ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೆಹಲಿ ಸರಣಿ ಸ್ಫೋಟ ಶಂಕಿತರು ಪೊಲೀಸ್ ವಶಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ ಸರಣಿ ಸ್ಫೋಟ ಶಂಕಿತರು ಪೊಲೀಸ್ ವಶಕ್ಕೆ
ದೆಹಲಿ ಸರಣಿ ಸ್ಫೋಟದ ಐವರು ಶಂಕಿತ ಉಗ್ರರನ್ನು ನ್ಯಾಯಾಲಯ ಮತ್ತೆ 12 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ತನಿಖಾ ದಳ ಶಂಕಿತರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕಲು ಮತ್ತು ವಿವಿಧ ದೃಷ್ಟಿಕೋನಗಳಿಂದ ನೈಜ ವಿಚಾರ ತಿಳಿದು ಕೊಳ್ಳಲು ಕಾಲಾವಕಾಶದ ಅಗತ್ಯ ಪೊಲೀಸರಿಗಿರುವ ಕಾರಣ ಅಕ್ಟೋಬರ್ 27ರ ವರೆಗೆ ಶಂಕಿತರನ್ನು ಪೊಲೀಸ್ ವಶಕ್ಕೊಪ್ಪಿಸಲಾಗಿದೆ ಎಂದು ದೆಹಲಿ ಮಹಾನಗರದ ಮುಖ್ಯ ನ್ಯಾಯಾಧೀಶ ಸಂಜೀವ ಜೈನ್ ತಿಳಿಸಿದ್ದಾರೆ.

ಮಹಮ್ಮದ್ ಸೈಫ್, ಝೀಷಾನ್ ಅಹ್ಮದ್, ಮಹಮ್ಮದ್ ಶಕೀಲ್, ಝಿಯಾ-ಉರ್-ರೆಹಮಾನ್ ಮತ್ತು ಸಖೀಬ್ ನಿಸ್ಸಾರ್ ಎಂಬವರು ಇದೀಗ ಪೊಲೀಸ್ ಕಸ್ಟಡಿಯಲ್ಲಿರುವ ಶಂಕಿತ ಭಯೋತ್ಪಾದಕರು.

ಸೆಪ್ಟೆಂಬರ್ 13ರಂದು ದೆಹಲಿಯ ಹಲವು ಕಡೆ ನಡೆಸಿದ ಸರಣಿ ಬಾಂಬ್ ಸ್ಫೋಟದಲ್ಲಿ 25 ಮಂದಿ ಸಾವನ್ನಪ್ಪಿದ್ದರು. ಈ ಹಿನ್ನಲೆಯಲ್ಲಿ ಬಂಧಿತರಾಗಿದ್ದ ಐವರು ಶಂಕಿತರು 26 ದಿನ ಪೊಲೀಸ್ ಕಸ್ಟಡಿಯಲ್ಲಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಷ್ಟ್ರಪತಿಗೆ ಇಮೇಲ್ ಬೆದರಿಕೆ: ಓರ್ವ ಸೆರೆ
ನ್ಯಾನೋಗಾಗಿ ಗುಜರಾತ್ ರೈತರಿಗೆ ಕಿರುಕುಳ: ಲಾಲೂ
ಮೈಗಳ್ಳ, ಭ್ರಷ್ಟ ಜಡ್ಜ್‌ಗಳು ತೊಲಗಲಿ: ಸಿಜೆಐ
ಬಾಲಕರಿಂದ ಖೋಟಾ ನೋಟು ವಶ
ಹಿಮಾಚಲ: ಅಪಘಾತಕ್ಕೆ 9 ಬಲಿ
ಆಡ್ವಾಣಿ ಕಾರ್‌ಕೇಡ್‌ನಿಂದ ಮುಸ್ಲಿಂ ಚಾಲಕರು ಹೊರಗೆ