ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಜ್‌ಠಾಕ್ರೆಗೆ ನ.4ರ ತನಕ ನ್ಯಾಯಾಂಗ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್‌ಠಾಕ್ರೆಗೆ ನ.4ರ ತನಕ ನ್ಯಾಯಾಂಗ ಬಂಧನ
PTI
ಮಂಗಳವಾರ ಮುಂಜಾನೆ ಬಂಧನಕ್ಕೀಡಾಗಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾದ ಮುಖ್ಯಸ್ಥ ರಾಜ್ ಠಾಕ್ರೆ ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿರುವ ಮುಂಬೈಯ ವಿಚಾರಣಾ ನ್ಯಾಯಾಲಯವು ಅವರಿಗೆ ನವೆಂಬರ್ ನಾಲ್ಕರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.

ರೈಲ್ವೆ ನೇಮಕಾತಿ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿದ್ದ ಉತ್ತರ ಭಾರತೀಯ ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಪಾಲ್ಗೊಳ್ಳುವಿಕೆಯ ಆಪಾದನೆಯಡಿಯಲ್ಲಿ ರಾಜ್ ಠಾಕ್ರೆ ಬಂಧನಕ್ಕೀಡಾಗಿದ್ದಾರೆ. ಅವರನ್ನು ಬಾಂದ್ರಾ ಕೋರ್ಟಿನಲ್ಲಿ ಮಧ್ಯಾಹ್ನದ ಬಳಿಕ ಹಾಜರು ಪಡಿಸಲಾಯಿತು.

ರತ್ನಗಿರಿಯಲ್ಲಿ ಠಾಕ್ರೆ ಬಂಧನಕ್ಕೀಡಾಗಿದ್ದು, ಮುಂಬೈಯಲ್ಲಿ ಯಾವುದೇ ಅನಾಹುತಕಾರಿ ಘಟನೆಗಳು ನಡೆಯದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಲುಂದ್, ಥಾಣೆ, ನವಿಮುಂಬೈ, ಬೊರಿವಿಲಿ, ಪರೇಲ್ ಮತ್ತು ಟಾರ್ಡಿಯೋ ಪ್ರದೇಶಗಳಲ್ಲಿ ಕಲ್ಲುತೂರಾಟ ಘಟನೆಗಳು ಸಂಭವಿಸಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಸುಮಾರು 20 ಸಾವಿರ ರಾಜ್ಯ ಮೀಸಲು ಪಡೆ ಹಾಗೂ ಸಿಆರ್‌ಪಿಎಫ್ ಜವಾನರನ್ನು ನೇಮಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ ಠಾಕ್ರೆಯವರನ್ನು ಹಾಜರು ಪಡಿಸಿರುವ ಬಾಂದ್ರಾ ನ್ಯಾಯಾಲಯದ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ಎಂಎನ್ಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಛಾರ್ಜ್ ನಡೆಸಿದ್ದಾರೆ. ಸುಮಾರು 150 ಪ್ರತಿಭಟನಾಕಾರರನ್ನು ಬಂಧಿಸಿ ನ್ಯಾಯಾಲಯದ ಆವರಣದಿಂದ ಕರೆದೊಯ್ಯಲಾಗಿದೆ.

ಮಾಧ್ಯಮ ವರದಿಗಾರರು ಹಾಗೂ ಎಂಎನ್ಎಸ್ ಕಾರ್ಯಕರ್ತರು ನ್ಯಾಯಾಲಯದ ಆವರಣಕ್ಕೆ ತೆರಳದಂತೆ ನಿಷೇಧಿಸಿದ್ದು, ಈ ಪ್ರಕ್ರಿಯೆ ವೇಳೆಗೆ ಕೆಲವು ಹಿರಿಯ ಪತ್ರಕರ್ತರೊಡನೆಯೂ ಪೊಲೀಸರು ಒರಟಾಗಿ ವರ್ತಿಸಿದ್ದಾರೆ ಎಂದು ವರದಿ ತಿಳಿಸಿದೆ.

ಕಠಿಣ ಶಿಕ್ಷೆಗೆ ಒತ್ತಾಯ
ರಾಜ್ ಠಾಕ್ರೆ ಅವರನ್ನು ಬಂಧಿಸಿದರೆ ಮಾತ್ರ ಸಾಲದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಲವು ಪಕ್ಷಗಳ ನಾಯಕರು ಒತ್ತಾಯಿಸಿದ್ದಾರೆ.

ಠಾಕ್ರೆ ವಿರುದ್ಧ ಭಾರತೀಯ ದಂಡ ಸಂಹಿತೆ 153, 353, 336, 425 ಮತ್ತು 427ರ ಸೆಕ್ಷನ್‌ಗಳ ಪ್ರಕಾರ ಆರೋಪಗಳನ್ನು ಹೊರಿಸಲಾಗಿದೆ.

ತಾಕತ್ತಿದ್ದರೆ ಬಂಧಿಸಿ
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಉತ್ತರ ಭಾರತೀಯ ಅಭ್ಯರ್ಥಿಗಳ ಮೇಲೆ ನಡೆಸಿರುವ ಹಲ್ಲೆ ಪ್ರಕರಣದ ಹಿನ್ನಲೆಯಲ್ಲಿ, 'ತಾಕತ್ತಿದ್ದರೆ ನನ್ನನ್ನು ಬಂಧಿಸಿ' ಎಂದು ಮಹಾರಾಷ್ಟ್ರ ಸರಕಾರಕ್ಕೆ ಸವಾಲು ಹಾಕಿದ್ದರು. ತನ್ನನ್ನು ಬಂಧಿಸಿದರೆ ಇಡಿಯ ಮಹಾರಾಷ್ಟ್ರ ಹೊತ್ತಿ ಉರಿಯಲಿದೆ ಎಂಬ ಬೆದರಿಕೆಯನ್ನೂ ಹಾಕಿದ್ದರು. ಇದಲ್ಲದೆ ಪೊಲೀಸರು ಮತ್ತು ಕಾಂಗ್ರೆಸ್ ಬೆನ್ನುಹುರಿ ಇಲ್ಲದವರು ಎಂದೂ ಠಾಕ್ರೆ ಸೋಮವಾರ ಟೀಕಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂತ್ರಸ್ತರ ಮುಖದಲ್ಲಿ ಸಂತಸದ ನಗೆಮಿಂಚು
ಬಿಜೆಪಿ ಸಂಸದ ಕತಾರ ಲೋಕಸಭೆಯಿಂದ ಉಚ್ಚಾಟನೆ
ಉಭಯ ಸದನಗಳ ಮುಂದೂಡಿಕೆ
ಮುಂಬೈಯಲ್ಲಿ ಭಾರೀ ಹಿಂಸಾಚಾರ
ಪರೀಕ್ಷೆಗೆ ಬಂದವರಿಗೆ ನಾವು ಬಡಿದೆವು: ಶಿವಸೇನಾ
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಬಂಧನ