ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಟಾಟಾ ಚುನಾವಣೆಯಲ್ಲಿ ಸ್ಪರ್ಧಿಸಲಿ: ಮಮತಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ ಚುನಾವಣೆಯಲ್ಲಿ ಸ್ಪರ್ಧಿಸಲಿ: ಮಮತಾ
PTI
ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಅವರು ತಮ್ಮ ಮತ್ತು ರೈತರ ವಿರುದ್ಧ ಮಾಡಿರುವಂತಹ ಅವಮಾನಕಾರಿ ಹೇಳಿಕೆಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬೆದರಿಕೆಯೊಡ್ಡಿದ್ದಾರೆ.

"ಅವರ ಹೇಳಿಕಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ನಾವು ಚಿಂತಿಸುತ್ತಿದ್ದೇವೆ. ಅವರು ಒಬ್ಬ ರಾಜಕೀಯ ನಾಯಕನಂತೆ ಮಾತನಾಡುತ್ತಿದ್ದಾರೆ. ಅವರು ಬಂಗಾಳದಿಂದ ಚುನಾವಣೆಗೆ ಸ್ಪರ್ಧಿಸಲಿ" ಎಂದು ಮಮತಾ ಬ್ಯಾನರ್ಜಿ ಸುದ್ದಿಗಾರರಲ್ಲಿ ಹೇಳಿದರು.

ತನ್ನ ಮಹತ್ವಾಕಾಂಕ್ಷೆಯ ಟಾಟಾ ನ್ಯಾನೋ ಯೋಜನೆಯನ್ನು ಪಶ್ಚಿಮ ಬಂಗಾಳದ ಸಿಂಗೂರಿನಿಂದ ಹಿಂತೆಗೆದುಕೊಂಡಿರುವ ಟಾಟಾ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ ಅವರು, ಪಶ್ಚಿಮ ಬಂಗಾಳ ಸರಕಾರವನ್ನು ಬೆಂಬಲಿಸುವಂತೆ ಅಲ್ಲಿನ ಜನತೆಗೆ ಕರೆ ನೀಡಿದ್ದರು. ರಾಜ್ಯವು ಅಭ್ಯುದಯವನ್ನು ಕಾಣಬೇಕಿದ್ದರೆ, ಪ್ರಸ್ತುತ ಸರಕಾರವನ್ನು ಬೆಂಬಲಿಸಿ, ಇಲ್ಲವಾದರೆ ವಿನಾಶಕಾರಿ ರಾಜಕೀಯ ವಾತಾವರಣವನ್ನು ಕಾಣಬೇಕಾದೀತು ಎಂದು ಅವರು ಹೇಳಿದ್ದರು.

ಟಾಟಾ ಅವರ ಮೇಲೆ ದಾಳಿ ಮುಂದುವರೆಸಿದ ಮಮತಾ, "ಬಂಗಾಳದಲ್ಲಿ ಆಡಳಿತ ನಡೆಸುತ್ತಿರುವ ಸಿಪಿಐಎಂನ ಪರವಾಗಿ ಟಾಟಾ ಈಗ ಮಾತಾನಾಡುತ್ತಿದ್ದಾರೆ ಆದರೆ ಇದಕ್ಕೆ ವಿರುದ್ಧವಾಗಿ ರಾಜ್ಯದ ಜನತೆ ನಮ್ಮ ರಾಜಕೀಯದ ನೀತಿಯನ್ನು ಸಮರ್ಥಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

"ನಾವು ಅವರ ಹೇಳಿಕೆಗಳಿಂದ ಚಕಿತಗೊಂಡಿದ್ದೇವೆ. ಸಿಪಿಐಎಂನಿಂದ ಉಪಕೃತರಾಗಿರುವ ಟಾಟಾ ಅವರ ಪರವಾಗಿ ಮಾತನಾಡುತ್ತಿದ್ದಾರೆ. ಇಲ್ಲಿ ನ್ಯಾನೊ ಪ್ಲಾಂಟ್ ನಿರ್ಮಿಸಲು ಅವರು ಕೇವಲ 200ಕೋಟಿ ನೀಡಿದ್ದರು ಆದರೆ ಗುಜರಾತ್‌ನಲ್ಲಿ ಅವರು 400 ಕೋಟಿ ನೀಡಬೇಕಾಯಿತು. ಆದ್ದರಿಂದಲೇ ಅವರು ಬಂಗಾಳ ಸರಕಾರಕ್ಕೆ ಸರ್ಟಿಫಿಕೇಟ್‌ಗಳನ್ನು ನೀಡುತ್ತಿದ್ದಾರೆ" ಎಂದು ಮಮತಾ ಹೇಳಿದ್ದಾರೆ.

"ಇದು ಹೊಸ ಜಂಟಿ ಯೋಜನೆ- ಸರಕಾರಿ ಹಣದಿಂದ ಖಾಸಗಿ ವಹಿವಾಟು" ಎಂದು ಅವರು ವ್ಯಂಗವಾಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಶ್ಮಿರದಲ್ಲಿ ಏಳು ಹಂತಗಳ ಚುನಾವಣಾ ಘೋಷಣೆ
ದೆಹಲಿ: ಮೆಟ್ರೋ ಫ್ಲೈ ಓವರ್ ಕುಸಿದು ಒಂದು ಸಾವು
ರಾಯ್ ‌ಬರೇಲಿ ಭೂಮಿ ವಾಪಸ್: ಮಾಯಾವತಿ
ನಂಗೆ ನಿದ್ದೆನೇ ಬರ್ತಾ ಇಲ್ಲ: ಕರುಣಾ
'ಚಂದ್ರಯಾನ': ಸೋಮವಾರದಿಂದ ಕೌಂಟ್‌ಡೌನ್
ಲಿಪ್‌ಸ್ಟಿಕ್ ಹಚ್ಚಿದ್ದಕ್ಕೆ ಬಾಲಕಿಗೆ ಬೆಂಕಿ ಇಟ್ಟ!