ಸಿಆರ್‌ಪಿಎಫ್ ಜವಾನರು ಸಾಗುತ್ತಿದ್ದ ವಾಹನದ ಮೇಲೆ ಶಂಕಿತ ನಕ್ಸಲರು ದಾಳಿ ನಡೆಸಿ ಕನಿಷ್ಠ ಏಳು ಸಿಆರ್‌ಪಿಎಫ್ ಜವಾನರು ಸಾವನ್ನಪ್ಪಿರುವ ಘಟನೆ ಚತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಸಂಭವಿಸಿದೆ.
ನಕ್ಸಲರು ಮತ್ತು ಸಿಆರ್‌ಪಿಎಫ್ ತಂಡಗಳ ನಡುವೆ ಸಂಭವಿಸಿರುವ ಗುಂಡಿನ ಕಾದಾಟದ ವೇಳೆಗೆ ಓರ್ವ ನಕ್ಸಲನೂ ಹತನಾಗಿರುವುದಾಗಿ ಆರಂಭಿಕ ವರದಿಗಳು ತಿಳಿಸಿವೆ.
ಕರ್ತವ್ಯ ನಿರತರಾಗಿದ್ದ 170ನೆ ಬೆಟಾಲಿಯನ್‌ಗೆ ಸೇರಿದ ಜವಾನರು ದಾಳಿಗೆ ತುತ್ತಾಗಿದ್ದಾರೆ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ಹೇಳಿದ್ದಾರೆ.
ಗಡಿ ರಸ್ತೆಗಳ ಸಂಘಟನೆಯ ಸಿಬ್ಬಂದಿಗಳಿಗೆ ಭದ್ರತೆ ನೀಡಲು ಈ ಪಡೆಯನ್ನು ನಿಯೋಜಿಸಲಾಗಿತ್ತು. ಮೊದುಕ್ಪಾಲ್ ಮತ್ತು ಕೊಂಗುಪಳ್ಳಿ ನಡುವೆ ಮಧ್ಯಾಹ್ನ ಸುಮಾರು 1.30ರ ಹೊತ್ತಿಗೆ ಈ ಘಟನೆ ಸಂಭವಿಸಿದೆ.
ಸಿಆರ್‌ಪಿಎಫ್ ಇಡಿಯ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡಿದ್ದು, ಈ ಪ್ರದೇಶದಲ್ಲಿ ಅಡಗಿಕೊಂಡಿದ್ದಾರೆಂದು ಶಂಕಿಸಲಾಗದ ನಕ್ಸಲರ ಪತ್ತೆಕಾರ್ಯ ಆರಂಭಿಸಿದೆ. |