ಮುಂಬೈಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನಾ(ಎಂಎನ್ಎಸ್) ಕಾರ್ಯಕರ್ತರಿಂದ ಕೆಲವು ಉತ್ತರ ಭಾರತೀಯರ ಮೇಲಿನ ಹಲ್ಲೆ, ಹಾಗೂ ದೆಹಲಿಯಲ್ಲಿನ ಬಾತ್ಲಾ ಹೌಸ್ ಎನ್‌ಕೌಂಟರ್ ಕುರಿತ ಹೊಸ ಹೇಳಿಕೆಗಳು ಲೋಕಸಭೆಯಲ್ಲಿ ಕೋಲಾಹಲದ ದೃಶ್ಯಗಳನ್ನು ಸೃಷ್ಟಿಸಿದವು. ಲೋಕಸಭೆಯಲ್ಲಿ ಅಧಿವೇಶನ ಆರಂಭಗೊಳ್ಳುತ್ತಲೇ, ಬಿಎಸ್‌ಪಿ ಸದಸ್ಯರಾದ ಅಕ್ಬರ್ ಅಹ್ಮದ್ ಡಂಪಿ ಮತ್ತು ಇಲಿಯಾಸ್ ಅಜ್ಮಿ ಅವರುಗಳು ಎನ್‌ಕೌಂಟರ್ ಕುರಿತ ಹೊಸಹೇಳಿಕೆಗಳು ಪ್ರಕಟವಾಗಿರುವ ಪತ್ರಿಕೆಗಳನ್ನು ಪ್ರದರ್ಶಿಸುತ್ತಾ, ನ್ಯಾಯಾಂಗ ತನಿಖೆಗೆ ಒತ್ತಾಯಿಸಿದರು. ಅವರು ಈ ವೇಳೆ ಸದನದ ಬಾವಿಗೆ ಧುಮುಕಿದರು. ಈ ಮಧ್ಯೆ, ಸಮಾಜವಾದಿ ಹಾಗೂ ರಾಷ್ಟ್ರೀಯ ಜನತಾದಳದ ಸದಸ್ಯರು ಶಿವಸೇನೆ ಹಾಗೂ, ರೈಲ್ವೇ ಮಂಡಳಿ ಪರೀಕ್ಷೆಗೆ ಹಾಜರಾದ ಉತ್ತರ ಭಾರತೀಯರನ್ನು ಥಳಿಸಿದ್ದಾರೆನ್ನಲಾಗಿರುವ ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್ ಕಾರ್ಯಕರ್ತರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸತೊಡಗಿದರು.ಲೋಕಸಭೆಯಲ್ಲಿ ಹಿಡಿತಕ್ಕೆ ಸಿಲುಕದ ದೃಶ್ಯಗಳು, ಕೋಲಾಹಲ ನಿರ್ಮಾಣವಾಗುತ್ತಲೆ ಸ್ಪೀಕರ್ ಸೋಮನಾಥ್ ಚಟರ್ಜಿ ಅವರು ಸದನವನ್ನು 12 ಗಂಟೆಗೆ ಮುಂದೂಡಿದರು.ಅಧಿವೇಶನ ಆರಂಭಕ್ಕೆ ಮುನ್ನ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದುದು ಕಂಡು ಬಂದಿತ್ತು. ಪರವಾರ್ ಅವರ ಎನ್‌ಸಿಪಿಯು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರದ ಪ್ರಮುಖ ಪಾಲುದಾರ ಪಕ್ಷವಾಗಿದೆ.ರಾಜ್ಯಸಭೆ ನಾಳೆಗೆ ಮುಂದೂಡಿಕೆ ಕಳೆದವಾರ ಸಾವನ್ನಪ್ಪಿರುವ ರಾಜ್ಯಸಭಾ ಸದಸ್ಯ ಲಕ್ಷ್ಮೀನಾರಾಯಣ್ ಶರ್ಮಾ ಅವರ ಗೌರವಾರ್ಥ ಸದನವನ್ನು ಒಂದು ದಿನ ಮುಂದೂಡಲಾಯಿತು. |
|