ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉಭಯ ಸದನಗಳ ಮುಂದೂಡಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಭಯ ಸದನಗಳ ಮುಂದೂಡಿಕೆ
PTI
ಸಂಸತ್ತಿನ ಉಭಯ ಸದನಗಳು ಸಭೆ ಸೇರುತ್ತಲೇ ಉಂಟಾಗಿರುವ ಗದ್ದಲ, ಕೋಲಾಹಲದ ಹಿನ್ನೆಲೆಯಲ್ಲಿ ಉಭಯ ಸದನಗಳನ್ನು ಮಧ್ಯಾಹ್ನದ ತನಕ ಮುಂದೂಡಲಾಯಿತು.

ಮಹಾರಾಷ್ಟ್ರದಲ್ಲಿ ಉತ್ತರ ಭಾರತೀಯರ ಮೇಲೆ ದಾಳಿ, ಶ್ರೀಲಂಕಾದಲ್ಲಿ ತಮಿಳರ ದುರವಸ್ಥೆ, ಭಾರತ-ಅಮೆರಿಕ ಅಣುಒಪ್ಪಂದ ಈ ಎಲ್ಲ ವಿಚಾರಗಳನ್ನು, ಡಿಎಂಕೆ, ಎನ್‌ಡಿಎ ಹಾಗೂ ಎಡಪಕ್ಷಗಳು ಎತ್ತಿದ್ದು ಯಾರು ಏನು ಹೇಳುತ್ತಿದ್ದಾರೆ ಎಂಬುದು ತಿಳಿಯದಂತೆ ಕೋಲಾಹಲ ಉಂಟಾಯಿತು.

ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಅವರು, ಪ್ರಶ್ನೋತ್ತರ ಅವಧಿಯನ್ನು ಅಮಾನತ್ತುಗೊಳಿಸುವಂತೆ ತಾನು ಐದು ಸೂಚನೆಗಳನ್ನು ಪಡೆದಿರುವುದಾಗಿ ಹೇಳಿದ್ದು, ಒಬ್ಬೊಬ್ಬರಾಗಿ ಮಾತನಾಡುವಂತೆ ಸದಸ್ಯರಿಗೆ ಮಾಡಿದ ವಿನಂತಿ ನೀರಿನಲ್ಲಿ ಹೋಮವಿಟ್ಟಂತಾಯಿತು.

ಸ್ಪೀಕರ್ ಅವರು ಎಂದಿನ ತನ್ನ ಹೆಡ್‌ಮಾಸ್ಟರ್ ಶೈಲಿಯಲ್ಲಿ ಸದಸ್ಯರನ್ನು ಗದರಿದರಾದರೂ ಯಾವುದೇ ಫಲನೀಡಲಿಲ್ಲ. "ನೀವು ನನ್ನನ್ನು ಕುರ್ಚಿಯಲ್ಲಿ(ಸ್ಪೀಕರ್) ಕುಳ್ಳಿರಿಸಿದ್ದೀರಿ. ನಾನಿಲ್ಲಿರಬಯಸುವುದಿಲ್ಲ" ಎಂದು ಚಟರ್ಜಿ ನುಡಿದರು. ಗಲಭೆ ಮುಂದುವರಿದಾಗ ಅವರು ಸಭೆಯನ್ನು 12 ಗಂಟೆಗೆ ಮುಂದೂಡಿದರು.

ರಾಜ್ಯಸಭೆಯಲ್ಲೂ ಇಂತಹುದೇ ದೃಶ್ಯಗಳ ಪುರನರಾವರ್ತನೆಯಾಗಿತ್ತು. ಶ್ರೀಲಂಕಾದ ತಮಿಳರನ್ನು ಉಳಿಸಿ. ಅಲ್ಲಿ ಜನಾಂಗೀಯ ಹತ್ಯೆಯನ್ನು ನಿಲ್ಲಿಸಿ ಎಂದು ಡಿಎಂಕೆ ಸದಸ್ಯರು ಕೂಗುತ್ತಿದ್ದರೆ, ಎಡಪಕ್ಷಗಳ ಸದಸ್ಯರು, 'ರಾಷ್ಟ್ರದ ಸ್ವಾಯತ್ತತೆಯನ್ನು ಅಡಮಾನ ಮಾಡಲಾಗಿದೆ' ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.

ಮಹಾರಾಷ್ಟ್ರದಲ್ಲಿ ಉತ್ತರ ಭಾರತೀಯರ ವಿರುದ್ಧ ದಾಳಿಯನ್ನು ಜೆಡಿ-ಯುವಿನ ಶರದ್ ಯಾದವ್ ಎತ್ತಲು ಬಯಸುತ್ತಿದ್ದರು. ಅವರನ್ನು ಬಿಜೆಪಿಯ ಕೆಲವು ಸದಸ್ಯರು ಬೆಂಬಲಿಸುತ್ತಿದ್ದರು.

ರಾಜ್ಯಸಭಾದ್ಯಕ್ಷ ಹಮೀದ್ ಅನ್ಸಾರಿಯವರು ಶಾಂತರಾಗುವಂತೆ ಪದೇಪದೇ ವಿನಂತಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಅನ್ಸಾರಿಯವರು ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈಯಲ್ಲಿ ಭಾರೀ ಹಿಂಸಾಚಾರ
ಪರೀಕ್ಷೆಗೆ ಬಂದವರಿಗೆ ನಾವು ಬಡಿದೆವು: ಶಿವಸೇನಾ
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಬಂಧನ
ತಾಕತ್ತಿದ್ದರೆ ಬಂಧಿಸಿ: ರಾಜ್ ಠಾಕ್ರೆ
ಬ್ಯಾಂಕ್ ಠೇವಣಿಗಳು ಸುರಕ್ಷಿತ: ಪಿಎಂ ಭರವಸೆ
ನಕ್ಸಲರಿಂದ 7 ಸಿಆರ್‌ಪಿಎಫ್ ಜವಾನರ ಹತ್ಯೆ