ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕೇರಳದಲ್ಲಿ ಹುಲಿ ಸಂತತಿ ವೃದ್ಧಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇರಳದಲ್ಲಿ ಹುಲಿ ಸಂತತಿ ವೃದ್ಧಿ
PTI
ಕೇರಳದ ಇಡುಕ್ಕಿಯಲ್ಲಿರುವ ಸುಪ್ರಸಿದ್ಧ ಪೆರಿಯಾರ್ ಹುಲಿ ಧಾಮ(ಪಿಟಿಆರ್)ದಲ್ಲಿ ಹುಲಿಗಳ ಸಂತತಿ ಹೆಚ್ಚಿದೆ. 22 ಇದ್ದ ವ್ಯಾಘ್ರ ಸಂತತಿಯು ಇದೀಗ ಸುಮಾರು 38ಕ್ಕೇರಿದೆ.

ಪಿಟಿಆರ್ ಹುಲಿ ರಕ್ಷಣೆಗಾಗಿ ಕೈಗೊಂಡಿರುವ ತೀಕ್ಷ್ಣ ಕ್ರಮಗಳ ಪರಿಣಾಮ ಹುಲಿಸಂತತಿ ಹೆಚ್ಚಿದೆ. ಇತ್ತೀಚೆಗೆ ಕೈಗೊಂಡ ಕ್ಯಾಮರಾ ಟ್ರಾಪ್ ತಂತ್ರಗಳ ಮೂಲಕ ನಡೆಸಿರುವ ಸಮೀಕ್ಷೆಯಿಂದ ಈ ಅಂಶ ಪತ್ತೆಯಾಗಿದೆ.

ಪಿಟಿಆರ್‌ 100 ಚದರ ಕಿಲೋಮೀಟರ್‌ಗಳಲ್ಲಿ ಶೇ.3.4ರಷ್ಟು ಹುಲಿಗಳ ಸಾಂದ್ರತೆಯನ್ನು ಅಂದಾಜಿಸಲಾಗಿದೆ. ಇದು ಬುಕಿತ್ ಬರಿಸನ್(1.6), ಮಲೇಶ್ಯಾದ ತಮನ್ ನೆಗರ(1.7), ಮತ್ತು ಮ್ಯಾನ್ಮಾರ್‌ನ ಹುಅಯ್ ಖಾ ಖಾಯೆಂಗ್(2.2)ಗಳ ಸಂಖ್ಯೆಗಿಂತ ಹೆಚ್ಚಾಗಿದೆ.

ತೇಕಡಿಯ ಪೆರಿಯಾರ್ ಹುಲಿ ಪ್ರತಿಷ್ಠಾನದ ಸಂರಕ್ಷಣಾ ಜೀವಶಾಸ್ತ್ರಜ್ಞ ಎಂ.ಬಾಲಸುಬ್ರಮಣ್ಯಮ್ ಮತ್ತು ಪರಿಸರತಜ್ಞ ಎ.ವೀರಮಣಿ ಅವರುಗಳು 2008ರ ಜನವರಿ ಹಾಗೂ ಮೇ ತಿಂಗಳ ಅವಧಿಯಲ್ಲಿ 640 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕ್ಯಾಪ್ಚರ್-ರೀಕ್ಯಾಪ್ಚರ್ ತಂತ್ರ ಬಳಕೆಯ ಕ್ಯಾಮರಾ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ.

ತೇಕಡಿ ವಲಯ, ವಲ್ಲಕಡವು ವಲಯ, ಪೆರಿಯಾರ್ ವಲಯ ಮತ್ತು ಪೆರಿಯಾರ್ ಪಶ್ಚಿಮ ವಿಭಾಗಗಳಲ್ಲಿ 56 ಕ್ಯಾಮರಾಗಳನ್ನು ಅಳವಡಿಸಿ ಈ ಸಮೀಕ್ಷೆ ನಡೆಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಂದ್ರಯಾನ-1 ಕ್ಷಣಗಣನೆ ಆರಂಭ
ರಾಜ್‌ಠಾಕ್ರೆ ಒಬ್ಬ ಮೆಂಟಲ್ ಕೇಸ್ ಎಂದ ಲಾಲೂ
ಟಾಟಾ ಚುನಾವಣೆಯಲ್ಲಿ ಸ್ಪರ್ಧಿಸಲಿ: ಮಮತಾ
ಕಾಶ್ಮಿರದಲ್ಲಿ ಏಳು ಹಂತಗಳ ಚುನಾವಣಾ ಘೋಷಣೆ
ದೆಹಲಿ: ಮೆಟ್ರೋ ಫ್ಲೈ ಓವರ್ ಕುಸಿದು ಒಂದು ಸಾವು
ರಾಯ್ ‌ಬರೇಲಿ ಭೂಮಿ ವಾಪಸ್: ಮಾಯಾವತಿ