ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಂಗೆ ನಿದ್ದೆನೇ ಬರ್ತಾ ಇಲ್ಲ: ಕರುಣಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಂಗೆ ನಿದ್ದೆನೇ ಬರ್ತಾ ಇಲ್ಲ: ಕರುಣಾ
ಶ್ರೀಲಂಕಾದ ತಮಿಳು ಮೂಲನಿವಾಸಿಗಳ ಬಿಕ್ಕಟ್ಟು ಪರಿಹರಿಸಲು ಮಾತುಕತೆಯ ಮೂಲಕ ಇತ್ಯರ್ಥದತ್ತ ಒಲವು ಸೂಚಿಸುವ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನು ತಮಿಳ್ನಾಡು ಮುಖ್ಯಂತ್ರಿ ಎಂ. ಕರುಣಾನಿಧಿ ಸ್ವಾಗತಿಸಿದ್ದಾರೆ.

ಪ್ರಧಾನಿಯವರ ಈ ಹೇಳಿಕೆಯು, ಎಲ್‌ಟಿಟಿಇ ಬಾಹುಳ್ಯದ ಪ್ರದೇಶದಲ್ಲಿ ತಮಿಳರ ವಿರುದ್ಧ ಲಂಕಾ ಪಡೆಗಳ ಆಕ್ರಮಣವನ್ನು ತಡೆಯಲು ಕೇಂದ್ರವು ಕ್ರಮಗಳನ್ನು ಕೈಗೊಳ್ಲುತ್ತಿದೆ ಎಂದು ಆಶಾವಾದವನ್ನು ಹೆಚ್ಚಿಸಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಪಕ್ಷದ ಮುಖವಾಣಿ ಪತ್ರಿಕೆ 'ಮುರಸೋಳಿ'ಗೆ ಬರೆದಿರುವ ಲೇಖನದಲ್ಲಿ ಅವರು, ಪ್ರಧಾನಿಯವರ ಹೇಳಿಕೆಯು ಒಂದಿಷ್ಟು ಸಾಂತ್ವಾನ ನೀಡಿದೆ ಎಂದು ಹೇಳಿದ್ದಾರೆ. ಅಲ್ಲದೆ, ಕೇಂದ್ರವು ಅಕ್ಟೋಬರ್ 14ರಂದು ತಮಿಳ್ನಾಡಿನ ಸರ್ವಪಕ್ಷ ಸಭೆಯಲ್ಲಿ ಮಂಡಿಸಲಾರಿಗುವ ಬೇಡಿಕೆಗಳನ್ನು ಪರಿಗಣಿಸಬಹುದೆಂಬ ಆಶಯ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾ ಸಮಸ್ಯೆಗೆ ಯಾವುದೇ ಸೇನಾ ಪರಿಹಾರ ಇಲ್ಲ, ರಾಷ್ಟ್ರದಲ್ಲಿನ ಅಲ್ಪಸಂಖ್ಯಾತ ತಮಿಳರ ಆಶೋತ್ತರಗಳಿಗಾಗಿ ಮಾತುಕತೆಯ ಇತ್ಯರ್ಥವನ್ನು ಭಾರತವು ಒತ್ತಾಯಿಸುತ್ತಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆ ನೀಡಿದ್ದರು.

ಇದೇ ವಿಚಾರವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಅವರೂ ಧ್ವನಿಸಿದ್ದು, ತನ್ನ ಆಶಾಭಾವನೆಯನ್ನು ಬಲಗೊಳಿಸಿದೆ ಎಂದು ಕರುಣಾನಿಧಿ ಹೇಳಿದ್ದಾರೆ.

ಸರ್ವಪಕ್ಷದ ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳಂತೆ ಡಿಎಂಕೆಯ 13 ಲೋಕಸಭಾ ಹಾಗೂ ನಾಲ್ಕು ರಾಜ್ಯಸಭಾ ಸದಸ್ಯರು ಇದೀಗಾಗಲೇ ಕರುಣಾನಿಧಿಯವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ನಿದ್ರೆಯೇ ಬರುತ್ತಿಲ್ಲ
ಶ್ರೀಲಂಕಾ ತಮಿಳರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕರುಣಾನಿಧಿ, "ಶ್ರೀಲಂಕಾ ತಮಿಳರ ಭವಿಷ್ಯವು ಪ್ರಶ್ನಾರ್ಥಕ ಚಿಹ್ನೆಯಾಗಿ ಪರಿಣಮಿಸಿದೆ, ಈ ವಿಚಾರವನ್ನು ಚಿಂತಿಸಿದಾಗೆಲ್ಲ ತನಗೆ ನಿದ್ರೆಯೇ ಹತ್ತುತ್ತಿಲ್ಲ. ತಮಿಳು ಜನಾಂಗ ಮತ್ತು ಅದರ ಪ್ರತಿಷ್ಠೆಯನ್ನು ನಾವು ಉಳಿಸೋಣ. ಯೂವುದೇ ಬೆಲೆ ತೆತ್ತಾದರೂ ಶ್ರೀಲಂಕಾದಲ್ಲಿನ ಜನಾಂಗೀಯ ಹತ್ಯೆಯನ್ನು ತಡೆಯೋಣ" ಎಂದವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಚಂದ್ರಯಾನ': ಸೋಮವಾರದಿಂದ ಕೌಂಟ್‌ಡೌನ್
ಲಿಪ್‌ಸ್ಟಿಕ್ ಹಚ್ಚಿದ್ದಕ್ಕೆ ಬಾಲಕಿಗೆ ಬೆಂಕಿ ಇಟ್ಟ!
ವಿಚ್ಛೇದಿತ ಮುಸ್ಲಿಂ ಮಹಿಳೆ ಜೀವನಾಂಶ ಕೇಳುವಂತಿಲ್ಲ
ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಮತ್ತೊಬ್ಬ ಸೆರೆ
ಕುಟುಂಬದ ಒಡಕಿಗೆ ಹೇತುವಾದ ಮಾರುಕಟ್ಟೆ ಕುಸಿತ!
ದಮ್ಮಿದ್ದರೆ ಕರುಣಾನಿಧಿ ರಾಜೀನಾಮೆ ನೀಡಲಿ: ಜಯಾ