ಮುಂಬೈಯಲ್ಲಿ ನಡೆದ ರೈಲ್ವೇ ಮಂಡಳಿ ಪರೀಕ್ಷೆಯಲ್ಲಿ ಹಾಜರಾಗಲು ಉತ್ತರ ಭಾರತದಿಂದ ಆಗಮಿಸಿದ್ದ ಅಭ್ಯರ್ಥಿಗಳಿಗೆ ತನ್ನ ಕಾರ್ಯಾಕರ್ತರು ಥಳಿಸಿದರು ಎಂದು ಶಿವಸೇನಾ ಸೋಮವಾರ ಹೇಳಿದೆ.
ಪರೀಕ್ಷೆ ಬರೆಯಲು ನಗರಕ್ಕೆ ಆಗಮಿಸಿದವರ ಚಲನವಲವನ್ನು ಶಿವಸೈನಿಕರು ಸೂಕ್ಷ್ಮವಾಗಿ ಪರಿಶೀಲಿಸಿದ್ದು, ಅವರನ್ನು ಥಳಿಸಿರುವುದಾಗಿ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಬರೆಯಲಾಗಿದೆ.
ರೈಲ್ವೆ ಮಂಡಳಿಯು ಹುದ್ದೆಗಳ ಕುರಿತು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಿಲ್ಲ. ಇದರಿಂದಾಗಿ ಮಹಾರಾಷ್ಟ್ರದವರು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ಶಿವಸೇನೆಯ ಕಾರ್ಯಕಾರಿ ಅಧ್ಯಕ್ಷ ಉದ್ಭವ್ ಠಾಕ್ರೆ ಅವರನ್ನು ಉಲ್ಲೇಖಿಸಿ ಹೇಳಲಾಗಿದೆ.
ಪ್ರಸ್ತುತ ಬಂಧನಕ್ಕೀಡಾಗಿರುವ ಎಂಎನ್ಎಸ್ ಮುಖ್ಯಸ್ಥ ರಾಜ್‌ಠಾಕ್ರೆ, ಭಾನುವಾರ ಅಹಮದ್‌ನಗರದಲ್ಲಿ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡುತ್ತಾ, ಉತ್ತರಭಾರತೀಯರ ವಿರುದ್ಧದ ಚಳುವಳಿಯನ್ನು ಸಮರ್ಥಿಸಿಕೊಂಡಿದ್ದರು. ಲಾಲು ಪ್ರಸಾದ್ ಯಾದವ್ ರಾಜ್ ಠಾಕ್ರೆ ಒಬ್ಬ ಮಾನಸಿಕ ಅಸ್ವಸ್ಥ ಎಂಬ ತೀಕ್ಷ್ಣವಾದ ಟೀಕೆಯನ್ನು ಮಾಡಿದ್ದರು. |