ಗುಜರಾತಿನಲ್ಲಿ ನ್ಯಾನೋ ಘಟಕವನ್ನು ಸ್ಥಾಪಿಸಲುದ್ದೇಶಿಸಿರುವ ಸನಂದ್‌ನಲ್ಲಿ ರೈತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆಪಾದಿಸಿರುವ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್, ಟಾಟಾ ನ್ಯಾನೋವನ್ನು ಬಿಹಾರಕ್ಕೆ ಆಹ್ವಾನಿಸಿದ್ದಾರೆ.
"ಸನಂದ್ ರೈತರಿಗೆ ಕಿರುಕುಳ ನೀಡಲಾಗಿದೆ. ಗುಜರಾತಿನಲ್ಲಿ ಯೋಜನೆಯು ಇರಬೇಕೆಂದಾದರೆ, ಅದು ದ್ವಾರಕದಲ್ಲಿ ಇರಬೇಕಿತ್ತು. ನೀವು ನಿಜವಾಗಿಯೂ ಯೋಜನೆಗಾಗಿ ಭೂಮಿ ಹುಡುಕುತ್ತಿದ್ದರೆ, ಬಿಹಾರಕ್ಕೆ ಬನ್ನಿ" ಎಂದು ಲಾಲು ಪ್ರಸಾದ್ ಯಾದವ್ ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ನೀಡಿದ 15 ನಿಮಿಷಗಳ ಭಾಷಣದಲ್ಲಿ ಹೇಳಿದ್ದಾರೆ.
ರೈಲ್ವೇ ರಕ್ಷಣಾ ಪಡೆ(ಆರ್‌ಪಿಎಫ್)ಗೆ 10 ಸಾವಿರ ಸಿಬ್ಬಂದಿಗಳನ್ನು ನೇಮಿಸಲು ರೈಲ್ವೇಯು ಯೋಜಿಸಿದೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.
ಅವರು ಇಲ್ಲಿಗೆ ವೆರಾವಲ್-ಸೋಮನಾಥ್ ಬ್ರಾಡ್‌ಗೇಜ್ ಮತ್ತು ವೆರಾವಲ್-ಜಬಲ್ಪುರ ಎಕ್ಸ್‌ಪ್ರೆಸ್ ರೈಲು ಉದ್ಘಾಟನೆಗಾಗಿ ಆಗಮಿಸಿದ್ದರು.
300 ದಶಲಕ್ಷ ರೂಪಾಯಿ ವೆಚ್ಚದ ವೆರಾವಲ್-ಸೋಮನಾಥ್ ರೈಲು ಮಾರ್ಗವು ರಾಷ್ಟ್ರಾದ್ಯಂತ ಯಾತ್ರಿಕರು ಸುಪ್ರಸಿದ್ಧ ಸೋಮನಾಥ ದೇವಾಲಯಕ್ಕೆ ತಲುಪಲು ಅನುಕೂಲ ಕಲ್ಪಿಸುತ್ತದೆ. ಸೋಮನಾಥ ದೇವಾಲಯವು ವೆರಾವಲ್ ರೈಲ್ವೇ ನಿಲ್ದಾಣದಿಂದ ಏಳು ಕಿ.ಮೀ ದೂರದಲ್ಲಿದೆ.
ಮುಂದಿನ ಬಜೆಟ್‌ನಲ್ಲಿ ಡಿಯುವಿನಿಂದ ದ್ವಾರಕಕ್ಕೆ ರೈಲು ಮಾರ್ಗವನ್ನು ಪ್ರಸ್ತಾಪಿಸುವುದಾಗಿ ಅವರು ನುಡಿದರು.
ಸಾರ್ವಜನಿಕ ಹಿಸಾಸಕ್ತಿ ಅರ್ಜಿ ಸನಂದ್‌ನಲ್ಲಿ ನ್ಯಾನೋ ಯೋಜನೆಯಾಗಿ ಕೃಷಿ ಭೂಮಿಯನ್ನು ಬಳಸಲುದ್ದೇಶಿಸಿರುವುದನ್ನು ಪ್ರಶ್ನಿಸಿ ಬುಧವಾರ ಗುಜರಾತ್ ಹೈ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ಅಲ್ಲದೆ ರೈತರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದೂ ಒತ್ತಾಯಿಸಲಾಗಿದೆ. |