ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಮ ಸೇತು: 'ಯುಪಿಎ ಪ್ರಚೋದನೆ ಉದ್ದೇಶಪೂರ್ವಕ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಮ ಸೇತು: 'ಯುಪಿಎ ಪ್ರಚೋದನೆ ಉದ್ದೇಶಪೂರ್ವಕ'
ರಾಮ ಸೇತುವು ಆರಾಧನಾ ಸ್ಥಳವಾಗಿತ್ತು ಎಂಬುದರ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಸುಪ್ರೀಂ ಕೋರ್ಟಿಗೆ ಹೇಳಿಕೆ ನೀಡುವ ಮೂಲಕ ಹಿಂದೂ ಭಾವನೆಗಳನ್ನು ಕೆದಕಿದೆ ಮತ್ತು ಘಾಸಿಯುಂಟು ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

"ರಾಮ ಸೇತು ಸ್ಥಳವು ಪೂಜಾ ಸ್ಥಳವಾಗಿತ್ತು ಮತ್ತು ಅದು ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿತ್ತು ಎಂಬುದರ ಬಗ್ಗೆ ಯಾವುದೇ ಸಾಕ್ಷಿ ಇಲ್ಲ ಎಂದು ಹೇಳುವ ಮೂಲಕ ಯುಪಿಎ, ಮತ್ತೊಮ್ಮೆ ಹಿಂದೂಗಳ ಭಾವನೆಯನ್ನು ಘಾಸಿಗೊಳಿಸಲು ಮತ್ತು ನಿಂದಿಸಲು ಪ್ರಯತ್ನಿಸಿದೆ" ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಹಿಂದೂ ಧರ್ಮದ ಅವಿಭಾಜ್ಯ ಅಂಗಗಳು ಏನು ಎಂಬುದನ್ನು ವ್ಯಾಖ್ಯಾನಿಸಲು ಕೇಂದ್ರಕ್ಕೆ ಯಾವುದೇ ಹಕ್ಕಿಲ್ಲ. ಹಿಂದೂ ಧರ್ಮಕ್ಕೆ ಯಾವುದು ಅವಿಭಾಜ್ಯ ಅಂಗ ಮತ್ತು ಯಾವುದು ಅಲ್ಲ ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ಅದು ಸ್ವಯಂಘೋಷಿತವಾಗಿ ಪಡೆದುಕೊಳ್ಳತೊಡಗಿದೆ. ಯುಪಿಎ ಸರಕಾರಕ್ಕೆ ಈ ಅಧಿಕಾರ ಕೊಟ್ಟವರಾರು ಎಂದು ಅವರು ಪ್ರಶ್ನಿಸಿದರು.

ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿದವಿತ್‌ನಲ್ಲಿ ಬಳಸಿರುವ ಭಾಷೆಯನ್ನು "ಅವಮಾನಕರ ಮತ್ತು ಹಿಂದೂ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಉದ್ದೇಶ ಹೊಂದಿದೆ" ಎಂದು ಬಣ್ಣಿಸಿದ ಪ್ರಸಾದ್, ಬೇರಾವುದೇ ಧರ್ಮದ ಪೂಜನೀಯ ಸಂಕೇತಗಳಿಗೆ ಎಂದಿಗೂ ಈ ಭಾಷೆ ಬಳಸಲಾರದು ಎಂದು ಹೇಳಿದರು.

ರಾಮ ಸೇತು ಕುರಿತು ಸಲ್ಲಿಸಿದ ಅಫಿದವಿತ್‌ಗೆ ಸಮರ್ಥ ಆಧಾರಗಳೇನು ಎಂಬುದನ್ನು ಯುಪಿಎ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ ಅವರು, ಈ ವಿವಾದದಲ್ಲಿ ಯುಪಿಎ ನಿಲುವು ಅತ್ಯಂತ ಖಂಡನೀಯ. ಈ ನಿಲುವಿನ ಹಿಂದಿರುವ ಐತಿಹಾಸಿಕ, ತಾತ್ವಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಆಧಾರಗಳೇನು ಎಂದವರು ಪ್ರಶ್ನಿಸಿದರು.

ರಾಮನ ಜೀವನ ಗಾಥೆಯು ಸಾವಿರಾರು ವರ್ಷಗಳಿಂದ ಹಿಂದೂಗಳ ಮನೆ-ಮನದಲ್ಲಿ ಅಚ್ಚಳಿಯದೆ ಇದ್ದು, ರಾಮ ಸೇತುವೂ ಅದರ ಒಂದು ಭಾಗ ಎಂದ ಅವರು, ಈ ಹಿಂದೆ ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ಯುಪಿಎ, ಆ ಬಳಿಕ ಶ್ರೀರಾಮನೇ ರಾಮ ಸೇತುವನ್ನು ಧ್ವಂಸ ಮಾಡಿದ ಎಂದು ಸುಪ್ರೀಂಕೋರ್ಟಿಗೆ ಹೇಳಿತು. ಇದು ಅದರ ಇಬ್ಬಗೆಯ ಧೋರಣೆಯ ಪ್ರತೀಕ ಎಂದು ಟೀಕಿಸಿದರು.

ಇದು ಹಿಂದೂಗಳ ಭಾವನೆಗಳ್ನು ಘಾಸಿಗೊಳಿಸುವ ಯುಪಿಎಯ ಯೋಜಿತ, ಸ್ಥಿರವಾಗಿರುವ ಮತ್ತು ಉದ್ದೇಶಪೂರ್ವಕ ಪ್ರಯತ್ನ ಎಂದವರು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ಯಸಭೆಗೆ ಕನಿಮೋಳ್ ರಾಜೀನಾಮೆ
ಸೋನಿಯಾರದ್ದು ಬರೀ ನಾಟಕ: ಮಾಯಾವತಿ
ಅಗರ್ತಲ ಸರಣಿ ಸ್ಫೋಟ ರೂವಾರಿಗಳ ಬಂಧನ
ರಾಪ್ಟ್ರಪತಿಗೆ ಐದು ಬೆದರಿಕಾ ಇಮೇಲ್
ಸೋನಿಯಾ ರ‌್ಯಾಲಿ ನಿರಾಕರಣೆ, ಈಗ ಎಂಪಿ ಸರದಿ
ಮಂಗಳೂರ ಅಡಿಗರಿಗೆ ಬೂಕರ್ ಪ್ರಶಸ್ತಿ