14ವರ್ಷದ ಜರ್ಮನ್ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ ಸರಿಯಾದ ರೀತಿಯಲ್ಲಿ ತನಿಖೆಯಾಗಲಿ ಎಂದು ಜರ್ಮನ್ ಕೌನ್ಲಲ್ ಜನರಲ್ ಅವರು ಗೋವಾ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಅಲ್ಲದೇ ತಾಯಿ ಮತ್ತು ಮಗಳಿಗೆ ಸರಿಯಾದ ಭದ್ರತೆ ನೀಡಿ ಎಂದು ಸಹ ಕೌನ್ಸಿಲ್ ಜನರ್ ಅವರು ಮನವಿ ಮಾಡಿಕೊಂಡಿದ್ದಾರೆ.
14ವರ್ಷದ ಜರ್ಮನ್ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ಗೋವಾ ಶಿಕ್ಷಣ ಸಚಿವ ಬಾಬುಶ್ ಮೊನಸರಟ್ಟೆ ಅವರ ಪುತ್ರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಮ್ಮ ಮಗಳಿಗೆ ಅಶ್ಲೀಲ ಎಸ್ಎಂಎಸ್ ಅನ್ನು ಕಳುಹಿಸಲಾಗುತ್ತಿದೆ ಎಂದು ಆರೋಪಿಸಿ ಬಾಲಕಿಯ ತಾಯಿ ದೂರು ನೀಡಿದ ಕೆಲವು ದಿನಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ಅಶ್ಲೀಲ ಎಸ್ಎಂಎಸ್ ನೋಡಿದ ನಂತರ ಪೊಲೀಸರು ಸಚಿವರ ಪುತ್ರನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ. |