ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಭಾರತದಲ್ಲಿ ಬಡತನ ನಾಚಿಕೆಗೇಡು: ಯುಎನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದಲ್ಲಿ ಬಡತನ ನಾಚಿಕೆಗೇಡು: ಯುಎನ್
ಭಾರತದಲ್ಲಿ ಇಷ್ಟೊಂದು ಪ್ರತಿಭೆಗಳು, ಚಿಂತಕರಿದ್ದರೂ, ರಾಷ್ಟ್ರದಲ್ಲಿ ಬಡತನ ತಾಂಡವವಾಡುತ್ತಿರುವುದು ನಾಚಿಕೆಗೇಡು ಎಂದು ವಿಶ್ವ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲ್ಲದೆ, ಬಡತನವನ್ನು ಹೊಡೆದೋಡಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.

ನವದೆಹಲಿಯಲ್ಲಿ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಆಯೋಜಿಸಿರುವ ಸಭೆಯಲ್ಲಿ ಮಾತನಾಡುತ್ತಿದ್ದ ವಿಶ್ವಸಂಸ್ಥೆಯ ಮಿಲೇನಿಯಂ ಕ್ಯಾಂಪೇನ್ ಗ್ಲೋಬಲ್ ಡೈರೆಕ್ಟರ್ ಶಾಹಿಲ್ ಶೆಟ್ಟಿ ಅವರು ಭಾರತ ಮತ್ತು ದಕ್ಷಿಣ ಏಶ್ಯಾಗಳು ಬಡತನ ನಿರ್ಮೂಲನೆಯನ್ನು ಸಾಧಿಸಲು ಸಫಲವಾಗದಿದ್ದಲ್ಲಿ, ಅದನ್ನು ಭೂಮಿಯಿಂದ ತೊಡೆದು ಹಾಕಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಿಸಿದ್ದಾರೆ.

ಬಡತನವು ರಾಷ್ಟ್ರಕ್ಕೆ ನಾಚಿಕೆಗೇಡು ಇದನ್ನು ನಾವು ತೊಡೆದು ಹಾಕಬೇಕು ಎಂದು ಶೆಟ್ಟಿ ಒತ್ತಿ ಹೇಳಿದ ಅವರು, ಬಡತನ ನಿರ್ಮೂಲನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಭಾರತದಲ್ಲಿ ಉತ್ತಮ ಪ್ರತಿಭೆಗಳು ಮತ್ತು ಉತ್ತಮ ಚಿಂತಕರು ಇದ್ದಾರೆ ಎಂದು ಬೆಟ್ಟು ಮಾಡಿದರು.

ಜನತೆ ಎಲ್ಲಿಯ ತನಕ ಧ್ವನಿ ಎತ್ತುವುದಿಲ್ಲವೋ, ಮತ್ತು ಕಾರ್ಯವೆಸಗುವುದಿಲ್ಲವೋ, ಅಲ್ಲಿಯ ತನಕ ವಿಶ್ವಸಂಸ್ಥೆಯ ಶತಮಾನದ ಅಭಿವೃದ್ಧಿ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಶೆಟ್ಟಿ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಭಿವೃದ್ಧಿಯೋ, ಅರಾಜಕತೆಯೋ? ಆಯ್ಕೆ ನಿಮ್ಮದು
ಗುಣಮುಖರಾದ ಬಿಗ್ ಬಿ ಮರಳಿ ಮನೆಗೆ
ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ
ಲಕ್ಷ್ಮಣಾನಂದ ಹತ್ಯೆಗೆ ನಕ್ಸಲರಿಗೆ ಸುಪಾರಿ: ಪೊಲೀಸ್
ಅಪಹರಣಕ್ಕೀಡಾಗಿದ್ದ ಭಾರತೀಯರು ತಾಯ್ನಾಡಿಗೆ
ದೆಹಲಿ ಸರಣಿ ಸ್ಫೋಟ ಶಂಕಿತರು ಪೊಲೀಸ್ ವಶಕ್ಕೆ