ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಮತ್ತೊಬ್ಬ ಸೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಮತ್ತೊಬ್ಬ ಸೆರೆ
ಒರಿಸ್ಸಾದ ಕಂಧಮಲ್ ಹಿಂಸಾಚಾರ ಸಂದರ್ಭದಲ್ಲಿ ಕ್ರೈಸ್ತ ಸನ್ಯಾಸಿನಿಯೋರ್ವರ ಮೇಲೆ ನಡೆಸಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬನನ್ನು ಬಂಧಿಸಲಾಗಿದೆ.

ಆಗಸ್ಟ್ 25ರಂದು ಕಂಧಮಲ್‌ ಜಿಲ್ಲೆಯಲ್ಲಿ ದೊಂಬಿ, ಹಿಂಸಾಚಾರಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಕ್ರೈಸ್ತ ಸನ್ಯಾಸಿನಿಯನ್ನು ಅತ್ಯಾಚಾರ ಮಾಡಲಾಗಿತ್ತು. ವಿಶ್ವ ಹಿಂದೂ ಪರಿಷತ್ ಮುಖಂಡ ಸ್ವಾಮೀ ಲಕ್ಷ್ಮಣಾನಂದ ಸರಸ್ವತಿ ಹತ್ಯೆಯಾದ ಎರಡು ದಿನಗಳ ನಂತರ ಈ ಘಟನೆ ನಡೆದಿತ್ತು. ಈ ಸಂಬಂಧ ಅಪರಾಧ ಪತ್ತೆ ದಳ ನಾವ್ಗಾನ್ ಗ್ರಾಮದಲ್ಲಿ ಗಜೇಂದ್ರ ದಿಗಾಲ್ ಎಂಬಾತನನ್ನು ಶುಕ್ರವಾರ ಬಂಧಿಸಿದೆ.

ಇದುವರೆಗೆ ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇವರಲ್ಲಿ ಐವರನ್ನು ಕಂಧಮಲ್‌ನ ಬಲಿಗುಡ ಎಂಬಲ್ಲಿ ಸೆರೆ ಹಿಡಿಯಲಾಗಿದ್ದು, ಉಳಿದ ಮೂವರು ಘಟನೆ ನಂತರ ಕೇರಳಕ್ಕೆ ಪರಾರಿಯಾಗಿದ್ದರು. ಅಲ್ಲಿಂದ ಬಂಧಿಸಿ ಕರೆತಂದು ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ಶುಕ್ರವಾರ ಬಲಿಗುಡ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತ ಎಲ್ಲಾ ಆರೋಪಿಗಳ ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

"ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಿಗುಡ ಪೊಲೀಸ್ ಠಾಣಾಧಿಕಾರಿಯಾಗಿದ್ದ ಕೆ.ಎಂ. ರಾವ್ ವಿರುದ್ಧ ಅಪರಾಧ ಪತ್ತೆ ದಳ ತನಿಖೆ ನಡೆಸಲಿದ್ದು, ಒರಿಸ್ಸಾ ಸರಕಾರ ರಾವ್ ಅವರನ್ನು ಅಮಾನತ್ತಿನಲ್ಲಿರಿಸಿದೆ. ಸಂತ್ರಸ್ತೆಯ ಅನುಪಸ್ಥಿತಿಯಿಂದಾಗಿ ಪೊಲೀಸರಿಗೆ ತನಿಖೆ ಕಾರ್ಯಕ್ಕೆ ತೊಡಕುಂಟಾಗಿದ್ದು, ಮುಂದಿನ ಹೆಜ್ಜೆಗಳು ಕ್ಲಿಷ್ಟಕರವಾಗಿವೆ. ಕ್ರೈಸ್ತ ಸನ್ಯಾಸಿನಿ ಪೊಲೀಸರ ಮನವಿಗೆ ಸ್ಪಂದಿಸಿದಲ್ಲಿ ತನಿಖೆ ಸುಲಭವಾಗಲಿದೆ. ತನಿಖೆಯ ಸಂದರ್ಭದಲ್ಲಿ ಆಕೆಗೆ ಸಂಪೂರ್ಣ ಭದ್ರತೆ ಒದಗಿಸಲಾಗುವುದು" ಎಂದು ಒರಿಸ್ಸಾ ಪೊಲೀಸ್ ಮಹಾನಿರ್ದೇಶಕ ಎಂಎಂ ಪ್ರಹಾರಾಜ್ ಭರವಸೆ ನೀಡಿದ್ದಾರೆ.

ಪೊಲೀಸ್ ಎಫ್‌ಐಆರ್‌ನಲ್ಲಿ ಕ್ರೈಸ್ತ ಸನ್ಯಾಸಿನಿ ಹೆಸರನ್ನು ನಮೂದಿಸಿಲ್ಲ. ಆದರೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಒರಿಸ್ಸಾ ಮುಖ್ಯಮಂತ್ರಿಗೆ ಕ್ರೈಸ್ತ ಸನ್ಯಾಸಿನಿ ಪತ್ರ ಬರೆದಿದ್ದು, ಕಟಕ್‌ನ ಆರ್ಚ್‌ಬಿಷಪ್ ರಾಫೆಲ್ ಚೀನಾಥ್ ಕೂಡಾ ಲಿಖಿತ ದೂರೊಂದನ್ನು ಅಪೆಕ್ಸ್ ಕೋರ್ಟ್‌ಗೆ ಸಲ್ಲಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕುಟುಂಬದ ಒಡಕಿಗೆ ಹೇತುವಾದ ಮಾರುಕಟ್ಟೆ ಕುಸಿತ!
ದಮ್ಮಿದ್ದರೆ ಕರುಣಾನಿಧಿ ರಾಜೀನಾಮೆ ನೀಡಲಿ: ಜಯಾ
ಭಾರತದಲ್ಲಿ ಬಡತನ ನಾಚಿಕೆಗೇಡು: ಯುಎನ್
ಅಭಿವೃದ್ಧಿಯೋ, ಅರಾಜಕತೆಯೋ? ಆಯ್ಕೆ ನಿಮ್ಮದು
ಗುಣಮುಖರಾದ ಬಿಗ್ ಬಿ ಮರಳಿ ಮನೆಗೆ
ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ