ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಇಮೇಲ್ ಬೆದರಿಕೆ ಕಳುಹಿಸಿದ್ದ ಆರೋಪದ ಮೇಲೆ ಸಾಫ್ಟ್‌ವೇರ್ ಉದ್ಯೋಗಿಯೋರ್ವನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.ರಾಷ್ಟ್ರಪತಿಯವರ ಅಧಿಕೃತ ವೆಬ್‌ಸೈಟ್ www.presidentofindia.gov.inಗೆ ಬೆದರಿಕೆ ಇಮೇಲ್‌ಗಳು [email protected] ವಿಳಾಸದಿಂದ ಬಂದ ಹಿನ್ನಲೆಯಲ್ಲಿ ಚೆನ್ನೈ ಪೊಲೀಸರು ಮತ್ತು ಕೇಂದ್ರ ತನಿಖಾ ದಳ ಇಂಟರ್‌ನೆಟ್ ಪ್ರೊಟೋಕಾಲ್ ವಿಳಾಸಗಳನ್ನು ಪತ್ತೆ ಹಚ್ಚಿ ಇಬ್ಬರು ಶಂಕಿತರನ್ನು ಈ ಸಂಬಂಧ ಪ್ರಶ್ನಿಸಿದ್ದರು. ಅವರಲ್ಲೊಬ್ಬನಾದ ಶ್ರೀರಾಮ್ ಜಗನ್ನಾಥ್ (23) ಎಂಬಾತನನ್ನು ಆರೋಪಿ ಎಂದು ಗುರುತಿಸಲಾಗಿದ್ದು ಬುಧವಾರ ಆತನನ್ನು ಬಂಧಿಸಲಾಗಿದೆ. |
|