ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಇಂಫಾಲ್ ಬಾಂಬ್ ಸ್ಫೋಟಕ್ಕೆ 10 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಫಾಲ್ ಬಾಂಬ್ ಸ್ಫೋಟಕ್ಕೆ 10 ಬಲಿ
ಮಣಿಪುರದ(ಇಂಫಾಲ್) ಕುಮಾನ್ ಲಾಪಾಕ್ ಕ್ರೀಡಾಂಗಣದ ಸಮೀಪ ಮಂಗಳವಾರ ರಾತ್ರಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಸುಮಾರು 10ಮಂದಿ ಬಲಿಯಾಗಿದ್ದು, 25ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಐಇಡಿ(ಇಂಪ್ರೂವೈಸ್‌‌ಡ್ ಎಕ್ಸ್‌ಪ್ಲೋಸಿವ್ ಡಿವೈಸ್)ಅನ್ನು ಉಪಯೋಗಿಸಿ ಬಾಂಬ್ ಅನ್ನು ಸ್ಫೋಟಿಸಿರುವುದಾಗಿ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದ್ದು, ಬಾಂಬ್ ಅನ್ನು ಲೂನಾ ಮೊಪೆಡ್ ಬಳಿ ಇರಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.

ಸ್ಫೋಟದಲ್ಲಿ ಗಾಯಗೊಂಡವರನ್ನು ಇಂಫಾಲ್‌ನ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯಲ್ಲಿ ಕನಿಷ್ಠ ಹತ್ತು ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿ ವೈ.ಜೊಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಆದರೆ ನಿಖರವಾಗಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ಖಚಿತಪಡಿಸಿಲ್ಲ, ಭಾನುವಾರವಷ್ಟೇ ಮುಖ್ಯಮಂತ್ರಿ ಇಬೋಬಿ ಸಿಂಗ್ ಅವರ ನಿವಾಸದ ಸಮೀಪ ಬಾಂಬ್ ಸ್ಫೋಟಗೊಂಡ ಬೆನ್ನಲ್ಲೇ ಈ ಸ್ಫೋಟ ಸಂಭವಿಸಿದೆ.

ಮುಖ್ಯಮಂತ್ರಿಗಳ ನಿವಾಸದ ಸಮೀಪ ಸಂಭವಿಸಿದ ಸ್ಫೋಟಕ್ಕೆ ತಾನೇ ಹೊಣೆ ಎಂದು ಪೀಪಲ್ಸ್ ರೆವಲ್ಯೂಶನರಿ ಪಾರ್ಟಿ ಆಫ್ ಕಾಂಗ್ಲೆಪಾಕ್ (ಪಿಆರ್‌ಇಪಿಎಕೆ) ತಿಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರ ಹಿಟ್‌ಲಿಸ್ಟ್‌ನಲ್ಲಿ ಅಣುಸ್ಥಾವರ, ಬಂದರು
ರಾಜ್‌ಠಾಕ್ರೆಗೆ ನ.4ರ ತನಕ ನ್ಯಾಯಾಂಗ ಬಂಧನ
ಸಂತ್ರಸ್ತರ ಮುಖದಲ್ಲಿ ಸಂತಸದ ನಗೆಮಿಂಚು
ಬಿಜೆಪಿ ಸಂಸದ ಕತಾರ ಲೋಕಸಭೆಯಿಂದ ಉಚ್ಚಾಟನೆ
ಉಭಯ ಸದನಗಳ ಮುಂದೂಡಿಕೆ
ಮುಂಬೈಯಲ್ಲಿ ಭಾರೀ ಹಿಂಸಾಚಾರ