ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಬಂಧನ
PTI
ರೈಲ್ವೇ ಇಲಾಖೆ ಭಾನುವಾರ ನಡೆಸಿದ್ದ ಪ್ರವೇಶ ಪರೀಕ್ಷೆಯ ಸಂದರ್ಭದಲ್ಲಿ ಎಂಎನ್ಎಸ್ ಕಾರ್ಯಕರ್ತರು ಉತ್ತರ ಭಾರತೀಯರ ಮೇಲೆ ದಾಳಿ ನಡೆಸಿದ ಆರೋಪದಲ್ಲಿ, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಮಂಗಳವಾರ ರತ್ನಗಿರಿಯಲ್ಲಿ ಬಂಧಿಸಲಾಗಿದೆ.

ಸ್ಥಳೀಯರಿಗೆ ಸಾಕಷ್ಟು ಪ್ರಾಧಾನ್ಯತೆ ನೀಡಿಲ್ಲ ಎಂದು ಆರೋಪಿಸಿ ಮುಂಬಯಿಯ 13 ರೈಲ್ವೇ ಮಂಡಳಿ ಪರೀಕ್ಷಾ ಕೇಂದ್ರಗಳ ಮೇಲೆ ಎಂಎನ್ಎಸ್ ಕಾರ್ಯಕರ್ತರು ಭಾನುವಾರ ದಾಳಿ ನಡೆಸಿದ ನಂತರ, ರಾಜ್ ಠಾಕ್ರೆ ಮತ್ತು ಅವರ ಬೆಂಬಲಿಗರ ವಿರುದ್ಧ ವಾಯುವ್ಯ ಉಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಸಕ್ತ, ಪಶ್ಚಿಮ ಮಹಾರಾಷ್ಟ್ರ ಮತ್ತು ಕೊಂಕಣ ವಲಯದ ಪ್ರವಾಸದಲ್ಲಿರುವ ರಾಜ್ ಠಾಕ್ರೆ ಅವರನ್ನು ರತ್ನಗಿರಿ ಜಿಲ್ಲೆಯಲ್ಲಿ ಬಂಧಿಸಲಾಗಿದ್ದು, ಇಂದು ಬಾಂದ್ರಾದ ಸ್ಥಳೀಯ ನ್ಯಾಯಾಲಯಕ್ಕೆ ಠಾಕ್ರೆ ಅವರನ್ನು ಪೊಲೀಸರು ಹಾಜರುಪಡಿಸಲಿದ್ದಾರೆ.

ಈ ಮೊದಲು, ರೈಲ್ವೇ ಇಲಾಖೆಯ ಪರೀಕ್ಷೆಗಾಗಿ ಆಗಮಿಸಿದ್ದ ಉತ್ತರ ಭಾರತೀಯರ ವಿರುದ್ಧದ ಎಂಎನ್ಎಸ್ ದಾಳಿಯನ್ನು ರಾಜ್ ಠಾಕ್ರೆ ಸಮರ್ಥಿಸಿಕೊಂಡಿದ್ದರು, ಅಲ್ಲದೆ, ರಾಜ್ ಠಾಕ್ರೆ ವಿರುದ್ಧ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಜಾರಿಯಾದ ವೇಳೆ, ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂಬುದಾಗಿ ಸವಾಲನ್ನೂ ಹಾಕಿದ್ದರು.

ಜೊತೆಗೆ, ತನ್ನನ್ನು ಬಂಧಿಸಿದಲ್ಲಿ, ಇಡೀ ಮಹಾರಾಷ್ಟ್ರವೇ ಹೊತ್ತಿ ಉರಿಯಲಿದೆ ಎಂಬ ಬೆದರಿಕೆಯನ್ನು ರಾಜ್ ಠಾಕ್ರೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಕತ್ತಿದ್ದರೆ ಬಂಧಿಸಿ: ರಾಜ್ ಠಾಕ್ರೆ
ಬ್ಯಾಂಕ್ ಠೇವಣಿಗಳು ಸುರಕ್ಷಿತ: ಪಿಎಂ ಭರವಸೆ
ನಕ್ಸಲರಿಂದ 7 ಸಿಆರ್‌ಪಿಎಫ್ ಜವಾನರ ಹತ್ಯೆ
ಅಣು ಒಪ್ಪಂದ ಚಾರಿತ್ರಿಕ ಯಶಸ್ಸು: ಪ್ರಣಬ್
ಸಂಸತ್ತಿನಲ್ಲಿ ಕೋಲಾಹಲವೆಬ್ಬಿಸಿದ ಎಂಎನ್ಎಸ್ ದಾಳಿ
ಕೇರಳದಲ್ಲಿ ಹುಲಿ ಸಂತತಿ ವೃದ್ಧಿ