ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಿಜೆಪಿ ಸಂಸದ ಕತಾರ ಲೋಕಸಭೆಯಿಂದ ಉಚ್ಚಾಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ಸಂಸದ ಕತಾರ ಲೋಕಸಭೆಯಿಂದ ಉಚ್ಚಾಟನೆ
ಕುಖ್ಯಾತ ಮಾನವ ಕಳ್ಳಸಾಗಣಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಸಿಲುಕಿದ್ದ ಬಿಜೆಪಿ ಸಂಸದ ಬಾಬುಬಾಯ್ ಕತಾರ ಅವರನ್ನು ಮಂಗಳವಾರ ಸಂಸತ್ತಿನಿಂದ ಉಚ್ಚಾಟಿಸಲಾಗಿದೆ. ಇದರಿಂದಾಗಿ ಪ್ರಸ್ತುತ ಅವಧಿಯಲ್ಲಿ ಉಚ್ಚಾಟನೆಗೊಂಡ ಸದಸ್ಯರ ಸಂಖ್ಯೆ 11ಕ್ಕೇರಿದೆ.

ದೊಹಡ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕತಾರ ಅವರನ್ನು ಉಚ್ಚಾಟಿಸುವ ಮಸೂದೆಯನ್ನು ಪಾಸುಮಾಡಿದ ಬಳಿಕ ಅವರಿಗೆ ಸಂಸತ್ತಿನಿಂದ ಹೊರತೆರಳುವ ದಾರಿ ತೋರಿಸಲಾಯಿತು. ಲೋಸಭಾ ಸಮಿತಿಯು 'ಗಂಭೀರ ದುರ್ವತನೆ'ಯ ಹಿನ್ನೆಲೆಯಲ್ಲಿ ಅವರನ್ನು ವಜಾ ಮಾಡುವಂತೆ ಮಾಡಿರುವ ಶಿಫಾರಸ್ಸಿನನ್ವಯ ಈ ಕ್ರಮಕೈಗೊಳ್ಳಲಾಗಿದೆ.

ಲೋಕಸಭಾ ನಾಯಕ ಪ್ರಣಬ್ ಮುಖರ್ಜಿ ಅವರು ಈ ಕುರಿತು ಮಸೂದೆಯನ್ನು ಮಂಡಿಸಿದ್ದು, ಅದರಲ್ಲಿ "ಕತಾರ ಅವರು ಗಂಭೀರ ದುರ್ವರ್ತನೆ ತೋರಿದ್ದು, ಇದು ಎಲ್ಲಾ ಶಾಸನಸಭಾ ಸದಸ್ಯರ ಪ್ರತಿಷ್ಠೆ ಹಾಗೂ ಗೌರವಕ್ಕೆ ಧಕ್ಕೆಯುಂಟುಮಾಡಿದೆ" ಎಂದು ಹೇಳಲಾಗಿತ್ತು.

ಪ್ರಣಬ್ ಮುಖರ್ಜಿ ಹಾಗೂ ಲೋಕ ಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಅವರು, ಸದಸ್ಯರ ಉಚ್ಟಾಟನೆಯು ಅತ್ಯಂತ ಅಸಂತೋಷದ ಕೆಲಸ, ಆದರೆ ಸಂಸತ್ತಿನ ಘನತೆಯನ್ನು ಕಾಪಾಡುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಕತಾರ ಅವರು ಓರ್ವ ಮಹಿಳೆ ಹಾಗೂ ಒಬ್ಬ ಬಾಲಕನನ್ನು ತನ್ನ ಪತ್ನಿ ಹಾಗೂ ಪುತ್ರನ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ಕರೆದೊಯ್ಯಲು ಯತ್ನಿಸಿದ್ದ ವೇಳೆ ದೆಹಲಿ ವಿಮಾನ ನಿಲ್ದಾಣದಲ್ಲಿ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಸಿಕ್ಕಿಬಿದ್ದಿದ್ದರು.

ಈ ಕುರಿತು ತನಿಖೆ ನಡೆಸಲು ಸ್ಪೀಕರ್ ಅವರು ಕಾಂಗ್ರೆಸ್ ಸಂಸದ ವಿ.ಕಿಶೋರ್ ಚಂದ್ರ ದೇವ್ ಅವರ ನೇತೃತ್ವದ ಸಮಿತಿಗೆ ಸೂಚನೆ ನೀಡಿದ್ದರು.

ತನಿಖೆ ನಡೆಸಿದ ಸಮಿತಿಯು, ಕತಾರ ಅವರು ಮಾನವ ಕಳ್ಳಸಾಗಣೆಯ ಉದ್ದೇಶದಿಂದ ತನ್ನ ಪತ್ನಿಯ ಹೆಸರಿನಲ್ಲಿ ಖೊಟ್ಟಿ ಪಾಸ್‍ಪೋರ್ಟ್ ಮೂಲಕ ‌ಮಹಿಳೆ ಮತ್ತು ಬಾಲಕನನ್ನು ವಿದೇಶಕ್ಕೆ ಕರೆದೊಯ್ಯಲು ಮುಂದಾಗಿದ್ದು, ಇವರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡುವ ಅಗತ್ಯವಿದೆ ಎಂದು ಹೇಳಿತ್ತು.

ಸಮಿತಿಯ ಮುಂದೆ ಹಾಜರಾಗುವಂತೆ ಕತಾರ‌ರಿಗೆ ಮೂರು ಅವಕಾಶಗಳನ್ನು ನೀಡಲಾಗಿದ್ದರೂ, ಆರೋಗ್ಯದ ಕಾರಣ ನೀಡಿ ಅವರು ಸಮಿತಿಯ ಮುಂದೆ ಹಾಜರಾಗಿರಲಿಲ್ಲ.

ಏತನ್ಮಧ್ಯೆ, ಬಿಜೆಪಿಯು ಇದೀಗಾಗಲೇ ಕತಾರರನ್ನು ಪಕ್ಷದಿಂದ ಉಚ್ಚಾಟಿಸಿದೆ. ಜುಲೈ 22ರಂದು ನಡೆದ ವಿಶ್ವಾಸ ಮತಯಾಚನೆ ವೇಳೆ ಕತಾರ, ಪಕ್ಷಕ್ಕೆ ವಿರುದ್ಧವಾಗಿ ಯುಪಿಎ ಪರವಾಗಿ ಮತಚಲಾಯಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಭಯ ಸದನಗಳ ಮುಂದೂಡಿಕೆ
ಮುಂಬೈಯಲ್ಲಿ ಭಾರೀ ಹಿಂಸಾಚಾರ
ಪರೀಕ್ಷೆಗೆ ಬಂದವರಿಗೆ ನಾವು ಬಡಿದೆವು: ಶಿವಸೇನಾ
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಬಂಧನ
ತಾಕತ್ತಿದ್ದರೆ ಬಂಧಿಸಿ: ರಾಜ್ ಠಾಕ್ರೆ
ಬ್ಯಾಂಕ್ ಠೇವಣಿಗಳು ಸುರಕ್ಷಿತ: ಪಿಎಂ ಭರವಸೆ