ಭಾರತದ ಬ್ಯಾಂಕುಗಳಲ್ಲಿ ಇರಿಸಿರುವ ಎಲ್ಲಾ ಠೇವಣಿಗಳು ಸುರಕ್ಷಿತವಾಗಿದ್ದು, ಅಮೆರಿಕದ ಬ್ಯಾಂಕುಗಳಂತೆ ಭಾರತೀಯ ಬ್ಯಾಂಕುಗಳು ವಿಫಲವಾಗುತ್ತವೆ ಎಂಬ ಭಯ ಬೇಡ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.ಲೋಕಸಭೆಯಲ್ಲಿ ಅವರು ನೀಡಿರುವ ಹೇಳಿಕೆಯಲ್ಲಿ, ಸರಕಾರ ಮತ್ತು ಕೇಂದ್ರೀಯ ಬ್ಯಾಂಕು ಕೈಗೊಂಡಿರುವ ಕ್ರಮಗಳು ಹಣದಹರಿವಿನ ಕೊರತೆಯನ್ನು ನೀಗಿಸಲು ಸಹಕರಿಸಲಿವೆ ಎಂದು ನುಡಿದರು.ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ದ್ರವ್ಯತೆಯ ಬಿಕ್ಕಟ್ಟಿನ ಪರಿಣಾಮದ ಹಿನ್ನೆಲೆಯಲ್ಲಿ ರಾಷ್ಟ್ರದ ಆರ್ಥಿಕ ಅಭಿವೃದ್ಧಿ ದರವು 2008-09ರಲ್ಲಿ ಶೇ.7.5ಕ್ಕೆ ಕುಸಿಯುವ ಸಾಧ್ಯತೆ ಇರಬಹುದು ಎಂದು ಅವರು ತಿಳಿಸಿದರು.ಆರ್ಥಿಕ ಬಿಕ್ಕಟ್ಟು ರಾಷ್ಟ್ರದ ಆರ್ಥಿಕತೆಯ ಮೇಲೆ ಪರೋಕ್ಷ ಪರಿಣಾಮ ಬೀರಬಹುದು. ಭಾರತದ ಆರ್ಥಿಕತೆಯಲ್ಲಿ ತಾತ್ಕಾಲಿಕ ನಿಧಾನಗತಿಯುಂಟಾಗಲಿದ್ದು, ಇದಕ್ಕೆ ನಾವು ತಯ್ಯಾರಿರಬೇಕು ಎಂದು ಅವರು ಹೇಳಿದರುಆರ್ಬಿಐ ಮತ್ತು ಸರಕಾರವು ಸಾಲದ ಹರಿವನ್ನು ಜಾಗರೂಕತೆಯಿಂದ ವೀಕ್ಷಿಸುತ್ತಿದ್ದು, ನೈಜ ಸಾಲಗಳಿಂದ ಹೆಚ್ಚುವರಿ ದ್ರವ್ಯತೆಯ ಖಚಿತತೆ ಇದೆ ಎಂಬುದಾಗಿ ಪ್ರಧಾನಿ ಹೇಳಿದ್ದಾರೆ. |
|