ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲಿಪ್‌ಸ್ಟಿಕ್ ಹಚ್ಚಿದ್ದಕ್ಕೆ ಬಾಲಕಿಗೆ ಬೆಂಕಿ ಇಟ್ಟ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಿಪ್‌ಸ್ಟಿಕ್ ಹಚ್ಚಿದ್ದಕ್ಕೆ ಬಾಲಕಿಗೆ ಬೆಂಕಿ ಇಟ್ಟ!
ಕನಿಷ್ಠ ಬಟ್ಟೆ ತೊಟ್ಟು, ಲಿಪ್‌ಸ್ಟಿಕ್ ಹಚ್ಚಿದ್ದ ಹನ್ನೊಂದರ ಹರೆಯದ ಬಾಲಕಿಯ ವೇಷ ಕಂಡು ಆವೇಶಗೊಂಡ, ವ್ಯಕ್ತಿಯೊಬ್ಬ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಅಮಾನುಷ ಘಟನೆ ಜೈಪುರದಲ್ಲಿ ಸಂಭವಿಸಿದೆ.

ಇದರಿಂದಾಗಿ ಸುಮಾರು ಶೇ.90ರಷ್ಟು ಸುಟ್ಟಗಾಯಗಳಿಗೆ ಈಡಾಗಿರುವ ನಜ್‌ಮೀನ್ ಎಂಬ ಹುಡುಗಿ ಈಗ ಇಲ್ಲಿನ ಎಸ್ಎಂಎಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಈ ದುರ್ಘಟನೆ ಲಾಲ್ ಕೋಟಿ ಪ್ರದೇಶದಲ್ಲಿ ಸಂಭವಿಸಿದ್ದು, ಸೀಮೆಎಣ್ಣೆ ಸುರಿದಿರುವ 55ರ ಹರೆಯದ ಸಲೀಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ನಜ್‌ಮೀನ್‌ಳ ದೂರದ ಬಂಧುವಾಗಿರುವ ಸಲೀಂಗೆ ನಜ್‌ಮೀನ್ 'ಕನಿಷ್ಠ ಬಟ್ಟೆ' ಉಟ್ಟಿರುವುದು ಅಸಮಾಧಾನ ಉಂಟುಮಾಡಿತ್ತು. ಇತರಿಂದ ಕೋಪೋದ್ರಿಕ್ತನಾದ ಸಲೀಂ ಹುಡುಗಿಗೆ ಸೀಮೆಎಣ್ಣೆ ಎರಚಿ, ಬೆಂಕಿ ಕಡ್ಡಿ ಗೀರಿದನೆಂದು ಮೂಲಗಳು ತಿಳಿಸಿವೆ.

ಗಂಭೀರ ಸ್ಥಿತಿಯಲ್ಲಿರುವ ಬಲಿಪಶು ಬಾಲೆ ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಚ್ಛೇದಿತ ಮುಸ್ಲಿಂ ಮಹಿಳೆ ಜೀವನಾಂಶ ಕೇಳುವಂತಿಲ್ಲ
ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಮತ್ತೊಬ್ಬ ಸೆರೆ
ಕುಟುಂಬದ ಒಡಕಿಗೆ ಹೇತುವಾದ ಮಾರುಕಟ್ಟೆ ಕುಸಿತ!
ದಮ್ಮಿದ್ದರೆ ಕರುಣಾನಿಧಿ ರಾಜೀನಾಮೆ ನೀಡಲಿ: ಜಯಾ
ಭಾರತದಲ್ಲಿ ಬಡತನ ನಾಚಿಕೆಗೇಡು: ಯುಎನ್
ಅಭಿವೃದ್ಧಿಯೋ, ಅರಾಜಕತೆಯೋ? ಆಯ್ಕೆ ನಿಮ್ಮದು