ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ತಾಕತ್ತಿದ್ದರೆ ಬಂಧಿಸಿ: ರಾಜ್ ಠಾಕ್ರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಕತ್ತಿದ್ದರೆ ಬಂಧಿಸಿ: ರಾಜ್ ಠಾಕ್ರೆ
ನಿಮಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂದು ಮಹಾರಾಷ್ಟ್ರ ನವನಿರ್ಮಾಣ್ ಸೇನಾ ವರಿಷ್ಠ ರಾಜ್ ಠಾಕ್ರೆ ಸೋಮವಾರ ಮಹಾರಾಷ್ಟ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ರೈಲ್ವೆ ಇಲಾಖೆ ಭಾನುವಾರ ನಡೆಸಿದ ಪ್ರವೇಶ ಪರೀಕ್ಷೆಯ ಸಂದರ್ಭದಲ್ಲಿ ಎಂ‌ಎನ್ಎಸ್ ಕಾರ್ಯಕರ್ತರು ಬಿಹಾರಿಗಳು ವಿರುದ್ಧ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ ಠಾಕ್ರೆ ವಿರುದ್ಧ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಈಗಾಗಲೇ ಜಾರಿಯಾಗಿದೆ.

ಅದಕ್ಕೆ ಪ್ರತಿಕ್ರಿಯೆ ನೀಡಿರುವ ಠಾಕ್ರೆ ತಾಕತ್ತಿದ್ದರೆ ನೀವು ನನ್ನ ಬಂಧಿಸಿ ಎಂದು ಇಲ್ಲಿನ ಬಹದ್ದೂರ್‌ಶೇಕ್ ನಾಕಾ ಸಮಾರಂಭಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಒಂದು ವೇಳೆ ನೀವು ನನ್ನ ಬಂಧಿಸಿದ್ದೇ ಹೌದಾದರೆ, ಇಡೀ ಮಹಾರಾಷ್ಟ್ರ ಬೆಂಕಿ ಹತ್ತಿ ಉರಿಯಲಿದೆ ಎಂದು ಗಂಭೀರವಾಗಿ ಎಚ್ಚರಿಸಿದ್ದಾರೆ.

ಅಲ್ಲದೇ ರೈಲ್ವೇ ಇಲಾಖೆಯ ಹುದ್ದೆಗಾಗಿ ಕರೆದಿದ್ದ ಪರೀಕ್ಷೆಗಾಗಿ ಆಗಮಿಸಿದ್ದ ಉತ್ತರ ಭಾರತೀಯರ ವಿರುದ್ಧ ಎಂ‌ಎನ್ಎಸ್ ನಡೆಸಿದ ದಾಳಿಯನ್ನು ಅವರು ಈ ಸಂದರ್ಭದಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ಯಾಂಕ್ ಠೇವಣಿಗಳು ಸುರಕ್ಷಿತ: ಪಿಎಂ ಭರವಸೆ
ನಕ್ಸಲರಿಂದ 7 ಸಿಆರ್‌ಪಿಎಫ್ ಜವಾನರ ಹತ್ಯೆ
ಅಣು ಒಪ್ಪಂದ ಚಾರಿತ್ರಿಕ ಯಶಸ್ಸು: ಪ್ರಣಬ್
ಸಂಸತ್ತಿನಲ್ಲಿ ಕೋಲಾಹಲವೆಬ್ಬಿಸಿದ ಎಂಎನ್ಎಸ್ ದಾಳಿ
ಕೇರಳದಲ್ಲಿ ಹುಲಿ ಸಂತತಿ ವೃದ್ಧಿ
ಚಂದ್ರಯಾನ-1: ಉಡ್ಡಯನಕ್ಕೆ ಕ್ಷಣಗಣನೆ ಆರಂಭ