ಹಡಗಿನ ಸಹಿತ ಅಪಹರಣಕ್ಕೊಳಗಾಗಿದ್ದ ಕಾಸರಗೋಡಿನ ವ್ಯಕ್ತಿ ಸೇರಿದಂತೆ ಮೂವರು ಭಾರತೀಯರು ಬಿಡುಗಡೆಗೊಂಡು ಇದೀಗ ಮುಂಬಯಿ ತಲುಪಿದ್ದಾರೆ.
ಚೀನಾದಿಂದ ನೆದರ್‌ಲ್ಯಾಂಡ್‌ಗೆ ಹೋಗುತ್ತಿದ್ದ 'ಎಂವಿ ಇರಾನ್ ದೆಯಾನತ್' ಎಂಬ ಇರಾನಿ ಹಡಗನ್ನು ಸೋಮಾಲಿಯಾದ ಕಡಲ್ಗಳ್ಳರು ಆಗಸ್ಟ್ 21ರಂದು ಅಪಹರಿಸಿದ್ದರು. ಸಂಧಾನದ ಫಲವಾಗಿ ಅಕ್ಟೋಬರ್ 10ರಂದು ಮೂವರು ಭಾರತೀಯರು ಸೇರಿದಂತೆ ಹಡಗಿನ ಇತರ 26 ಸಿಬ್ಬಂದಿಗಳನ್ನು ಅಪಹರಣಕಾರರು ಬಿಡುಗಡೆ ಮಾಡಿದ್ದರು.
ಕಾಸರಗೋಡಿನ ಜೀವನ್ ಕಿರಣ್ ಡಿಸೋಜಾ, ರತ್ನಗಿರಿಯ ಅಕ್ಬರ್ ಮತ್ತು ಗೋವಾದ ಅಂತೋಣಿ ಅಪಹರಣಕಾರರಿಂದ ಬಿಡುಗಡೆಯಾದ ಮೂವರು ಭಾರತೀಯರು.
ಏತನ್ಮಧ್ಯೆ, ಸೋಮಾಲಿಯಾದ ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿರುವ ಮತ್ತೊಂದು ಹಡಗಿನಲ್ಲಿ 18 ಮಂದಿ ಭಾರತೀಯರಿದ್ದು, ರಕ್ಷಣೆಗಾಗಿ ಎದುರು ನೋಡುತ್ತಿದ್ದಾರೆ. |