ ಇತರ ಕೆಲವು ಪಕ್ಷಗಳು ಮಂಗಳವಾರದ ಸಭೆಯಲ್ಲಿ ಪಾಲ್ಗೊಂಡಿದ್ದರೆ, ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ, ಅದರ ಮಿತ್ರ ಪಕ್ಷ ಎಂಡಿಎಂಕೆ, ಬಿಜೆಪಿ ಮತ್ತು ಡಿಎಂಡಿಕೆಗಳು ಸಭೆಯನ್ನು ಬಹಿಷ್ಕರಿಸಿವೆಯಲ್ಲದೆ, ಈ ಉಪಕ್ರಮವನ್ನು ಕಣ್ಣೊರೆಸುವ ತಂತ್ರ ಎಂದು ಕರೆದಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೋನಿಯಾರದ್ದು ಬರೀ ನಾಟಕ: ಮಾಯಾವತಿ
ಅಗರ್ತಲ ಸರಣಿ ಸ್ಫೋಟ ರೂವಾರಿಗಳ ಬಂಧನ
ರಾಪ್ಟ್ರಪತಿಗೆ ಐದು ಬೆದರಿಕಾ ಇಮೇಲ್
ಸೋನಿಯಾ ರ‌್ಯಾಲಿ ನಿರಾಕರಣೆ, ಈಗ ಎಂಪಿ ಸರದಿ
ಮಂಗಳೂರ ಅಡಿಗರಿಗೆ ಬೂಕರ್ ಪ್ರಶಸ್ತಿ
ರಾಮಸೇತು ಹಿಂದೂಧರ್ಮದ ಭಾಗವಲ್ಲ:ಸರಕಾರ