ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲಕ್ಷ್ಮಣಾನಂದ ಹತ್ಯೆಗೆ ನಕ್ಸಲರಿಗೆ ಸುಪಾರಿ: ಪೊಲೀಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಕ್ಷ್ಮಣಾನಂದ ಹತ್ಯೆಗೆ ನಕ್ಸಲರಿಗೆ ಸುಪಾರಿ: ಪೊಲೀಸ್
ವಿಶ್ವ ಹಿಂದೂ ಪರಿಷತ್ ಮುಖಂಡ ಲಕ್ಷ್ಮಣಾನಂದ ಸರಸ್ವತಿಯವರನ್ನು ಹತ್ಯೆಗೈಯಲು ಮಾವೋವಾದಿಗಳಿಗೆ ನಿರ್ದಿಷ್ಟ ಗುಂಪೊಂದು ಸುಪಾರಿ ನೀಡಿತ್ತು ಎಂದು ಒರಿಸ್ಸಾ ಪೊಲೀಸರು ಬಹಿರಂಗಪಡಿಸಿದ್ದಾರೆ.

"ನಿರ್ದಿಷ್ಟ ಪಂಗಡದ ಕೆಲವು ಯುವಕರನ್ನು ತರಬೇತುಗೊಳಿಸಲು ಮಾವೋವಾದಿ ನಕ್ಸಲರಿಗೆ ಹಣ ಕೊಟ್ಟು ಸ್ವಾಮೀಜಿಯವರನ್ನು ಮುಗಿಸಲು ಹೇಳಲಾಗಿದೆ. ಕಂಧಮಲ್‌ನಲ್ಲಿ 2007 ಡಿಸೆಂಬರ್‌ನಲ್ಲಿ ನಡೆದ ಕೋಮುಗಲಭೆಯ ಬೆನ್ನಲ್ಲೇ ಹತ್ಯೆ ನಡೆಸಲು ಸಂಚು ರೂಪಿಸಲಾಗಿತ್ತು. ಇದರ ಹಿಂದಿನ ರೂವಾರಿಗಳನ್ನು ಗುರುತಿಸಲಾಗುತ್ತಿದ್ದು, ಅವರು ಒರಿಸ್ಸಾದಿದಂ ಪರಾರಿಯಾಗಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ" ಎಂದು ಒರಿಸ್ಸಾ ಕ್ರೈಂ ಬ್ರ್ಯಾಂಚ್ ಐಜಿಪಿ ಅರುಣ್ ರಾಯ್ ತಿಳಿಸಿದ್ದಾರೆ.

ಈ ಹತ್ಯಾಕಾಂಡಕ್ಕಾಗಿ ಮಾವೋವಾದಿಗಳು ತಮ್ಮ 60ಕ್ಕೂ ಹೆಚ್ಚು ಯುವಕರಿಗೆ ವಿಶೇಷ ತರಬೇತಿ ನೀಡಿದ್ದರು. ಅದಕ್ಕಾಗಿ ಗುಂಪೊಂದು ಹಳ್ಳಿಗಳಲ್ಲಿ ಧನ ಸಂಗ್ರಹಿಸಿದ ಬಗ್ಗೆಯೂ ತಿಳಿದು ಬಂದಿದೆ. ಈಗಾಗಲೇ ಬಂಧಿಸಲಾಗಿರುವ ಮೂವರು ಆರೋಪಿಗಳಿಂದ ಈ ಸಂಬಂಧ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2007ರ ಕ್ರಿಸ್ಮಸ್ ಸಂದರ್ಭದಲ್ಲಿನ ಹಿಂಸಾಚಾರಗಳ ಹಿನ್ನೆಲೆಯಲ್ಲಿ ನಿರ್ದಿಷ್ಟ ಪಂಗಡವೊಂದು ಲಕ್ಷ್ಮಣಾನಂದ ಸರಸ್ವತಿಯವರ ಬಗ್ಗೆ ಅಸಮಾಧಾನಗೊಂಡಿತ್ತು. ಈ ಹಿನ್ನಲೆಯಲ್ಲಿ ಮಾವೋವಾದಿ ಗುಂಪನ್ನು ಭೇಟಿ ಮಾಡಿ ಸ್ವಾಮೀಜಿಯವರನ್ನು ಕೊಲ್ಲಲು ಸಹಾಯ ನೀಡುವಂತೆ ಅದು ವಿನಂತಿಸಿಕೊಂಡಿತ್ತು. ಹತ್ಯಾಕಾಂಡದ ಸಂದರ್ಭದಲ್ಲಿ ಆರು ಮಂದಿ ತೆಲುಗು ಮಾತನಾಡುತ್ತಿದ್ದ ಬಗ್ಗೆಯೂ ತಿಳಿದುಬಂದಿದೆ. ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿದಲ್ಲಿ ಅದು ಹಿಂಸಾಚಾರಕ್ಕೆ ಹೇತುವಾಗಬಹುದು ಎಂಬ ಕಾರಣಕ್ಕಾಗಿ ತಡೆಹಿಡಿಯಲಾಗಿದೆ. ಈ ಪ್ರಕರಣದಲ್ಲಿ ಮಾವೋವಾದಿಗಳು ಕೇವಲ ಬಾಡಿಗೆ ಹತ್ಯೆ ನಡೆಸಿದ್ದಾರೆ ಎಂದು ಐಜಿಪಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಪಹರಣಕ್ಕೀಡಾಗಿದ್ದ ಭಾರತೀಯರು ತಾಯ್ನಾಡಿಗೆ
ದೆಹಲಿ ಸರಣಿ ಸ್ಫೋಟ ಶಂಕಿತರು ಪೊಲೀಸ್ ವಶಕ್ಕೆ
ರಾಷ್ಟ್ರಪತಿಗೆ ಇಮೇಲ್ ಬೆದರಿಕೆ: ಓರ್ವ ಸೆರೆ
ನ್ಯಾನೋಗಾಗಿ ಗುಜರಾತ್ ರೈತರಿಗೆ ಕಿರುಕುಳ: ಲಾಲೂ
ಮೈಗಳ್ಳ, ಭ್ರಷ್ಟ ಜಡ್ಜ್‌ಗಳು ತೊಲಗಲಿ: ಸಿಜೆಐ
ಬಾಲಕರಿಂದ ಖೋಟಾ ನೋಟು ವಶ