ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ
ಸಂಸತ್ತಿನ ಚಳಿಗಾಲದ ಅಧಿವೇಶನ ಶುಕ್ರವಾರ ಆರಂಭವಾಗಲಿದ್ದು, ಕೋಮು ಹಿಂಸಾಚಾರ, ಭಯೋತ್ಪಾದನಾ ದಾಳಿಗಳು, ಬೆಲೆ ಏರಿಕೆ ಸೇರಿದಂತೆ ಹಲವು ವಿಚಾರಗಳು ಪ್ರಸ್ತಾಪವಾಗಲಿದ್ದು, ಬಿಸಿಬಿಸಿ ಚರ್ಚೆಯನ್ನು ನಿರೀಕ್ಷಿಸಲಾಗಿದೆ.

ಪ್ರಧಾನಿಯವರ ವಿಶ್ವಾಸಮತ ಯಾಚನೆಯ ಹಿನ್ನೆಲೆಯಲ್ಲಿ ಮುಂಗಾರು ಅಧಿವೇಶನವನ್ನು ನಡೆಸದಿರುವ ಕಾರಣ ಸರಕಾರ ವಿರೋಧ ಪಕ್ಷಗಳಿಂದ ಟೀಕೆಗಳನ್ನು ಎದುರಿಸಿತ್ತು.

ಭಾರತ-ಅಮೆರಿಕ ಅಣು ಒಪ್ಪಂದದ ಹಿನ್ನೆಲೆಯಲ್ಲಿ ಎಡಪಕ್ಷಗಳು ಸರಕಾರಕ್ಕೆ ನೀಡಿದ್ದ ಬಾಹ್ಯ ಬೆಂಬಲವನ್ನು ಹಿಂತೆಗೆದುಕೊಂಡ ಕಾರಣ ಸರಕಾರ ಅಲ್ಪಸಂಖ್ಯಾತವಾಗಿದ್ದು, ವಿಶ್ವಾಸ ಮತ ಯಾಚನೆಗೆ ಇಳಿದಿತ್ತು. ಈ ವೇಳೆಯ ಸಂಖ್ಯಾ ಆಟದಲ್ಲಿ ವಿರೋಧಿ ಸ್ಥಾನದಲ್ಲಿದ್ದ ಸಮಾಜವಾದಿ ಪಕ್ಷವು ಯುಪಿಎ ಮೈತ್ರಿಕೊಟದ ಮಿತ್ರಪಕ್ಷವಾಗಿ ಪರಿವರ್ತನೆಯಾಗಿದ್ದು, ಸರಕಾರ ವಿಶ್ವಾಸಮತ ಗೆದ್ದಿತ್ತು. ಬಳಿಕದ ಬೆಳವಣಿಗೆಗಳಲ್ಲಿ ಸರಕಾರವು ಅಣು ಒಪ್ಪಂದದಲ್ಲಿ ಯಶಸ್ವೀ ಮುನ್ನಡೆ ಸಾಧಿಸಿದೆ. ಐಎಇಎ, ಎನ್ಎಸ್‌ಜಿ ಮತ್ತು ಅಮೆರಿಕ ಕಾಂಗ್ರೆಸ್‌ಗಳಲ್ಲಿ ಹಸಿರು ನಿಶಾನೆ ಪಡೆದು ಮುನ್ನಡಿ ಇರಿಸಿದೆ.

ಪರಮಾಣು ವಿಚಾರ ಹಾಗೂ ರಾಷ್ಟ್ರದಲ್ಲಿ ಭಯೋತ್ಪಾದನಾ ದಾಳಿಗಳು, ಬೆಲೆ ಏರಿಕೆ ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ಸರಕಾರ ವಿರೋಧ ಪಕ್ಷಗಳ ಸಂಘಟಿತ ವಿರೋಧ ಎದುರಿಸಲಿದೆ.

ಪ್ರಮುಖ ವಿರೋಧ ಪಕ್ಷವಾಗಿ ಬಿಜೆಪಿ, ಭಯೋತ್ಪಾದನೆಯ ವಿರುದ್ಧ ಸರಕಾರದ ಮೆದು ಧೋರಣೆ, ಹಾಗೂ ಆಂತರಿಕ ಭದ್ರತೆಯನ್ನು ಕಾಯ್ದುಕೊಳ್ಳುವಲ್ಲಿನ ವೈಫಲ್ಯ ಹಾಗೂ ಹಣದುಬ್ಬರವನ್ನು ಸೂಕ್ತವಾಗಿ ನಿಯಂತ್ರಿಸಲಾಗದಿರುವುದು- ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿದಂತೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್, ಒರಿಸ್ಸಾ ಮತ್ತು ಕರ್ನಾಟಕಗಳಲ್ಲಿನ ಕೋಮು ಗಲಭೆಯನ್ನು ಎತ್ತಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಸನ್ನದ್ದವಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ವಯಲಾರ್ ರವಿ ಅವರು, ಸರಕಾರ ಈ ಕುರಿತು ಸಮಗ್ರ ಚರ್ಚೆಯನ್ನು ಬಯಸುತ್ತಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಕ್ಷ್ಮಣಾನಂದ ಹತ್ಯೆಗೆ ನಕ್ಸಲರಿಗೆ ಸುಪಾರಿ: ಪೊಲೀಸ್
ಅಪಹರಣಕ್ಕೀಡಾಗಿದ್ದ ಭಾರತೀಯರು ತಾಯ್ನಾಡಿಗೆ
ದೆಹಲಿ ಸರಣಿ ಸ್ಫೋಟ ಶಂಕಿತರು ಪೊಲೀಸ್ ವಶಕ್ಕೆ
ರಾಷ್ಟ್ರಪತಿಗೆ ಇಮೇಲ್ ಬೆದರಿಕೆ: ಓರ್ವ ಸೆರೆ
ನ್ಯಾನೋಗಾಗಿ ಗುಜರಾತ್ ರೈತರಿಗೆ ಕಿರುಕುಳ: ಲಾಲೂ
ಮೈಗಳ್ಳ, ಭ್ರಷ್ಟ ಜಡ್ಜ್‌ಗಳು ತೊಲಗಲಿ: ಸಿಜೆಐ