ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕುಟುಂಬದ ಒಡಕಿಗೆ ಹೇತುವಾದ ಮಾರುಕಟ್ಟೆ ಕುಸಿತ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಟುಂಬದ ಒಡಕಿಗೆ ಹೇತುವಾದ ಮಾರುಕಟ್ಟೆ ಕುಸಿತ!
PTI
ಷೇರು ಮಾರುಕಟ್ಟೆಯ ರಕ್ತಸಿಕ್ತ ಕೈಗಳು ಹೂಡಿಕೆದಾರರನ್ನು ಮಾತ್ರ ಭಿಕಾರಿಗಳನ್ನಾಗಿಸಿದ್ದಲ್ಲ, ಸಂಬಂಧಗಳನ್ನು ಕೂಡಾ ಹರಿದು ಚಿಂದಿ ಮಾಡುತ್ತಿದೆ. ಅಂತಹ ಒಂದು ಪ್ರಕರಣ ಅಹಮದಾಬಾದ್‌ನಲ್ಲಿ ನಡೆದಿದೆ.

ಇತ್ತೀಚೆಗೆ ಇಲ್ಲಿನ ಗೃಹಿಣಿಯೊಬ್ಬರು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ 30 ಲಕ್ಷಕ್ಕೂ ಹೆಚ್ಚು ಕಳೆದುಕೊಂಡಿದ್ದರು. ಇದನ್ನು ಸಹಿಸದ ಆಕೆಯ ಗಂಡ ವಿವಾಹ ಸಂಬಂಧ ಮುರಿದುಕೊಳ್ಳುವ ಮಾತುಗಳನ್ನಾಡುತ್ತಿರುವುದಾಗಿ ವರದಿಯಾಗಿದೆ.

"ನಾನು 34 ವರ್ಷ ಪ್ರಾಯದ ಗೃಹಿಣಿ. ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದು ಒಬ್ಬ ಮಗಳೂ ಇದ್ದಾಳೆ. ನನ್ನ ಬಿಡುವಿನ ಸಮಯದಲ್ಲಿ ನಾನು ಆನ್‌ಲೈನ್ ಷೇರು ಮಾರುಕಟ್ಟೆಯಲ್ಲಿ ವ್ಯಾಪಾರ ಕುದುರಿಸಿ ಸಾಕಷ್ಟು ಸಂಪಾದನೆ ಕೂಡ ಮಾಡಿದ್ದೆ. ಆದರೆ ಇತ್ತೀಚಿನ ದಿನಗಳಲ್ಲಿನ ಷೇರು ಮಾರುಕಟ್ಟೆಯ ಅಯೋಮಯ ಸ್ಥಿತಿಯಿಂದಾಗಿ 12 ಲಕ್ಷದಷ್ಟು ಕಳೆದುಕೊಂಡೆ" ಎಂದವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

"ನನಗ್ಗೊತ್ತು, ಮಾರುಕಟ್ಟೆ ವ್ಯವಹಾರದಲ್ಲಿರುವ ಎಲ್ಲರೂ ಒಂದೇ ದೋಣಿಯಲ್ಲಿ ಸಾಗುತ್ತಿರುತ್ತೇವೆ. ಆದರೆ ನನ್ನ ಗಂಡ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಆಗಿರುವ ನಷ್ಟವನ್ನು ಸರಿದೂಗಿಸುವ ಇಚ್ಛೆ ಅವರಿಗಿಲ್ಲ. ನನ್ನ ಸಂಪಾದನೆಯ ಉತ್ಕೃಷ್ಟ ದಿನಗಳಲ್ಲಿ ಅವರು ಸಂತೋಷದಿಂದಿದ್ದವರು, ಮಾರುಕಟ್ಟೆ ಕುಸಿತದಿಂದಾಗಿ ನನಗೆ ನಷ್ಟವಾದಾಗ ಕೈ ಚೆಲ್ಲಿ, ವಿವಾಹ ವಿಚ್ಛೇದನಕ್ಕೆ ಒತ್ತಾಯಿಸುತ್ತಿದ್ದಾರೆ" ಎಂದು ಕಣ್ಣೀರಿಡುತ್ತಾ ತನ್ನ ಬವಣೆಯನ್ನು ತೋಡಿಕೊಳ್ಳುತ್ತಾರೆ.

ಮನಶಾಸಮಸ್ತ್ರಜ್ಢ ಡಾ. ಹನ್ಸಲ್ ಬಚೇಚ್ ಎಂಬವರು ಉಚಿತ ಸಮಾಲೋಚನೆಗಾಗಿ ತೆರೆದಿರುವ ವೆಬ್‌ಸೈಟಿನಲ್ಲಿ ಈ ಮಹಿಳೆ ತಮ್ಮ ದುಮ್ಮಾನವನ್ನು ತೋಡಿಕೊಂಡಿದ್ದಾರೆ. ಆಕೆಗೀಗ ಹಣ ಕಳೆದುಕೊಂಡ ಜತೆಗೆ ಇತ್ತ ಪತಿಯನ್ನೂ ಕಳೆದುಕೊಳ್ಳುವ ಸಂಕಟ ಎದುರಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಮ್ಮಿದ್ದರೆ ಕರುಣಾನಿಧಿ ರಾಜೀನಾಮೆ ನೀಡಲಿ: ಜಯಾ
ಭಾರತದಲ್ಲಿ ಬಡತನ ನಾಚಿಕೆಗೇಡು: ಯುಎನ್
ಅಭಿವೃದ್ಧಿಯೋ, ಅರಾಜಕತೆಯೋ? ಆಯ್ಕೆ ನಿಮ್ಮದು
ಗುಣಮುಖರಾದ ಬಿಗ್ ಬಿ ಮರಳಿ ಮನೆಗೆ
ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ
ಲಕ್ಷ್ಮಣಾನಂದ ಹತ್ಯೆಗೆ ನಕ್ಸಲರಿಗೆ ಸುಪಾರಿ: ಪೊಲೀಸ್