ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗುಣಮುಖರಾದ ಬಿಗ್ ಬಿ ಮರಳಿ ಮನೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಣಮುಖರಾದ ಬಿಗ್ ಬಿ ಮರಳಿ ಮನೆಗೆ
PR
ಕಿಬ್ಬೊಟ್ಟೆ ನೋವಿನಿಂದಾಗಿ ತಮ್ಮ ಹುಟ್ಟುಹಬ್ಬದ ದಿನದಂದೇ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಪ್ರೇಮಿಗಳ ಮೆಚ್ಚಿನ ನಟ, ಅಮಿತಾಬ್ ಬಚ್ಚನ್ ಅವರು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ತನ್ನ 66ನೆಯ ಹುಟ್ಟುಹಬ್ಬದಂದೇ ಅಸ್ವಸ್ಥರಾಗಿದ್ದ ಅಮಿತಾಭ್ ಅವರು ಆಸ್ಪತ್ರೆಗೆ ಸೇರಿದ್ದು, ರಾಷ್ಟ್ರಾದ್ಯಂತ ಅಭಿಮಾನಿಗಳು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು.

ಕರ್ವಾ ಚೌತ್ ದಿನವಾದ ಶುಭದಿನ ಶುಕ್ರವಾರದಂದು ಬಿಡುಗಡೆ ಹೊಂದಿದ ಅವರನ್ನು ಪುತ್ರ, ನಟ ಅಭಿಷೇಕ್ ಬಚ್ಚನ್ ತನ್ನ ಲಾಂಡ್ ಕ್ರ್ಯೂಸರ್ ಕಾರಿನಲ್ಲಿ ಖುದ್ದು ಚಲಾಯಿಸುತ್ತಾ ಕರೆದೊಯ್ದರು. ಆಸ್ಪತ್ರೆಯ ಹೊರಗಡೆ ನೆರೆದಿದ್ದ ತನ್ನ ಅಭಿಮಾನಿಗಳಿಗೆ ಬಿಗ್ ಬಿ ಕೈ ಬೀಸಿ ವಂದನೆ ಸೂಚಿಸಿದರು.

ಅಮಿತಾಭ್ ಅವರಿಗೆ ಮೂರು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ಅವರಿಗೆ ಚಿಕಿತ್ಸೆ ನೀಡಿರುವ ವೈದ್ಯರು ಸಲಹೆ ಮಾಡಿದ್ದಾರೆ. ದೈಹಿಕ ಶ್ರಮದ ಯಾವುದೇ ಕಾರ್ಯ ಕೈಗೊಳ್ಳದಂತೆಯೂ ತಿಳಿಸಿದ್ದಾರೆ.

ಬ್ಲಾಗರ್ ಆಗಿರುವ ಅಮಿತಾಭ್ ತನ್ನ ಅಸೌಖ್ಯ, ಆತಂಕಗಳು ಹಾಗೂ ನಿದ್ರಾ ರಹಿತ ರಾತ್ರಿಗಳ ಬಗ್ಗೆ ತನ್ನ ಬ್ಲಾಗಿನಲ್ಲಿ ಬರೆದಿದ್ದಾರೆ. ಗುರವಾರ ರಾತ್ರಿ ಅವರು ಸುಮಾರು ಐದು ಬರಹಗಳನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಅವರು ತನ್ನ ಆರೋಗ್ಯದ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ
ಲಕ್ಷ್ಮಣಾನಂದ ಹತ್ಯೆಗೆ ನಕ್ಸಲರಿಗೆ ಸುಪಾರಿ: ಪೊಲೀಸ್
ಅಪಹರಣಕ್ಕೀಡಾಗಿದ್ದ ಭಾರತೀಯರು ತಾಯ್ನಾಡಿಗೆ
ದೆಹಲಿ ಸರಣಿ ಸ್ಫೋಟ ಶಂಕಿತರು ಪೊಲೀಸ್ ವಶಕ್ಕೆ
ರಾಷ್ಟ್ರಪತಿಗೆ ಇಮೇಲ್ ಬೆದರಿಕೆ: ಓರ್ವ ಸೆರೆ
ನ್ಯಾನೋಗಾಗಿ ಗುಜರಾತ್ ರೈತರಿಗೆ ಕಿರುಕುಳ: ಲಾಲೂ